Crop loss compensation: ಬೆಳೆ ನಷ್ಟ ಪರಿಹಾರಕ್ಕೆ ಎಫ್ಐಡಿ ಕಡ್ಡಾಯ


Team Udayavani, Nov 8, 2023, 1:15 PM IST

Crop loss compensation: ಬೆಳೆ ನಷ್ಟ ಪರಿಹಾರಕ್ಕೆ ಎಫ್ಐಡಿ ಕಡ್ಡಾಯ

ಮೈಸೂರು: ಮುಂಗಾರು ಪೂರ್ವ ಮತ್ತು ಮುಂಗಾರು ತೀವ್ರ ಕೊರತೆ ಹಿನ್ನೆಲೆ ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿದ್ದು, ಬೆಳೆ ನಷ್ಟ ಅನುಭವಿಸಿದ ರೈತರು ಸರ್ಕಾರದಿಂದ ಪರಿಹಾರ ಪಡೆದುಕೊಳ್ಳಬೇಕಾದರೆ ಎಫ್ಐಡಿ ಕಡ್ಡಾಯವಾಗಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ, ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದು, ರೈತರು ಬಿತ್ತಿದ್ದ ಬೆಳೆ ಒಣಗಿದೆ. ವಾಡಿಕೆಯಷ್ಟು ಮಳೆಯಾಗದೆ ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಎರಡು ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಬರದಿಂದ ಕಂಗಾಲಾಗಿದ್ದಾರೆ. ಕೃಷಿ ಮತ್ತು ಕಂದಾಯ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಜಿಲ್ಲೆಯ 9 ತಾಲೂಕುಗಳಲ್ಲಿ ಬರದ ತೀವ್ರತೆ ದೃಢಪಟ್ಟಿದೆ. ಬೆಳೆನಷ್ಟ, ರೈತರ ಸ್ಥಿತಿ, ಮೇವು ಹಾಗೂ ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಜಿಲ್ಲಾಡ ಳಿತ ಸಲ್ಲಿಸಿದ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ.

ಪರಿಹಾರ ಕಾರ್ಯಗಳನ್ನು ತ್ವರಿತಗತಿ ಯಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ 2023- 24ನೇ ಸಾಲಿನಿ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಪಡೆಯಲು ಹಾಗೂ ಹಲವು ಯೊಜನೆ ಲಾಭ ಪಡೆಯಬೇಕಾದರೆ ಫ್ರೂಟ್ಸ್‌ ಐಡಿ(ಎಫ್ಐಡಿ) ಮಾಡಿಸುವುದು ಕಡ್ಡಾಯವಾಗಿದೆ. ರೈತರು ತಪ್ಪದೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಐಡಿ ಮಾಡಿಸಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.

ರೈತರು, ಎಚ್‌ಟಿಟಿಪಿಎಸ್‌://ಎಫ್ಆರ್‌ಯುಐಟಿಎಸ್‌.ಕೆಎಆರ್‌ಎನ್‌ಟಿಎಕೆಎ.ಜಿಒವಿ.ಐಎನ್‌ ಮೂಲಕ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ರೈತರು, ನಾಗರಿಕ ಪ್ರವೇಶ(ಸಿಟಿಜನ್‌ ಲಾಗಿನ್‌) ಗೆ ಭೇಟಿ ನೀಡಿ ಅವಶ್ಯ ದಾಖಲೆ ಒದಗಿಸಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ ಸಂಖ್ಯೆ ಮತ್ತು ಹೆಸರು, ಜಮೀನಿನ ವಿವರ ದಾಖಲಿಸ ಬೇಕು. ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನು ಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳಲಿದೆ. ಶೇ.33ರಷ್ಟು ಬೆಳೆ ನಷ್ಟ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಮಳೆಯನ್ನೇ ನಂಬಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈತರಿಗೆ ಸತತವಾಗಿ ಪೂರ್ವ ಮುಂಗಾರು, ಮುಂಗಾರು, ಪೂರ್ವ ಹಿಂಗಾರು ಮತ್ತು ಹಿಂಗಾರು ಕೈ ಕೊಟ್ಟಿದೆ.

ವಾಡಿಕೆ ಯಷ್ಟು ಮಳೆಯಾಗದೆ ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಎರಡು ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು, ಈ ಬಾರಿ ಮಳೆ ಬಾರದೇ ಬರದಿಂದ ಕಂಗಾಲಾಗಿದ್ದಾರೆ. ಜಿಲ್ಲೆಯ ಒಟ್ಟು 2,49,483 ಹೆಕ್ಟೇರ್‌ ಮಳೆಯಾಶ್ರಿತ ಕೃಷಿ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದು, ಅದರಲ್ಲಿ 82,659 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಮಳೆಯಿಂದಾಗಿ ಕೈ ಕೊಟ್ಟಿದೆ. ಇದರಿಂದಾಗಿ ರೈತರಿಗೆ ಬರೋಬ್ಬರಿ 555.16 ಕೋಟಿ ರೂ. ನಷ್ಟವಾಗಿದೆ ಎಂದು ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕಳೆದ ವರ್ಷ ವಾಡಿಕೆಗಿಂತ ಅಧಿಕ ಮಳೆಯಿಂದಾಗಿ ಕೈಗೆ ಸಿಗಬೇಕಾದ ಬೆಳೆ ಮಣ್ಣು ಪಾಲಾಗಿದೆ. ಅತಿವೃಷ್ಟಿ ಯಿಂದಾಗಿ 1267.21 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆ ನಷ್ಟ ವಿವÃ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಕೊರತೆಯಿಂದ 82,659 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದರಲ್ಲಿ ಭತ್ತ, ಎಸರು, ಉದ್ದು, ಎಳ್ಳು, ತಂಬಾಕು, ಸೂರ್ಯಕಾಂತಿ, ಕಬ್ಬು, ತಂಬಾಕು ಬೆಳೆ ನಷ್ಟವಾಗಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

ಏನಿದು ಎಫ್ಐಡಿ?: ರೈತ ನೋಂದಣಿ ಮತ್ತು ಏಕೀಕೃತ ಫ‌ಲಾನುಭವಿ ಮಾಹಿತಿ ವ್ಯವಸ್ಥೆ, ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆ ಇದಾಗಿದ್ದು, ನೋಂದಾಯಿಸಿಕೊಂಡ ರೈತ ಸರ್ಕಾರಿ ಸೌಲಭ್ಯಗಳನ್ನು ಪಡೆ ಯಲು ಅನುಕೂಲವಾಗಲಿದೆ. ಫ‌ಲಾನುಭವಿ ಗಳು ಪಡೆಯುವ ಪ್ರಯೋಜನಗಳ ವಿವರ ಗಳನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸ ಲಾಗುತ್ತದೆ. ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.

ಆಯ್ದ ಬೆಳೆಗಳಿಗೆ ವಿಮೆ ಸೌಲಭ್ಯ:

ಮೈಸೂರು: 2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆಯ ಅಪೇಕ್ಷಿತ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫ‌ಸಲ್‌ ಭೀಮಾ ಯೋಜನೆ ಅನ್ವಯ ವಿಮೆ ಸೌಲಭ್ಯ ಮಾಡಿಸಿಕೊಳ್ಳಲು ಕೃಷಿ ಇಲಾಖೆ ಸೌಲಭ್ಯ ಕಲ್ಪಿಸಿದೆ.

ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 9 ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದ್ದು, ಡಿ.1ರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಳ್ಳಬಹುದು. ಪ್ರತಿ ಎಕರೆಯಂತೆ ಟೋಮೊಟೊ ಬೆಳೆಗೆ 2,863 ರೂ., ಮಳೆಯಾಶ್ರಿತ ಮುಸುಕೊನ ಜೋಳಕ್ಕೆ 342 ರೂ., ನೀರಾವರಿ ಆಶ್ರಿತ ಮುಸುಕಿನ ಜೋಳಕ್ಕೆ 391 ರೂ., ರಾಗಿ ಮಳೆಯಾಶ್ರಿತಕ್ಕೆ 258 ರೂ., ನೀರಾವರಿ ಆಶ್ರಿತ ರಾಗಿಗೆ 308, ಮಳೆಯಾಶ್ರಿತ ಕಡಲೆ ಬೆಳೆಗೆ 210 ರೂ. ಹಾಗೂ ಮಳೆಯಾಶ್ರಿತ ಹುರುಳಿ ಬೆಳೆಗೆ 124 ರೂ. ವಿಮಾ ಕಂತನ್ನು ಕಟ್ಟಬಹುದಾಗಿದೆ.

ಈ ಎಲ್ಲಾ ಬೆಳೆಗಳಿಗೆ ಡಿ.1ರಿಂದ 15ರವರೆಗೆ ವಿಮೆ ಮಾಡಿಸಲು ಅವಕಾಶವಿದೆ. ಹಾಗೆಯೇ ಬೇಸಿಗೆ ಹಂಗಾಮಿನಲ್ಲಿ ನೀರಾವರಿಯಲ್ಲಿ ಬೆಳೆ ಯಲಾದ ರಾಗಿಗೆ 308 ರೂ., ಭತ್ತಕ್ಕೆ 566 ರೂ. ವಿಮಾ ಕಂತನ್ನು ಡಿ.1ರಿಂದ 2024ರ ಫೆ.28ರವರೆಗೆ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಎಲ್ಲಾ ರೈತರಿಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಲಭ್ಯವಿದೆ. ವಿಮಾ ಕಂತು ಕಟ್ಟಲು ಗ್ರಾಮ್‌ 1, ನಾಗರಿಕ ಸೇವಾ ಕೇಂದ್ರ ಹಾಗೂ ಬ್ಯಾಂಕುಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸತೀಶ್‌ ದೇಪು

ಟಾಪ್ ನ್ಯೂಸ್

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.