ಬಂಡೀಪುರಕ್ಕೆ ಬೆಂಕಿ: ಗಾಳಿ ತೀವ್ರತೆಗೆ ಹಬ್ಬುತ್ತಿರುವ ಕಿಡಿ


Team Udayavani, Mar 21, 2019, 10:29 AM IST

mys.jpg

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡಿದ್ದ ಬೆಂಕಿಯು ಬುಧವಾರ ಮಧ್ಯಾಹ್ನದ ವೇಳೆಗೆ ಆರಿದಂತೆ ಕಂಡು ಬಂದರೂ, ಮಧ್ಯಾಹ್ನ ನಂತರ ಮುಂದುವರಿದಿದೆ.

ಬಂಡೀಪುರ ಉದ್ಯಾನದ ಅರಣ್ಯ ವಲಯಗಳಾದ ಕುಂದಕೆರೆ, ಗೋಪಾಲಸ್ವಾಮಿ ಬೆಟ್ಟ, ಮೂಲೆಹೊಳೆ, ಬಂಡೀಪುರ ಮತ್ತು ಮದ್ದೂರಿನಿಂದ ವಲಯ ಅರಣ್ಯಾಧಿಕಾರಿಗಳು, ಅರಣ್ಯ ವೀಕ್ಷಕರು, ರಕ್ಷಕರು ಮತ್ತು ಸ್ವಯಂ ಸೇವಕರ ತಂಡ ಬುಧವಾರ ಬೆಳಗ್ಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ತಮಿಳುನಾಡಿನ ಮಧುಮಲೈ ಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ತಮಿಳುನಾಡಿನ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡ ನಿಯಂತ್ರಣಕ್ಕೆ ತಂದಿತ್ತು. ಆದರೆ, ಬುಧವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಕುಂದುಕೆರೆ ಅರಣ್ಯ ವಲಯಕ್ಕೆ ಸೇರಿದ ದೇವರ ಮಡು ಮತ್ತು ಛತ್ರದಟ್ಟಿ ಮಾಳ ಗಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅರಣ್ಯ ಇಲಖೆ ಸಿಬ್ಬಂದಿ ತ್ವರಿತಗತಿಯಲ್ಲಿ ಹನ್ನೊಂದು ಜೀಪುಗಳಲ್ಲಿ ಆಗಮಿಸಿ, ದೊಡ್ಡಕೆರೆ ಪಾತೆಯ ಬಳಿಗೆ ಬೆಂಕಿ ಹರಡುವಷ್ಟರಲ್ಲಿ ನಿಯಂತ್ರಣಕ್ಕೆ ತಂದರು. ಒಟ್ಟಾರೆ ಬುಧವಾರ ಕೂಡ 50 ಎಕರೆಗೂ ಹೆಚ್ಚಿನ ಅರಣ್ಯ ಭಸ್ಮವಾಗಿದೆ. ಆದರೆ, ಕುಂದುಕರೆಯ ವಿರುದ್ಧ ದಿಕ್ಕಿನಲ್ಲಿ ಗಾಳಿ ತೀವ್ರವಾಗಿರುವ ಪರಿಣಾಮ ತಮಿಳುನಾಡಿನ ಮಧುಮಲೈ ಅರಣ್ಯಕ್ಕೆ ಸೇರಿದ ಮಾಯಾರ್‌ ಬಳಿ ಬೆಂಕಿ ಕಂಡು ಬಂದಿದೆ. ಬುಧವಾರ ಸಂಜೆಯೊಳಗೆ ಬೆಂಕಿ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲಿಗೆ ತಮಿಳುನಾಡಿಗೆ ಸೇರಿದ ಕನ್ನಡಿಗರ ಯಾತ್ರಾ ಕೇಂದ್ರ ಕೊಂಗಳ್ಳಿ ಬೆಟ್ಟದ ಬಳಿ ಮಧುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಪ್ರಾರಂಭವಾದ ಬೆಂಕಿಯು ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕೆ‌ರೆ ಅರಣ್ಯ ವಲಯಕ್ಕೂ ಹಬ್ಬಿದೆ. ಕುಂದುಕೆರೆ ಅರಣ್ಯ ವಲಯದ ಕುಂದುಕೆರೆ ಗ್ರಾಮದ ಬಳಿಯಿಂದ ಕೇವಲ ಒಂದು ಕಿಲೋಮೀಟರ್‌ ದೂರದಲ್ಲಿಯೇ ಬೆಂಕಿ ಉರಿಯುತ್ತಿದೆ. ನಂತರ ಬಂಡೀಪುರ ಅರಣ್ಯ ವಲಯದತ್ತ ಬೆಂಕಿಯು ಹಬ್ಬುತ್ತಿದ್ದು, ಕುಂದುಕೆರೆ ಅರಣ್ಯ ವಲಯದ ಕಾಡಂಚಿನ ಗ್ರಾಮಗಳಾದ ಕಡಬೂರು, ಚಿರಕನಹಳ್ಳಿ ಮತ್ತು ಉಪಕಾರ ಕಾಲೋನಿಗಳ ಅರಣ್ಯದ ಗಡಿಯಂಚನ್ನು ದಾಟಿ ಬೆಂಕಿಯು ಮುನ್ನುಗ್ಗುತ್ತಿದೆ. ಈಗಾಗಲೇ ತಮಿಳು ನಾಡಿನ ಮಧುಮಲೈ ಅರಣ್ಯದ 150ಕ್ಕೂ ಹೆಚ್ಚು ಎಕರೆ ಹಾಗೂ ಬಂಡೀಪುರದ 80ಕ್ಕೂ ಹೆಚ್ಚು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ. ಗಾಳಿಯು ತೀವ್ರಗತಿಯಲ್ಲಿ ಬೀಸುತ್ತಿರುವುದರಿಂದ ಬೆಂಕಿ ಹರಡುವ ವೇಗವು ಹೆಚ್ಚುತ್ತಿದೆ.

ಬುಧವಾರ ಬೆಳಗಿನ ವೇಳೆಗೆ ಬಂಡೀಪುರ ಅರಣ್ಯ ವಲಯವನ್ನು ಬೆಂಕಿಯು ಪ್ರವೇಶಿಸುವ ಸಾಧ್ಯತೆಯಿದೆ. ಈಗಾಗಲೇ ಎಸಿಎಫ್ ರವಿಕುಮಾರ್‌ ಮತ್ತು ಕುಂದುಕೆರೆ ವಲಯಾರಣ್ಯಾಧಿಕಾರಿ ಮಂಜುನಾಥ್‌ ನೇತೃತ್ವದ ತಂಡ ಬೆಂಕಿ ಅರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ, ಆದರೆ, ಗಾಳಿಯ ತೀವ್ರತೆಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತ್ಯಕ್ಷದರ್ಶಿಗಳಾದ ಕುಂದುಕೆರೆ ಗ್ರಾಮದ ರೈತ ಸಂಘದ ತಾಲೂಕು ಅಧ್ಯಕ್ಷ ಸಂಪತ್‌ ಅವರು ತಿಳಿಸಿದಂತೆ ಸುಟ್ಟು ಭಸ್ಮವಾದ ಅರಣ್ಯದ ಬೂದಿಯು ಗ್ರಾಮದತ್ತ ತೂರಿ ಬರುತ್ತಿದ್ದು, ಮನೆಗಳ ಮೇಲೆ ಬೀಳುತ್ತಿದೆ. ಉಸಿರಾಡಲು ಕಷ್ಟಕರವಾಗಿದೆ, ಉಸಿರಾಡಿದರೆ ಬೂದಿಯೇ ಮೂಗಿಗೆ ನುಗ್ಗುತ್ತಿದೆ ಎಂದು ತಿಳಿಸಿದರು.

ಯಾತ್ರಾರ್ಥಿಗಳು ಬೆಂಕಿ ಹಚ್ಚಿರುವ ಶಂಕೆ ಗುಂಡ್ಲುಪೇಟೆ ತಾಲೂಕಿನ ಕುಂದುಕೆರೆ ಬಳಿಯ ಗಿರಿಜನರು ವಾಸವಿರುವ ಕಾಲೋನಿಯೊಂದ ರಿಂದ ಕಳೆದ ಸೋಮವಾರ ತಮಿಳುನಾಡಿನ ಕೊಂಗಳ್ಳಿ ಬೆಟ್ಟಕ್ಕೆ ಪೂಜೆಗೆಂದು ಕೆಲವು ವ್ಯಕ್ತಿಗಳು ತೆರಳಿದ್ದರು. ಅವರು ವಾಪಾಸ್‌ ಹಿಂತಿರುಗುವ ವೇಳೆಯಲ್ಲಿ ನಾಲ್ಕಾರು ಕಡೆ ಬೇಕಂತಲೇ ಬೆಂಕಿ ಹಚ್ಚಿ ವಾಪಾಸಾಗಿದ್ದಾರೆ ಎಂಬ ಮಾತುಗಳು ಈ ಭಾಗದ ಸಾರ್ವಜನಿಕರಲ್ಲಿ ಕೇಳಿ ಬಂದಿವೆ. 

ಇದನ್ನು ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳೂ ಕೂಡ ದೃಢಪಡಿಸಿದ್ದು, ಕಾಡ್ಗಿಚ್ಚಿಗೆ ಕಾರಣರಾದ ವ್ಯಕ್ತಿಗಳನ್ನು ಶೀಘ್ರವೇ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ. 

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

HDK

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.