ಬರಮುಕ್ತ ಕರ್ನಾಟಕ ಆಂದೋಲನಕ್ಕೆ ರೈತ ಸಂಘ ಭಾಗಿ
ಶಾಶ್ವತವಾಗಿ ಬರಗಾಲ ತೊಡೆದುಹಾಕಲು ನಿರಂತರವಾಗಿ ಜಲಜಾಗೃತಿ ಮುಖ್ಯ: ಬಡಗಲಪುರ ನಾಗೇಂದ್ರ
Team Udayavani, May 22, 2019, 10:06 AM IST
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಹೊಸಕೋಟೆ ಬಸವರಾಜ್ ಇತರರು ಇದ್ದರು.
ಮೈಸೂರು: ದೇಶದಲ್ಲಿಯೇ ಕರ್ನಾಟಕ ರಾಜ್ಯ ಬರಗಾಲದಲ್ಲಿ ಎರಡನೇ ಸ್ಥಾನದಲ್ಲಿದ್ದು, ಬರಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ರಚನೆಯಾಗಿರುವ ಬರಮುಕ್ತ ಕರ್ನಾಟಕ ಆಂದೋಲನದ ಅನುಷ್ಠಾನ ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಪೂರ್ಣವಾಗಿ ಪಾಲ್ಗೊಳ್ಳಲಿದೆ ಎಂದು ಸಂಘದ ಬಡಗಲಪುರ ನಾಗೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲವನ್ನು ಶಾಶ್ವತವಾಗಿ ತೊಡೆದುಹಾಕಲು ನಿರಂತರವಾಗಿ ಜಲ ಜಾಗೃತಿ, ಜಲ ಸಂರಕ್ಷಣೆ ಮತ್ತು ನೀರಿನ ಮಿತ ಬಳಕೆ, ಹಸಿರೀಕರಣ ಮಾಡುವುದು ಬಹು ಮುಖ್ಯವಾಗಿದೆ. ಈ ಸಂಬಂಧ ಒಂದು ಸಾವಿರ ಜನಕ್ಕೆ ತರಬೇತಿ ನೀಡಲು ಕಾರಾ.ಾಗಾರ ಹಮ್ಮಿ ಕೊಳ್ಳಲಾಗಿದೆ ಎಂದರು.
ನೀಲ ನಕ್ಷೆ ತಯಾರು: ಪ್ರತಿ ಜಿಲ್ಲೆಯಲ್ಲಿ ನೂರು ಜನ ಕಾರ್ಯಕರ್ತರನ್ನು ಸದರಿ ಉದ್ದೇಶಕ್ಕಾಗಿ ತೊಡಗಿ ಸುವುದಲ್ಲದೇ, ತರಬೇತುದಾರರಿಗೆ ತರಬೇತಿ ನೀಡಲು ರಾಜ್ಯದಲ್ಲಿ ಐವತ್ತು ಜನ ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸುವ ಉದ್ದೇಶವಿದೆ. ಈಗಾಗಲೇ ಬರ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ಡಾ.ರಾಜೇಂದ್ರ ಸಿಂಗ್ ಹಾಗೂ ಇತರ ಸ್ವಯಂ ಸೇವಕರ ಮಾರ್ಗದರ್ಶನದಲ್ಲಿ ಕೆಲಸವನ್ನು ಮುಂದುವರೆಸಲು ಸಂಘ ತೀರ್ಮಾನಿಸಿದ್ದು, ಒಂದು ನೀಲ ನಕ್ಷೆ ತಯಾರು ಮಾಡಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ ಮೂಡಿಬಂದ ಅಭಿಪ್ರಾಯ: ಈ ಹಿಂದೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಮ್ಮನ ಹಳ್ಳಿ ಗೇಟ್‌ನಲ್ಲಿರುವ ಡಾ. ರಾಮಮನೋಹರ್ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಪ್ರೊ.ರವಿ ವರ್ಮ ಕುಮಾರ್, ಯತಿರಾಜ್ ಮತ್ತು ರೈತ ಸಂಘ, ಹಲವು ಸಂಘಟನೆಗಳ ಸಹಯೋಗದಲ್ಲಿ ಡಾ.ರಾಜೇಂದ್ರ ಸಿಂಗ್ ಅವರಿಂದ ನಡೆದ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರದಲ್ಲಿ ಮೂಡಿಬಂದ ಅಭಿಪ್ರಾಯ ಕ್ರೋಢೀಕರಿಸಿ ಅನುಷ್ಠಾನಕ್ಕಾಗಿ ಐದು ಅಂಶಗಳನ್ನು ರೂಪಿಸಲಾಗಿದೆ ಎಂದರು.
ಐದು ಅಂಶಗಳು: ಕೆರೆ, ಕುಂಟೆ ಒತ್ತುವರಿ ತೆರವು ಮಾಡಿ ಸಂರಕ್ಷಣೆ ಮಾಡುವುದು. ಸರ್ಕಾರ ರೂಪಿಸಿ ಜಾರಿಗೆ ತರಲು ಉದ್ದೇಶಿಸಿರುವ ಜಲಾಮೃತ ಹಾಗೂ ಇತರೆ ಯೋಜನೆಗಳ ಜಾರಿಯನ್ನು ಗುತ್ತಿಗೆದಾರರು ಮತ್ತು ಮಧ್ಯಸ್ಥಿಕೆಗಾರರಿಂದ ಬಿಡಿಸಿ ಜನ ಸಮು ದಾಯದ ಕಾರ್ಯಕ್ರಮವಾಗಿ ರೂಪಿಸುವುದು. ನದಿ ಮಲ ಸಂರಕ್ಷಣೆ, ಹವಮಾನ ವೈಪರೀತ್ಯ ತಡೆಗಟ್ಟಲು ಹಸಿರೀಕರಣ, ಬಹುಬೆಳೆ ಪದ್ಧತಿಯ ಸುಸ್ಥಿರ ಕೃಷಿಗೆ ಒತ್ತು ನೀಡಿ ಹವಮಾನ ಸಮತೋಲನ ಕಾಪಾಡು ವುದು. ಜಲ ಖಾಸಗಿ ವ್ಯಕ್ತಿ ಕಂಪನಿಗಳ ಪಾಲಾಗದಂತೆ ಎಚ್ಚರಿಕೆ ವಹಿಸುವುದು. ಮಳೆ ನೀರನ್ನು ಕೊಯ್ಲು ಮಾಡಿ ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ವೃದ್ಧಿಸುವುದು. ನೀರನ್ನು ಸಂರಕ್ಷಿಸುವುದು, ಮಿತ ಬಳಕೆ ಹಾಗೂ ನಿರಂತರ ಜಲಜಾಗೃತಿ ಕಾರ್ಯಕ್ರಮ ರೂಪಿಸುವುದು ಮತ್ತು ಜಲ ಮಾಲಿನ್ಯದ ವಿರುದ್ಧ ನಿರಂತರ ಹೋರಾಟ ಮತ್ತು ಜಾಗೃತಿ ಮೂಡಿಸುವುದು.
ಬರಮುಕ್ತ ಆಂದೋಲನದ ಪದಾಧಿಕಾರಿಗಳು: ಅಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ರಾಗಿ ಪ್ರೊ. ರವಿವರ್ಮಕುಮಾರ್, ಸದಸ್ಯರಾಗಿ ಚಾಮರಸ ಮಾಲೀ ಪಾಟೀಲ್, ಸೊಪ್ಪಿನ್, ಆರ್.ಎಚ್. ಸಾವುಕಾರ್, ಟಿ.ನೂಲೆನೂರು ಎಂ.ಶಂಕರಪ್ಪ, ನಾಗರತ್ನಮ್ಮ ಪಾಟೀಲ್, ಆಂಜನೇಯ ರೆಡ್ಡಿ, ರವಿಕಿರಣ್ ಪುಣಚ, ಕಲ್ಯಾಣ ರಾವ್ ಮುಚಳಾಂಚಿ, ಜಿ.ಟಿ. ರಾಮಸ್ವಾಮಿ ಹಾಗೂ ಸಂಪರ್ಕ ಕಾರ್ಯ ದರ್ಶಿಯಾಗಿ ಪಿ. ಗೋಪಾಲರನ್ನು ಆಯ್ಕೆ ಮಾಡ ಲಾಗಿದೆ ಎಂದು ಹೇಳಿದರು.
10 ಮಂದಿಗೆ ಆಹ್ವಾನ: ಈ ಸಮಿತಿ ಮೊದಲ ಸಭೆಯನ್ನು ಮೇ 28ರಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಅನುಷ್ಠಾನದ ಐದು ಅಂಶಗಳ ಕಾರ್ಯರೂಪಕ್ಕೆ ಮಾಡಬೇಕಾದ ಕೆಲಸಗಳ ಸಂಬಂಧ ರೂಪು ರೇಷೆ ತಯಾರಿಸಲಾಗುವುದು.
ಜುಲೈ 26, 27, 28ರಂದು ತಮಿಳು ನಾಡಿನ ಚೆನ್ನೈನಲ್ಲಿ ನೀರಿನ ಸಂರಕ್ಷಣೆ ಕುರಿತಾದ ರಾಷ್ಟ್ರಮಟ್ಟದ ಸಮ್ಮೇಳನ ಏರ್ಪಡಿಸಲಾಗಿದ್ದು, ಸಂಘದಿಂದ 10 ಮಂದಿಯನ್ನು ಆಹ್ವಾನಿಸಲಾಗಿದೆ ಎಂದರು.
ಸೂಕ್ತ ಕ್ರಮಕ್ಕೆ ಒತ್ತಾಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯಾದ್ಯಾಂತ ಕಲ್ಯಾಣ ಚಳವಳಿ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಈ ಚಳವಳಿಗೆ ಸಂಘ ಒತ್ತಾಸೆಯಾಗಿ ನಿಲ್ಲುತ್ತದೆ ಎಂದರು.
ಕಾಡಾನೆಗಳು ಕಾಡಿನಿಂದ ಹೊರ ಬಂದು ರೈತರ ಫಸಲನ್ನು ನಾಶ ಮಾಡುವುದರೊಂದಿಗೆ ಮನುಷ್ಯರ ಮೇಲೂ ದಾಳಿ ಮಾಡುತ್ತಿದ್ದು, ಆನೆ ಮತ್ತು ಮಾನವ ಸಂಘರ್ಷ ಏರ್ಪಟ್ಟಿದೆ. ಇದನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲ್ಲೂಕು ಅಧ್ಯಕ್ಷ ಪಿ.ಮರಂಕಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.