ರೈತರ ಉತ್ಪನ್ನ ಮಾರಾಟ 4 ತಾಸಿನಲ್ಲಿ ಸಾಧ್ಯವೇ?
ಎಪಿಎಂಸಿಗೆ 8 ಗಂಟೆ ಬಳಿಕ ತರಕಾರಿ ತಂದರೆ ಗಂಟು ಕೂಡ ಸಿಗದು
Team Udayavani, May 1, 2021, 2:08 PM IST
ಮೈಸೂರು: ಕೋವಿಡ್ 2ನೇ ಅಲೆಗೆ ಎಲ್ಲ ಕ್ಷೇತ್ರಗಳಂತೆ ಕೃಷಿ ಕ್ಷೇತ್ರವೂ ಆರ್ಥಿಕ ನಷ್ಟ ಅನುಭವಿಸಿದ್ದು, ತರಕಾರಿ, ಹೂ ಹಾಗೂ ಹಣ್ಣು ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೋವಿಡ್ 2ನೇ ಅಲೆ ಹಿನ್ನೆಲೆ ಸರ್ಕಾರ ವಿಧಿಸಿದ ಕರ್ಫ್ಯೂನಿಂದಾಗಿ ಜಿಲ್ಲೆಯ ಎಲ್ಲ ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳು ಬೆಳಗ್ಗೆ 6ರಿಂದ 10ರವರೆಗೆಮಾತ್ರ ವ್ಯಾಪಾರ ವಹಿವಾಟು ನಡೆಸಲುಅವಕಾಶ ನೀಡಲಾಗಿದೆ. ಈ ನಾಲ್ಕು ತಾಸು ಅವಧಿಯಲ್ಲಿ ರೈತ ತಾನು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು 8 ಗಂಟೆ ಯೊಳಗೆ ಮಾರುಕಟ್ಟೆಗೆ ತರಬೇಕಿದೆ.
ಇದರಿಂದ ಖರೀದಿ, ಸಾಗಟಕ್ಕೆ ಹೆಚ್ಚು ಸಮಯವಿಲ್ಲದ್ದರಿಂದ ವ್ಯಾಪಾರಿಗಳು ತರಕಾರಿ ಖರೀದಿಸಲು ನಿರುತ್ಸಾಹ ತೋರಿರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಅವ್ಯವಸ್ಥೆಯಿಂದ ಕಳೆದವರ್ಷ ಲಾಕ್‌ಡೌನ್ ಅವಧಿಯಲ್ಲಾದಂತೆ ಈಬಾರಿಯೂ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತಮಾರುಕಟ್ಟೆ ವ್ಯವಸ್ಥೆ ಹಾಗೂ ಬೇಡಿಕೆ ಲಭ್ಯವಾಗದೆಜಮೀನಿನಲ್ಲೇ ಕೊಳೆಯು ವಂತಾಗಿದೆ.
ಅರ್ಧದಷ್ಟು ತರಕಾರಿ ಬೇಡಿಕೆ ಕುಸಿತ: ಕರ್ಫ್ಯೂ ವಿಧಿಸುವ ಮೊದಲು ಮಾಮೂಲಿ ದಿನಗಳಲ್ಲಿ 1,500ಟನ್‌ಗೂ ಹೆಚ್ಚು ತರಕಾರಿ ಜಿಲ್ಲೆಯ ಎಲ್ಲ ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳಿಗೆ ಬರುತ್ತಿತ್ತು.ಆದರೆ, ಕರ್ಫ್ಯೂ ನಂತರ 700 ಟನ್‌ನಷ್ಟು ಮಾತ್ರತರಕಾರಿ ಎಪಿಎಂಸಿಗೆ ಬರುತ್ತಿದೆಯಾದರೂ, ಅದನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ತರಕಾರಿ ಹರಾಜು ಮಾಡಿದ ದಲ್ಲಾಳಿಗಳು ವ್ಯಾಪಾರಿಗಳಿಲ್ಲದೆ, ಕೃಷಿ ಉತ್ಪನ್ನವನ್ನು ವಾಪಸ್ ಕೊಂಡೊಯ್ಯುವಂತೆ ರೈತರಿಗೆ ಹೇಳುತ್ತಿದ್ದಾರೆ. ಇದರಿಂದ ತರಕಾರಿ, ಹಣ್ಣು ಕೊಯ್ಲು ಮಾಡುವುದು, ಸಾಗಾಟಕ್ಕೆ ಸಾಕಷ್ಟು ಹಣ ವಿನಿಯೋಗಿಸಿದ್ದ ರೈತ ಮತ್ತೆ ಮನೆಗೆ ಕೊಂಡೊಯ್ಯಲು ಮತ್ತಷ್ಟು ಹಣ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಬೆಳವಣಿಗೆ ಹಾಗೂಬೆಲೆ ಕಡಿಮೆಯಿಂದ ಬೇಸತ್ತ ರೈತರು ತಾವು ಬೆಳೆದಬೆಳೆಯನ್ನು ಕಟಾವು ಮಾಡದೇ ತಮ್ಮ ಕೃಷಿ ಭೂಮಿಯಲ್ಲೇ ಕೊಳೆಯಲು ಬಿಡುವಂತಾಗಿದೆ.
ಕುಸಿದ ಬೇಡಿಕೆ: ಎಲ್ಲೆಡೆ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೋಟೆಲ್, ಚಾಟ್ ಸೆಂಟರ್ ಗಳು ಬಂದ್ ಆಗಿರುವುದು, ಮದುವೆ, ಸಭೆ-ಸಮಾರಂಭಗಳು ಹೆಚ್ಚು ನಡೆಯದೇ ಇರುವುದರಿಂದ ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ. ಜೊತೆಗೆ ಅಂತಾರಾಜ್ಯ ಸಂಚಾರಕ್ಕೆ ತಡೆಯೊಡ್ಡಿರುವುದರಿಂದ ಕೇರಳಕ್ಕೆಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ತರಕಾರಿ ಇಲ್ಲೇಉಳಿಯುವಂತಾಗಿದೆ. ಪರಿಣಾಮ ಮಾರುಕಟ್ಟೆಯಲ್ಲಿತರಕಾರಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಪಾತಾಳಕ್ಕಿಳಿದಿದೆ.
ಜಿಲ್ಲೆಯ ಎಲ್ಲಾ ತಾಲೂಕು ಎಪಿಎಂಸಿ ಹಾಗೂತರಕಾರಿ ಮರುಕಟ್ಟೆ ಸೇರಿದಂತೆ ನಗರದ ಎಪಿಎಂಸಿಯಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚು ಟನ್ ತರಕಾರಿ ವಹಿವಾಟು ನಡೆಯುತ್ತಿತ್ತು. ಆದರೆ ಜನತಾ ಕರ್ಫ್ಯೂನಿಂದ ತರಕಾರಿ ಮಾರಾಟ, ಸಾಗಟಕ್ಕೆ ಕೇವಲ 4 ಗಂಟೆಸಮಯ ನೀಡಿರುವುದರಿಂದ 600ರಿಂದ 700 ಟನ್‌ನಷ್ಟು ಮಾತ್ರ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದರಿಂದ ತರಕಾರಿ ಮತ್ತು ಹಣ್ಣು ಬೆಳೆಯುವ ರೈತರಿಗೆಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ನಂದಿನಿಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವಂತೆ ಕೃಷಿಉತ್ಪನ್ನಗಳ ಮಾರಾಟಕ್ಕೂ ಅವಕಾಶ ನಿಡುವಂತೆ ರೈತರು ಒತ್ತಾಯಿಸಿದ್ದಾರೆ.
ಕೃಷಿ ಉತ್ಪನ್ನಗಳ ಮಾರಾಟ ಅವಧಿ ಹೆಚ್ಚಿಸಿ: ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಈಗಾಗಲೇ ಸಾಕಷ್ಟುರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಇತ್ತೀಚೆಗೆ ಚೇತರಿಸಿಕೊಳ್ಳುವ ಹಂತಕ್ಕೆ ಬಂದಿರುವಾಗಲೇ 2ನೇ ಅಲೆಯ ಆರ್ಭಟಕ್ಕೆ ರೈತರು ತುತ್ತಾಗಿದ್ದಾರೆ. ಪರಿಣಾಮ ತರಕಾರಿ, ಹೂ-ಹಣ್ಣು ಬೆಳೆಯುವ ರೈತರು ಸಾಲದ ಸುಳಿಗೆ ಸಿಲುಕುವ ಮೊದಲೇ ಸರ್ಕಾರ ನಂದಿನಿಹಾಲು ಉತ್ಪನ್ನಗಳನ್ನು ದಿನವಿಡಿ ಮಾರಾಟ ಮಾಡಲು ಅವಕಾಶ ನೀಡಿದಂತೆ ತರಕಾರಿ ಮಾರಾಟಕ್ಕೂ ಅವಕಾಶ ನೀಡಿ ರೈತರ ಹಿತ ಕಾಪಾಡಬೇಕಿದೆ.
ಹೊಲದಲ್ಲಿ ನಿತ್ಯ ಕೊಳೆಯುತ್ತಿದೆ ಸಾವಿರ ಟನ್‌ಗೂ ಅಧಿಕ ತರಕಾರಿ :
ಕರ್ಫ್ಯೂನಿಂದಾಗಿ ಸೂಕ್ತ ಮಾರುಕಟ್ಟೆ, ಉತ್ತಮ ಬೆಲೆ ಸಿಗದ ಹಿನ್ನೆಲೆ ರೈತರು ಕಟಾವು ಮಾಡದಿರುವುದರಿಂದ ಕೊಯ್ಲಿಗೆ ಬಂದ ಬೀನ್ಸ್, ಕೋಸು, ಟೊಮೊಟೋ, ಈರೆಕಾಯಿ, ಕುಂಬಳಕಾಯಿ, ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳು ಗಿಡದಲ್ಲೇ ಬಲಿತು, ಕೊಳೆಯುತ್ತಿವೆ. ನಿತ್ಯ ಸುಮಾರು 2 ಸಾವಿರ ಟನ್ ತರಕಾರಿ ಮಾರು ಕಟ್ಟೆಗೆ ಬರುತ್ತಿತ್ತು. ಇದೀಗ 700 ಟನ್ ತರಕಾರಿ ಮಾತ್ರ ಎಪಿಎಂಸಿಗೆ ಬರುತ್ತಿದ್ದರೂ ಅದಕ್ಕೂ ಸೂಕ್ತ ಬೆಲೆ ಸಿಗುತ್ತಿಲ್ಲ. ಉಳಿದಂತೆ ಇನ್ನು ಸಾವಿರಕ್ಕೂ ಅಧಿಕ ಟನ್ ತರಕಾರಿ ರೈತರ ಜಮೀನಿನಲ್ಲೇ ಕೊಳೆಯುತ್ತಿದೆ.
ಜನಪ್ರತಿನಿಧಿಗಳೇ ರೈತರ ಪರ ಧ್ವನಿ ಎತ್ತಿ :
ಮೈಸೂರು ಜಿಲ್ಲೆಯಿಂದ ಎಪಿಎಂಸಿ, ವಿವಿಧ ಮಾರುಕಟ್ಟೆಗೆ ಪ್ರತಿದಿನ 2 ಸಾವಿರ ಟನ್‌ಗೂಅಧಿಕ ತರಕಾರಿ ಬರುತ್ತಿತ್ತು. ಇದೀಗ ಕರ್ಫ್ಯೂನಿಂದ ಹೆಚ್ಚೆಂದರೆ 600-700 ಟನ್ ಬರುತ್ತಿದೆ.ಇದಕ್ಕೂ ಬೇಡಿಕೆ ಇಲ್ಲದಂತಾಗಿದೆ. ಉಳಿದಸಾವಿರಕ್ಕೂ ಅಧಿಕ ಟನ್ ತರಕಾರಿ ಜಮೀನಿನಲ್ಲೇಕೊಳೆಯುತ್ತಿದೆ. ಎಪಿಎಂಸಿಯಲ್ಲಿ 4 ತಾಸು ಮಾತ್ರಮಾರಾಟಕ್ಕೆ ಅವಕಾಶ ನೀಡಿರುವುದರಿಂದಖರೀದಿದಾರರು ಉತ್ಸಹ ತೋರುತ್ತಿಲ್ಲ. ಈಅವಧಿಯೊಳಗೆ ರೈತರು ತಮ್ಮ ಉತ್ಪನ್ನ ತರುವುದುಕೂಡ ಕಷ್ಟವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಶಾಸಕರು, ಜನಪ್ರತಿನಿಧಿಗಳು ಧ್ವನಿ ಎತ್ತಿ ನಂದಿನ ಮಾರಾಟ ಮಳಿಗೆ ಮಾದರಿಯಲ್ಲಿ ದಿನವಿಡೀಮಾರಾಟಕ್ಕೆ ಅವಕಾಶ ನೀಡಬೇಕು. ಸಂಕಷ್ಟದಲ್ಲಿರುವ ನಮ್ಮನ್ನು ಪಾರು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತರಕಾರಿಯನ್ನು ಕೊಯ್ಲು ಮಾಡಿ ಸಂಸ್ಕರಿಸಿಡಲು ನಮ್ಮಲ್ಲಿ ಯಾವುದೇವ್ಯವಸ್ಥೆ ಇಲ್ಲ. ಈಗ ಬೆಳಗ್ಗೆ 6ರಿಂದ 10ರಒಳೆಗೆ ಮಾರಾಟ ಮಾಡಬೇಕು ಎಂಬನಿರ್ಬಂಧ ಹೇರಿರುವುದು ಸರಿಯಲ್ಲ. ಕಳೆದಬಾರಿ ಅಗತ್ಯ ವಸ್ತುಗಳ ಸಾಗಟ ಮತ್ತುಮಾರಾಟಕ್ಕೆ ವಿನಾಯಿತಿ ನೀಡಿದಂತೆ ಈಬಾರಿಯೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿ, ರೈತರ ಹಿತ ಕಾಪಾಡಿ. –ಮರಂಕಯ್ಯ, ರೈತ ಮುಖಂಡ
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.