ಯೋಗಪಟುಗಳಿಂದ ಅಂತಿಮ ತಾಲೀಮು
Team Udayavani, Jun 18, 2018, 12:41 PM IST
ಮೈಸೂರು: ಯೋಗದಲ್ಲಿ ತನ್ನದೇ ಛಾಪು ಮೂಡಿಸುವ ಮೂಲಕ ವಿಶ್ವದ ಗಮನ ಸೆಳೆದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂ.21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಗೆ ಭರ್ಜರಿ ತಯಾರಿ ಆರಂಭಗೊಂಡಿದ್ದು, ವಿಶ್ವ ಯೋಗದ ದಿನದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ರೇಸ್‌ಕೋರ್ಸ್ ಆವರಣದಲ್ಲಿ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಸಾವಿರಾರು ಯೋಗಪಟುಗಳು ಏಕಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಸುವ ಮೂಲಕ ಮತ್ತೂಂದು ದಾಖಲೆ ಬರೆಯುವ ಮುನ್ಸೂಚನೆ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‌ಪಿವೈಎಸ್‌ಎಸ್, ಜಿಎಸ್‌ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ನ್ಪೋರ್ಟ್ ಫೌಂಡೇಷನ್ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಅಂದಾಜು 10 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನಸೆಳೆದರು. ಕೇವಲ ಸಾರ್ವಜನಿಕರು ಮಾತ್ರವಲ್ಲದೆ ಜಿಲ್ಲೆಯ ಜನಪ್ರತಿನಿಗಳು, ರಾಜಕೀಯ ಮುಖಂಡರು, ಪ್ರಮುಖ ಅಧಿಕಾರಿಗಳು ಸಹ ಯೋಗ ತಾಲೀಮಿನಲ್ಲಿ ಭಾಗವಹಿಸಿ, ಸಾಮೂಹಿಕ ಯೋಗ ಪ್ರದರ್ಶನ ನಡೆಸಿದ್ದ ವಿಶೇಷವಾಗಿತ್ತು.
ಉತ್ಸಾಹದಿಂದ ಭಾಗಿ: ಕಳೆದ ಸಾಲಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಏಕಕಾಲದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಒಂದೇ ಜಾಗದಲ್ಲಿ ಯೋಗಪ್ರದರ್ಶನ ನೀಡುವ ಮೂಲಕ ಸಾಧನೆ ಮಾಡಿದ್ದರು. ಹೀಗಾಗಿ ಈ ಬಾರಿ ಹಿಂದಿನ ವರ್ಷದ ದಾಖಲೆಯನ್ನು ಮುರಿಯುವ ಲೆಕ್ಕಾಚಾರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಈ ವರ್ಷ ಅಂದಾಜು 70 ಸಾವಿರ ಮಂದಿಯನ್ನು ಸೇರಿಸುವ ನಿರೀಕ್ಷೆ ಹೊಂದಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡು ತಾಲೀಮು ಸಹ ನಡೆಸಲಾಗಿದ್ದು, ಭಾನುವಾರ ನಡೆದ ಮೂರನೇ ತಾಲೀಮು ಸಹ ಯಶಸ್ಸು ಕಂಡಿದೆ. ಬಹು ನಿರೀಕ್ಷೆಯೊಂದಿಗೆ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಭಾಗವಹಿಸಲು ಮುಂಜಾನೆ 5.10ರಿಂದಲೇ ಮೈಸೂರಿನ ವಿವಿಧೆಡೆಯಿಂದ ಯೋಗಪಟುಗಳು ರೇಸ್‌ಕೋರ್ಸ್‌ಗೆ ಆಗಮಿಸಿದರು. ಚಳಿಯನ್ನು ಲೆಕ್ಕಿಸದೆ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ವಿವಿಧ ವಯೋಮಾನದ ಸಾವಿರಾರು ಯೋಗಾಸಕ್ತರು ಬೆಳಗ್ಗೆ 6.15 ರಿಂದ 7ರವರೆಗೆ ನಡೆದ ತಾಲೀಮಿನಲ್ಲಿ ಯೋಗಾಸನಕ್ಕೆ ಅಗತ್ಯವಾದ ಹಲವು ಆಸನಗಳನ್ನು ಪ್ರದರ್ಶಿಸಿದರು.
ಹಲವು ಆಸನಗಳು: ಮೊದಲು ಪ್ರಾರ್ಥನೆ ನೆರವೇರಿದ ನಂತರ ನಾಲ್ಕು ನಿಮಿಷಗಳ ಕಾಲ ಯೋಗಾಸನಕ್ಕೆ ಪೂರಕವಾದ 17 ಬಗೆಯ ವ್ಯಾಯಾಮ ಮಾಡಿದರು. ಬಳಿಕ 25 ನಿಮಿಷಗಳ ಕಾಲ ತಾಡಾಸನ, ವೃûಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜಾÅಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ,
ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶಿಸಿದರು. ನಂತರ 14 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಶೀಥಲೀ ಪ್ರಾಣಾಯಾಮ, ಭಾÅಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಮೊದಲ ತಾಲೀಮನ್ನು ಪೂರ್ಣಗೊಳಿಸಿದರು.
ಹಲವು ಗಣ್ಯರ ಭಾಗಿ: ಯೋಗ ತಾಲೀಮಿನಲ್ಲಿ ಭಾಗವಹಿಸಿದ್ದ ಸಹಸ್ರಾರು ಯೋಗಾಸಕ್ತರ ಜತೆಗೆ ಜಿಲ್ಲೆಯ ಪ್ರಮುಖರು ಸಹ ಭಾಗವಹಿಸುವ ಮೂಲಕ ಗಮನ ಸಳೆದರು. ಮುಖ್ಯವಾಗಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಮಾಜಿ ಮೇಯರ್ ಆರ್.ಲಿಂಗಪ್ಪ, ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಆಯಷ್ ಇಲಾಖೆಯ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು,
ನೆಹರು ಯುವ ಕೇಂದ್ರದ ಸಂಯೋಜಕ ಎಂ.ಎನ್.ನಟರಾಜ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಚ್.ಪಿ.ಮಂಜುನಾಥ್, ಕಾಡಾ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್, ಎಸ್‌ಪಿವೈಎಸ್ ಮುಖ್ಯಸ್ಥ ಡಾ.ಮಾರುತಿ, ಜಿಎಸ್‌ಎಸ್ ಯೋಗಿಕ್ ಶ್ರೀಹರಿ, ರಂಗನಾಥ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಯೋಗ ನ್ಪೋರ್ಟ್ಸ್ ಕ್ಲಬ್‌ನ ಮುಖ್ಯಸ್ಥರು ಡಾ.ಗಣೇಶ್ ಕುಮಾರ್, ಪತಂಜಲಿಯ ಸಂಸ್ಥೆಯ ರತ್ನರಾವ್ ಮತ್ತಿತರರು ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಯೋಗ ತನ್ನ ಮಹತ್ವ ಹೆಚ್ಚಿಸಿಕೊಳ್ಳುವುದರೊಂದಿಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿಯೂ ಪಸರಿಸುತ್ತಿದೆ. ವಿಶ್ವಯೋಗ ದಿನದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಸುವ ಮೂಲಕ ಯೋಗದ ಮಹತ್ವ ಜಗತ್ತಿಗೆ ಸಾರುವ ಕೆಲಸ ನಡೆಯುತ್ತಿದೆ. ಇದೇ ಜೂ. 21 ರಂದು ಯೋಗ ದಿನಾಚರಣೆ ಅಂಗವಾಗಿ ನಡೆಯುವ ಬೃಹತ್ ಯೋಗ ಪ್ರದರ್ಶನದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ.
-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ.
ಜೂ.21ರಂದು ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ನಡೆಯುವ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ 1 ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನದ ಏರ್ಪಡಿಸುವ ಉದ್ದೇಶ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ತಾಲೀಮು ನಡೆಸಲಾಗಿದ್ದು,ಎಲ್ಲಾ ಯೋಗ ಶಾಲೆಗಳು ಹಾಗೂ ಸಂಸ್ಥೆಗಳಿಗೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
-ಎಸ್.ಎ. ರಾಮದಾಸ್, ಶಾಸಕ.
ನೆರವು ನೀಡುವ ಭರವಸೆ: ಜೂ.21ರಂದು ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ 50 ಲಕ್ಷ ರೂ. ವೆಚ್ಚವಾಲಿದ್ದು, 40 ಲಕ್ಷ ರೂ. ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್ ಅವರಿಗೆ ಯೋಗ ಸಮಿತಿ ಮನವಿ ಮಾಡಿದೆ.
ಇದಕ್ಕೆ ಸಚಿವ ಸಾ.ರಾ,. ಮಹೇಶ್ ಅವರಿಂದಲೂ ಸಕಾರಾತ್ಮ ಸ್ಪಂದನೆ ದೊರೆತಿದೆ ಎನ್ನಲಾಗಿದೆ. ಈ ನಡುವೆ ಕೆಲವು ವ್ಯಕ್ತಿಗಳು ಆರ್ಥಿಕ ನೆರವು ನೀಡಲು ಮುಂದಾಗಿದ್ದು, ಜತೆಗೆ ಜೂ.21ರಂದು ಮುಂಜಾನೆಯೇ ಮೈಸೂರಿನ ವಿವಿಧೆಡೆಯಿಂದ ರೇಸ್‌ಕೋರ್ಸ್ ಬಳಿಗೆ ಕಳೆದ ಬಾರಿಯಂತೆ ಉಚಿತವಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆಯೂ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.