ಆನೆಗಳ ದಾಳಿಗೆ ತತ್ತರಿಸಿದ ರೈತ


Team Udayavani, Feb 16, 2017, 12:58 PM IST

mys5.jpg

ಎಚ್‌.ಡಿ.ಕೋಟೆ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ರೈತರ ಬೆಳೆ ನಾಶಪಡಿಸುವ ಕಾಡಾನೆಗಳ ದಾಳಿ ತಪ್ಪಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆ ಏನೆಲ್ಲಾ ತಂತ್ರಗಾರಿಕೆ ರೂಪಿಸುತ್ತಿದೆಯಾದರೂ ಆನೆ ನಡೆದು ಬಂದದ್ದೇ ದಾರಿ ಎನ್ನುವ ಸ್ಥಿತಿ ತಾಲೂಕಿನಲ್ಲಿದೆ.

ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷದ ಫ‌ಲವಾಗಿ ಪ್ರತಿದಿನ ಒಂದಲ್ಲಾ ಒಂದು ಕಡೆ ಅವಗಡಗಳು ಸಂಭವಿಸುತ್ತಲೇ ಇರುತ್ತವೆ. ಅನಾಹುತ ತಪ್ಪಿಸುವ ಸಲುವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ರೂಪಿಸುವ ತಂತ್ರಗಾರಿಕೆ ಕಾಡಾನೆಗಳ ಮುಂದೆ ಶೂನ್ಯವಾಗುತ್ತಿದೆ.

ರೈಲ್ವೆ ಕಂಬಿ ಅಳವಡಿಕೆ: ಕಳೆದ ಸಾಲಿನಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಆಹಾರ ಸೇರಿದಂತೆ ನೀರಿಗಾಗಿ ವನ್ಯಜೀವಿಗಳು ಅರಣ್ಯದಿಂದ ಹೊರಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಮಳೆಯ ಅಭಾವವಿದ್ದರೂ ನೀರಾವರಿ ಮೂಲಕ ಅಲ್ಲೋ ಇಲ್ಲೋ ಅಲ್ಪಸ್ವಲ್ಪ ಬೆಳೆ ಬೆಳೆಯುವ ರೈತರು ಕಾಡಾನೆಗಳ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ.

ಹಾಗಾಗಿ ನಿರಂತರವಾಗಿ ಅರಣ್ಯ ಮಾರ್ಗದಿಂದ ಹೊರ ಬರುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಅಳವಡಿಸಿದೆಯಾದರೂ ಕಾಡಾನೆಗಳು ಮಾತ್ರ ರೈಲ್ವೆ ಕಂಬಿಯಿಂದ ನುಸುಳಿಕೊಂಡು ಹೊರಬರುತ್ತವೆ. ವರ್ಷ ಪೂರ್ತಿ ಶ್ರಮವಹಿಸಿ ಬೆಳೆ ಬೆಳೆ ಕೆಲವೇ ಕ್ಷಣಗಳಲ್ಲಿ ಕಾಡಾನೆಗಳ ಕಾಲು¤ಳಿತಕ್ಕೆ ಸಿಲುಕಿ ನಾಶವಾಗುವುದರಿಂದ ಬೇಸೆತ್ತ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ವಾಗ್ವಾದಕ್ಕೀಳಿಯುತ್ತಿದ್ದಾರೆ.

ಕಂದಕವೂ ನಿಷ್ಪ್ರಯೋಜಕ: ಕಾಡಾನೆಗಳ ಮಾರ್ಗಗಳನ್ನು ಗುರುತಿಸುವ ಅರಣ್ಯ ಇಲಾಖೆ ಕಂದಕಗಳನ್ನು ತೆಗೆದಿದೆ. ಕಂದಕಗಳಿಗೆ ಕಾಲುಗಳಿಂದ ಮಣ್ಣು ಭರ್ತಿ ಮಾಡುವ ಕಾಡಾನೆಗಳು ಸಲೀಸಾಗಿ ನಾಡಿಗೆ ಬರುತ್ತಿವೆ. ಕಂದಕಗಳು ಆನೆಗಳಿಗೆ ಕೇರಿಲ್ಲದಂತಾಗಿದೆ. ಕಾನೂನು ಕಟ್ಟಲೆಗಳ ನಿರ್ಬಂಧ ಇಲ್ಲದೆ ಸ್ವತ್ಛಂದವಾಗಿ ವಿಹರಿಸುವ ವನ್ಯಜೀವಿಗಳು ಸ್ವತಂತ್ರವಾಗಿ ಸಂಚರಿಸುವ ವನ್ಯ ಜೀವಿಗಳಿಗೆ ಯಾರ ಅಡೆ ತಡೆ ಇಲ್ಲ. ಹಾಗಾಗಿ ವನ್ಯಜೀವಿಗಳು ಹಾಗೂ ಮಾನವರ ಸಂಘರ್ಷಗಳು ನಿರಂತರವಾಗಿದೆ. ಕಾಡುಪ್ರಾಣಿಗಳು ಸಂಪೂರ್ಣವಾಗಿ ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಇಲ್ಲವೆ ಸರ್ಕಾರ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನಕ್ಕೆ ಸೇರಿದ ಎಚ್‌.ಡಿ. ಕೋಟೆ ತಾಲೂಕು ದಮ್ಮನ ಕಟ್ಟೆ ಅರಣ್ಯ ಪ್ರದೇಶದಿಂದ ಕಾಡಾನೆಗಳು ಹೊರಬಾರದಂತೆ ದಮ್ಮನಕಟ್ಟೆ ಮಾರ್ಗದಿಂದ ತಾರಕ ಹಾಗೂ ಉದೂºರು ತನಕ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ದಮ್ಮನ ಕಟ್ಟೆಯಿಂದ ಉದೂºರು ತನಕ ಬ್ಯಾರಿಕೇಡ್‌ ನಿರ್ಮಾಣಕ್ಕೆ ಕೇವಲ 300 ಮೀಟರ್‌ ಕಾಮಗಾರಿ ಬಾಕಿ ಉಳಿದಿದೆ. ಕಾಮಗಾರಿ ಪೂರ್ಣಗೊಂಡರೆ ಆನೆಗಳು ಹೊರಬರುವ ಸಾಧ್ಯತೆ ತೀರ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಆನೆ ಕಂದಕಗಳನ್ನು ತೆಗೆದಿರು ವುದರಿಂದ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳ ಉಪಟಳ ಬಹುತೇಕ ಕಡಿಮೆ ಯಾಗುವುದರಲ್ಲಿ ಸಂದೇಶ ಇಲ್ಲ.
-ಬೆಳ್ಳಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ನಮ್ಮದು ಕಾಡಂಚಿನ ಗ್ರಾಮ. ಇಡೀ ವರ್ಷ ಶ್ರಮವಹಿಸಿ ಮಳೆಯನ್ನಾಧರಿಸಿ ಬೇಸಾಯ ಮಾಡುತ್ತೇವೆ. ಇನ್ನೇನು ಬೆಳೆ ಕೈಸೇರಬೇಕು ಅನ್ನುವಷ್ಟರಲ್ಲಿ ಕಾಡಾನೆ, ಹಂದಿಗಳ ದಾಳಿಗೆ ಸಿಲುಕಿ ಅಪಾರ ಪ್ರಮಾಣದ ಬೆಳೆ ಹಾನಿಯಾಗು ತ್ತಿದೆ. ಬೆಳೆ ಹಾನಿಯಾದರೆ ಸರ್ಕಾರ ಕೊಡುವ ಪರಿಹಾರ ಅಲ್ಪಸ್ವಲ್ಪ ಮಾತ್ರ. ಅದೂ 2-3 ವರ್ಷಗಳ ಬಳಿಕ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳು ಗ್ರಾಮಕ್ಕೆ ಬರದಂತೆ ಎಚ್ಚರವಹಿಸುವುದು ಸೂಕ್ತ.
-ರವಿಕುಮಾರ್‌, ಜಕ್ಕಹಳ್ಳಿ ಕಾಲೋನಿ ರೈತ

* ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.