![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 17, 2023, 12:24 PM IST
ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಪರಿಸರ ಸೂಕ್ಷ್ಮ ವಲ ಯವೂ ಆಗಿರುವ ಚಾಮುಂಡಿ ಬೆಟ್ಟ ಅರಣ್ಯ ಪ್ರದೇಶದ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ವಿಲೇವಾರಿ, ಅನಧಿಕೃತ ಪ್ರವೇಶಕ್ಕೆ ಕಡಿ ವಾಣ ಹಾಕಿದ್ದು ನಿಯಮ ಉಲ್ಲಂಘಿಸುವ ಪ್ರವಾಸಿಗರು ಮತ್ತು ಭಕ್ತರಿಗೆ ದಂಡ ಬೀಳಲಿದೆ!.
ಇಲಾಖೆ ಕ್ರಮ: ಚಾಮುಂಡಿಬೆಟ್ಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುವ ಜತೆಗೆ ಅನುಮತಿ ಇಲ್ಲದೇ ಚಾಮುಂಡಿ ಬೆಟ್ಟ ಮೀಸಲು ಅರಣ್ಯದೊಳಗೆ ಅತಿಕ್ರಮ ಪ್ರವೇಶಿಸುವುದು, ಮದ್ಯಪಾನ ಒಳಗೊಂಡಂತೆ ಹಾನಿಕಾರಕ ವಸ್ತುಗಳನ್ನು ಕಾಡಿನೊಳಗೆ ಬಳಸುವುದು ಮತ್ತು ತ್ಯಾಜ್ಯ ವಿಲೇ ಮಾಡಿ ಅರಣ್ಯಕ್ಕೆ ಹಾನಿ ಮಾಡುತ್ತಿರುವುದನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ವಿಲೇವಾರಿ, ಅನಧಿಕೃತ ಪ್ರವೇಶ, ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ ನಾಗರಿಕರು ದಂಡ ಪಾವತಿಸಬೇಕಾಗುತ್ತದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರ ಡಿಸಿದ್ದಾರೆ.
ಕಾಡ್ಗಿಚ್ಚಿಗೂ ಕಾರಣ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು, ಭಕ್ತರು ತಿಂಡಿ ತಿನಿಸು ಸೇವಿಸಿ ನಂತರ ಎಲ್ಲೆಂದರಲ್ಲಿ ಆಹಾರ ಪೊಟ್ಟಣಗಳನ್ನು ವಿಲೇ ಮಾಡುತ್ತಿರುವುದು ಹಾಗೂ ಪ್ಲಾಸ್ಟಿಕ್ ಬಿಸಾಡುತ್ತಿರು ವುದರಿಂದ ಬೇಸಿಗೆಯಲ್ಲಿ ಅರಣ್ಯ ಬೆಂಕಿಗೆ ಇದು ಕಾರಣವಾಗಲಿದೆ. ಈ ತ್ಯಾಜ್ಯ ಕಚ್ಚಾ ವಸ್ತುವಾಗಿರು ವುದಲ್ಲದೆ ಬೆಂಕಿಯನ್ನು ಸುಲಭವಾಗಿ ನಂದಿಸಲೂ ಸಾಧ್ಯವಾಗದ ತೀವ್ರತರಹದ ಅರಣ್ಯ ಬೆಂಕಿಗೂ ಕಾರಣವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಮಾವನ-ಪ್ರಾಣಿ ಸಂಘರ್ಷ: ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು, ಪ್ರವಾಸಿಗರು, ಪ್ರಾಣಿಗಳಿಗೆ ತಿಂಡಿ-ತಿನಿಸು ನೀಡುತ್ತಿರುವುದು ವನ್ಯಜೀವಿಗಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವು ದಲ್ಲದೇ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿಸುತ್ತದೆ. ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಇತರೇ ಸುಲಭವಾಗಿ ಕೊಳೆಯದ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಪರಿಸರ ಮಾಲಿನ್ಯವಾಗುತ್ತಿದೆ.
ಪರಿಸರ ಸೂಕ್ಷ್ಮ ಪ್ರದೇಶದ ಚಾಮುಂಡಿ ಬೆಟ್ಟದ ನೈಸರ್ಗಿಕ ಸಂಪತ್ತನ್ನು ಇಂತಹ ವಿನಾಶಕಾರಿ ಚಟುವಟಿಕೆ ವಸ್ತುಗಳಿಂದ ರಕ್ಷಿಸಲು, ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು, ಭಕ್ತರಿಗೆ ಅರಿವು ಮೂಡಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿ, ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದೆ.
ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಇಂತಿದೆ:
ಚಾಮುಂಡಿ ಬೆಟ್ಟ ಸೂಕ್ಷ್ಮ ಪರಿಸರ ವಲಯ ಆಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ, ಅಕ್ರಮ ಪ್ರವೇಶ, ತಡರಾತ್ರಿ ಪ್ರವೇಶ, ವಾಹನಗಳ ನಿಲುಗಡೆ ನಿರ್ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು. -ಬಸವರಾಜು, ಡಿಸಿಎಫ್ ಮೈಸೂರು
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.