ಕಮ್ಯುನಿಸ್ಟ್ ಆಡಳಿತ ರಾಜ್ಯಗಳಲ್ಲೇ ಕಾರ್ಮಿಕರ ಶೋಷಣೆ
Team Udayavani, Jan 27, 2021, 4:17 PM IST
ಮೈಸೂರು: ಕಮ್ಯೂನಿಸ್ಟ್ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿಯೇ ಕಾರ್ಮಿಕರ ಮೇಲೆ ಹೆಚ್ಚು ಶೋಷಣೆಯಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮದುಸೂಧನ್ ಹೇಳಿದರು.
ಜೆ.ಕೆ.ಟೈರ್ ಲಿಮಿಟೆಡ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಮಂಗಳವಾರ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ದತ್ತೋಪಂತ್ ಠೇಂಗಡಿ ಅವರ ಜನ್ಮ ಶತಾಬ್ಧಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಮಿಕರ ಸಮಾವೇಶಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಲ್ಮಾಕ್ಸ್‌ನಿಂದ ಪ್ರಭಾವಿತವಾಗಿ ರಷ್ಯಾ ಮತ್ತು ಚೀನಾದಿಂದ ದೇಶಕ್ಕೆ ಬಂದ ಕಮ್ಯೂನಿಸ್ಟ್ ಸಂಘಟನೆ ಕಾರ್ಮಿಕರ ಹಿತಕಾಯುವುದಾಗಿ ಹೇಳಿತ್ತು. ಕಾರ್ಮಿಕರ ಹೋರಾಟದ ಮೂಲಕ ಕಾರ್ಮಿಕರಿಂದ ಅಧಿಕಾರಕ್ಕೆ ಬಂದ ರಾಜ್ಯಗಳಾದ ಪಶ್ಚಿಮಬಂಗಾಳ, ಕೇರಳದಲ್ಲಿಯೇ ಕಾರ್ಮಿಕರ ಶೋಷಣೆ ಹೆಚ್ಚಾಗಿವೆ. ಕಾರ್ಮಿಕರ ಹಕ್ಕುಗಳ ಧಮನ ಇಂತಹ ರಾಜ್ಯಗಳ ಲ್ಲಿಯೇ ನಡೆಯುತ್ತಿದೆ ಎಂದು ಆರೋಪಿಸಿದರು.
ಮೈಸೂರಿನಲ್ಲಿಯೂ ಕೆ.ಆರ್.ಮಿಲ್, ಜಾವಾ, ಫಾಲ್ಕನ್ ಟೈರ್ ಸೇರಿದಂತೆ ದೊಡ್ಡ ಕಾರ್ಖಾನೆಗಳೇ ಕಾರ್ಮಿಕರು-ಆಡಳಿತ ಮಂಡಳಿ ಸಂಘರ್ಷದಿಂದ ಮುಚ್ಚಿ ಹೋಗಿವೆ. ಇದರಿಂದ ಸಾವಿರಾರು ಕಾರ್ಮಿ ಕರು ಬೀದಿಪಾಲಾಗಿದ್ದು, ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಸಂಘರ್ಷ ಬಿಟ್ಟು ಮಾತುಕತೆ ಮೂಲಕ ನಿಮ್ಮ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರೆ ಅದಕ್ಕೆ ಕೊಂಡಿಯಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಕೋವಿಡ್ ನಿಭಾಯಿಸುವಲ್ಲಿ ಡಿಎಂಎಫ್ ಅನುದಾನ ಬಳಕೆ
ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಆರ್. ರಘು, ಮಜ್ದೂರ್ ಸಂಘದ ಪ್ರಾಂತೀಯ ಅಧ್ಯಕ್ಷ ಸೂರ್ಯನಾರಾಯಣ, ಶಾಸಕ ಎಲ್. ನಾಗೇಂದ್ರ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಟ .ಎಸ್. ಶ್ರೀವತ್ಸ, ಜೆ.ಕೆ.ಟೈರ್ (ವಿಕ್ರಾಂತ್) ಲಿಮಿಟೆಡ್ ನ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಗೌರವಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರ್, ಹಿರಿಯ ಕಾರ್ಮಿಕ ಮುಖಂಡ ಟಿ.ಕೆ.ಸದಾಶಿವ, ಮಜ್ದೂರ್ ಸಂಘದ (ಬಿಎಂಎಸ್) ರಾಜ್ಯಾ ಧ್ಯಕ್ಷ ವಿಶ್ವನಾಥ ಶೆಟ್ಟಿ, ಪದಾಧಿಕಾರಿಗಳಾದ ಶಂಕರ್ ಸುಲೇಗಾಂ, ಪ್ರಕಾಶ್, ಇಂದ್ರೇಶ್, ಎಚ್.ಎನ್.ಸದಾಶಿವ, ಬಾಲಕೃಷ್ಣ, ಶಾಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.