![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Feb 9, 2024, 2:48 PM IST
ಮೈಸೂರು: ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ನಡೆದಿದೆ.
ಅಣ್ಣ ತಮ್ಮಂದಿರ ಗಲಾಟೆಯಲ್ಲಿ ಕರಿಶೆಟ್ಟಿ ಎಂಬವರು ಕೊಲೆಯಾಗಿದ್ದಾರೆ. ಅಣ್ಣ ಶಿವಣ್ಣ ಶೆಟ್ಟಿ ಸೇರಿ ನಾಲ್ವರ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕಾರ್ಯ ಗ್ರಾಮದ ಸರ್ವೆ ನಂ.91 ಮತ್ತು 92 ರ ಜಮೀನಿನ ವಿಚಾರದಲ್ಲಿ ಕರಿಶೆಟ್ಟಿ ಹಾಗೂ ಶಿವಣ್ಣಶೆಟ್ಟಿ ನಡುವೆ ಎಸಿ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ದ್ವೇಷ ಮುಂದುವರಿದಿದ್ದು, ಗುರುವಾರ ರಾತ್ರಿ ಇದೇ ವಿಚಾರದಲ್ಲಿ ಶಿವಣ್ಣಶೆಟ್ಟಿ, ಮಗ ಸಿದ್ದಪ್ಪಾಜಿ ತೋಟದ ಮನೆಗೆ ಬಂದು ಜಗಳ ಮಾಡಿದ್ದಾರೆ. ಸಿದ್ದಪ್ಪಾಜಿ ಕರಾಟೆ ಪಟುವಾಗಿದ್ದು ಕರಿಶೆಟ್ಟಿ ಎದೆಗೆ ಗುದ್ದಿದ್ದಾನೆ. ತಂದೆ ಶಿವಣ್ಣಶೆಟ್ಟಿ ಜೊತೆ ಬಂದ ಸಿದ್ದಪ್ಪಾಜಿ, ಚಿಕ್ಕಪ್ಪ ಕರಿಶೆಟ್ಟಿಗೆ ಹೊಡೆದಿದ್ದಾನೆ. ತಂದೆಯ ರಕ್ಷಣೆಗೆ ಬಂದ ಮಗ ಕುಮಾರಶೆಟ್ಟಿ ಮೇಲೂ ಹಲ್ಲೆ ನಡೆಸಿದ್ದಾರೆ. ತಂದೆ ಮಗ ನಡೆಸಿದ ಹಲ್ಲೆಗೆ ಕರಿಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಣ್ಣ ಶೆಟ್ಟಿ, ಸಿದ್ದಪ್ಪಾಜಿ, ಮಲ್ಲಿಗಮ್ಮ ಹಾಗೂ ನೀಲಮ್ಮ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.