ಕಾರಂಜಿ ಕೆರೆ ಆವರಣದಲ್ಲಿ ಹಬ್ಬದ ಸಂಭ್ರಮ


Team Udayavani, Dec 17, 2019, 3:00 AM IST

karanji

ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಇದೇ ಮೊದಲ ಬಾರಿಗೆ ಕಾರಂಜಿ ಕೆರೆ ಹಬ್ಬ ಆಯೋಜಿಸುವ ಮೂಲಕ ಕರೆಯ ಮಹತ್ವ ಸಾರಲಾಯಿತು.

ಎರಡು ದಿನ ಕಾಲ ಕಾರಂಜಿ ಕೆರೆ ಹಬ್ಬ: ಕಳೆದ ಬಾರಿ ನೀರಿಲ್ಲದೇ ಸಂಪೂರ್ಣ ಬತ್ತಿ ಹೋಗಿದ್ದ ಕೆರೆಗೆ ಚಾಮುಂಡಿ ಬೆಟ್ಟದಿಂದ ಮಳೆ ನೀರು ಕಾರಂಜಿ ಕೆರೆಗೆ ಸೇರುವ ವ್ಯವಸ್ಥೆ ಮಾಡಲಾಗಿತ್ತು. ನಂತರ ಉತ್ತಮ ಮಳೆಯಾದ್ದರಿಂದ ಕೆರೆ ತುಂಬಿತ್ತು. ಈ ಹಿನ್ನೆಲೆ ಪರಿಸರ ಸಂರಕ್ಷಣೆಗೆ ಕೆರೆಯ ಪಾತ್ರವೇನು?, ಅದನ್ನು ರಕ್ಷಿಸುವ ಮತ್ತು ಮಹತ್ವ ತಿಳಿಸುವ ಉದ್ದೇಶದಿಂದ ಮೈಸೂರು ಚಾಮರಾಜೇಂದ್ರ ಮೃಗಾಲಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರ ಎರಡು ದಿನಗಳ ಕಾಲ ಕಾರಂಜಿ ಕೆರೆ ಹಬ್ಬ ಆಯೋಜಿಸಿದೆ.

ಕೆರೆ ಉತ್ಸವಕ್ಕೆ ಮೇಯರ್‌ ಪುಷ್ಪಲತಾ ಚಾಲನೆ: ಕಾರಂಜಿ ಕೆರೆ ಆವರಣದಲ್ಲಿ ನಡೆದ ಕೆರೆ ಉತ್ಸವಕ್ಕೆ ಮೇಯರ್‌ ಪುಷ್ಪಲತಾ ಜಗನಾಥ್‌ ಚಾಲನೆ ನೀಡಿದರು. ಪಾಲಿಕೆ ಸದಸ್ಯರಾದ ಛಾಯಾ ಮತ್ತು ರೂಪ ಇವರಿಗೆ ಸಾಥ್‌ ನೀಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರು ಹಬ್ಬದಲ್ಲಿ ಭಾಗವಹಿಸಿದವರಿಗೆ ಕಾರಂಜಿ ಕೆರೆ ಇತಿಹಾಸ, ಪರಿಸರದಲ್ಲಿ ಕೆರೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಕೆರೆ ಜೀವವೈವಿಧ್ಯ ತಾಣ: ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಇಂದ್ರೇಶ್‌ ಅವರು ಕವನದ ಮೂಲಕ ಕೆರೆ, ಪರಿಸರ ಸಂರಕ್ಷಣೆ ಹಾಗೂ ಸ್ವತ್ಛತೆ ಬಗ್ಗ ಕವಿತೆ ವಾಚನ ಮಾಡಿ, ಕೆರೆ ಜೀವವೈವಿಧ್ಯ ತಾಣವಾಗಿದ್ದು, ಇತ್ತೀಚೆಗೆ ನಶಿಸುತ್ತಿವೆ. ಕೆರೆಯ ಮಹತ್ವ ಮತ್ತು ಅವುಗಳ ಅಗತ್ಯಗಳ ಬಗ್ಗೆ ಜನತೆಗೆ ತಿಳಿಸಿಕೊಡುವ ಉದ್ದೇಶದಿಂದ ಮೃಗಾಲಯವು ಕಾರಂಜಿ ಕೆರೆಯನ್ನು ಅಭಿವೃದ್ಧಿಪಡಿಸಿ ಕೆರೆ ಹಬ್ಬವನ್ನು ಮಾಡುತ್ತಿದೆ. ಇಂತಹ ಹಬ್ಬಗಳು ಎಲ್ಲಾ ಕೆರೆಗಳಿಗೂ ವಿಸ್ತರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಪುಟಾಣಿಗಳಿಗೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ: ಕೆರೆ ಹಬ್ಬ ಅಂಗವಾಗಿ ಪುಟಾಣಿ ಮಕ್ಕಳಿಗೆ ಪ್ರಾಣಿ ಹಾಗೂ ಪ್ರಕೃತಿ ಆಧಾರಿತ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಆಯೋಜಿಸಲಾಗಿತ್ತು. ಜೊತೆಗೆ ಕಾರಂಜಿ ಕೆರೆಯಲ್ಲಿ ಸೆರೆ ಹಿಡಿಯಲಾದ ಛಾಯಾಚಿತ್ರಗಳ ಸ್ಪರ್ಧೆ, ಪರಿಸರ ಮತ್ತು ಕೆರೆ ಸಂರಕ್ಷಣೆ ಬಗ್ಗೆ ಚಿತ್ರಕಲೆ ಹಾಗೂ ರೇಖಾ ಚಿತ್ರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಕೆರೆಯ ಮಹತ್ವವನ್ನು ತಿಳಿಸಿಕೊಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕರೆ, ನದಿ, ಬೆಟ್ಟ, ಗುಡ್ಡ ಸೇರಿದಂತೆ ಪರಿಸರವನ್ನು ಹಾಳೆಯ ಮೇಲೆ ಹಿಡಿದಿಡುವ ಪ್ರಯತ್ನ ಮಾಡಿದರು.

ಮಾನವ ಕೇಂದ್ರಿತ ಅಭಿವೃದ್ಧಿ ಪರಿಸರಕ್ಕೆ ಮಾರಕ: ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಕೆರೆ ಸಂರಕ್ಷಣೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮುನುಷ್ಯ ಸುಸ್ಥಿರ ಅಭಿವೃದ್ಧಿ ಬಿಟ್ಟು ಮಾನವ ಕೇಂದ್ರಿತ ಅಭಿವೃದ್ಧಿಯತ್ತ ಒಲವು ತೋರುತಿದ್ದಾನೆ. ಇದು ಪರಿಸರಕ್ಕೆ ಮಾರಕವಾಗಲಿದೆ ಎಂದರು.

ಕೆರೆಗಳನ್ನು ಸಂರಕ್ಷಣೆ ಮಾಡಿ: ಪ್ರತಿನಿತ್ಯ ದೂರದ ಬೆಂಗಳೂರಿಗೆ ಕುಡಿಯುವ ನೀರನ್ನು ಪಂಪ್‌ ಮಾಡಿ, ಪ್ರಕೃತಿ ವಿರುದ್ಧವಾಗಿ ಸಾಗಣೆ ಮಾಡುತ್ತಿದ್ದೇವೆ. ಅಷ್ಟು ದೂರ ನೀರನ್ನು ಪಂಪ್‌ ಮಾಡಲು ಎಷ್ಟು ವಿದ್ಯುತ್‌ ಬೇಕು. ಎಷ್ಟು ವರ್ಷ ಹೀಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು, ಇದು ಪ್ರಕೃತಿಗೆ ವಿರುದ್ಧ ಪ್ರಕ್ರಿಯೆ. ನಾವು ದೇಶದಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡಿದ್ದರೆ, ಅಂತರ್ಜಲ ಮಟ್ಟದ ಹೆಚ್ಚಿಸಿಕೊಳ್ಳಬಹುದಾಗಿತ್ತು. ಈಗ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದರು.

ನಾಗರಹೊಳೆ ಮತ್ತು ಬಂಡೀಪುರದಲ್ಲಿ ರಸ್ತೆ ಮಾಡಬೇಕೆಂಬ ಪ್ರಸ್ತಾಪ ಮುನ್ನಲೆಗೆ ಬಂದಿತು. ಆದರೆ ಇಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದರೆ, ಅಲ್ಲಿನ ಏಷ್ಯಾದ ಆನೆ, ಹುಲಿ ಹಾಗೂ ಜೀವ ಸಂಕುಲದ ಕಥೆಯೇನು ಎಂದು ಪ್ರಶ್ನಿಸಿ ಇವೆಲ್ಲವೂ ಮಾನವ ಕೇಂದ್ರಿತ ಚಟುವಟಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

48 ಲಕ್ಷ ಮಂದಿ ಪ್ರವಾಸಿಗ ಭೇಟಿ: ಅಜಿತ್‌ ಕುಲಕರ್ಣಿ ಮಾತನಾಡಿ, 2004ರಲ್ಲಿ ಕೆರೆಯನ್ನು ಮೃಗಾಲಯ ವ್ಯಾಪ್ತಿಗೆ ತರಲಾಯಿತ. ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೆರೆ ಉದ್ಘಾಟಿಸಿದರು. ಉಚಿತ ಪ್ರವೇಶದ ಬದಲು ಪ್ರವೇಶ ದರ ನಿಗದಿ ಪಡಿಸಲಾಯಿತು. ಅಂದಿನಿಂದ 48 ಲಕ್ಷ ಪ್ರವಾಸಿಗರು ಕೆರೆಗೆ ಭೇಟಿ ನೀಡಿದ್ದಾರೆ. ಇದರಿಂದ 9 ಕೋಟಿ ರೂ. ಆದಾಯ ಬಂದಿದ್ದು, ಈ ಹಿಂದೆ ಇದಕ್ಕೆ ವಾಕಿಂಗ್‌ ಪಾತ್‌ ಇರಲಿಲ್ಲ. ಕೆರೆ ಪುನರ್‌ಜೀವನದ ಅನುದಾನ 1.17 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.