![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 10, 2022, 7:30 AM IST
ಮೈಸೂರು: ವಿಜಯದಶಮಿಯಂದು ನಡೆಯುವ ಜಂಬೂಸವಾರಿಯ ರೂವಾರಿಗಳಾದ ಗಜಪಡೆ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಎಲ್ಲಾ ಆನೆಗಳು 125 ರಿಂದ 425 ಕೆ.ಜಿಯವರೆಗೆ ತೂಕ ಹೆಚ್ಚಿಸಿಕೊಂಡಿವೆ.
ಅರಮನೆ ಆವರಣದಲ್ಲಿ ಉಳಿದುಕೊಂಡಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಎಲ್ಲಾ 14 ಆನೆಗಳಿಗೂ ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ನಲ್ಲಿ ಶುಕ್ರವಾರ ತೂಕ ಪರೀಕ್ಷೆ ನಡೆಯಿತು.
ಆ.10ರಂದು ಅರಮನೆ ಪ್ರವೇಶಿಸಿದ ಗಜಪಡೆಗೆ ಮರುದಿನ (ಆ.11) ಮೊದಲ ತಂಡದಲ್ಲಿ ಆಗಮಿಸಿದ್ದ 9 ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಶುಕ್ರವಾರ ಮೊದಲ ಮತ್ತು ಎರಡನೇ ತಂಡ ಸೇರಿ ಎಲ್ಲಾ 14 ಆನೆಗಳಿಗೂ ನಡೆಸಿದ ತೂಕ ಪರೀಕ್ಷೆಯಲ್ಲಿ ಅಂಬಾರಿ ಆನೆ ಅಭಿಮನ್ಯು 4770 ರಿಂದ 5 ಸಾವಿರ ಕೆ.ಜಿಗೆ ಹೆಚ್ಚಳವಾಗಿದ್ದು, ಒಟ್ಟು 230 ಕೆ.ಜಿ. ಹೆಚ್ಚಿಸಿಕೊಂಡಿರುವುದು ವಿಶೇಷ.
ಇಡೀ ಗಜಪಡೆಯಲ್ಲಿ ಹಲವು ವರ್ಷಗಳಿಂದ ಅತಿ ಹೆಚ್ಚು ತೂಕದ ಆನೆ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ಯಾಪ್ಟನ್ ಅರ್ಜುನ 63ನೇ ವಯಸ್ಸಿನಲ್ಲೂ ಬರೋಬ್ಬರಿ 5950 ಕೆ.ಜಿ ತೂಗಿದನು. ಎಂಟು ಬಾರಿ ಅಂಬಾರಿ ಹೊತ್ತು, ಅಭಿಮನ್ಯುವಿಗೆ ಜವಾಬ್ದಾರಿ ವಹಿಸಿ ಗಜಪಡೆಯ ಸದಸ್ಯನಾಗಿರುವ ಅರ್ಜುನ ಮೊದಲ ಪರೀಕ್ಷೆಯಲ್ಲಿ 5775ರಿಂದ 5950 ಕೆ.ಜಿಗೆ ಏರಿಕೆ ಕಂಡಿದ್ದಾನೆ. ಈ ಮೂಲಕ ಎಲ್ಲಾ ಆನೆಗಳಿಂದ ನಾನೇ ಹೆಚ್ಚು ತೂಕ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ. ನಂತರದ ಸ್ಥಾನದಲ್ಲಿ ಗೋಪಾಲಸ್ವಾಮಿ 5,460 ಕೆ.ಜಿ, ಧನಂಜಯ 4890 ಕೆ.ಜಿ ತೂಗುವ ಮೂಲಕ ಎರಡೂ ಆನೆಗಳು ಕ್ರಮವಾಗಿ 320, 80 ಕೆ.ಜಿ.ಹೆಚ್ಚಿಸಿಕೊಂಡಿವೆ.
425 ಕೆ.ಜಿ ಹೆಚ್ಚಿಸಿಕೊಂಡ ಭೀಮ:
2ನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಭೀಮ ಒಂದು ತಿಂಗಳಲ್ಲಿ ಎಲ್ಲ ಆನೆಗಳಿಗಿಂತ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು. ಹಾಗಯೇ ಮಹೇಂದ್ರ 4,450 ಕೆ.ಜಿ ತೂಗುವ ಮೂಲಕ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
ಉಳಿದಂತೆ ಹೆಣ್ಣಾನೆಗಳಲ್ಲಿ ಕಾವೇರಿ 3,245, ಚೈತ್ರಾ 3,235 ಹಾಗೂ ಲಕ್ಷ್ಮೀ 3,150 ಕೆ.ಜಿ ತೂಕವನ್ನು ಹೊಂದಿವೆ.
ಆ.7ರಂದು 2ನೇ ತಂಡದಲ್ಲಿ ಅರಮನೆಗೆ ಆಗಮಿಸಿದ 5 ಆನೆಗಳಿಗೂ ಪರೀಕ್ಷೆ ನಡೆಸಿದ್ದು, ಶ್ರೀರಾಮ 4475, ಸುಗ್ರೀವ 4,785, ಗೋಪಿ 4,460, ಪಾರ್ಥಸಾರಥಿ 3,445 ಹಾಗೂ ಹೆಣ್ಣಾನೆ ವಿಜಯಾ 2,760 ಕೆ.ಜಿ ತೂಗಿದವು.
ಗಜಪಡೆಗೆ ಪ್ರತಿವರ್ಷದಂತೆ ವಿಶೇಷ ಆಹಾರ ನೀಡಿದ್ದು, ಎಲ್ಲ ಆನೆಗಳಿಗೂ ತೂಕ ಹೆಚ್ಚಾಗಿದೆ. ಕಾಡಾನೆಯಿಂದ ದಾಳಿಗೊಳಗಾಗಿದ್ದ ಭೀಮ ಆನೆ 425 ಕೆ.ಜಿ ಹೆಚ್ಚಿಸಿಕೊಂಡಿರುವುದು ಸಂತಸ ತಂದಿದೆ. ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನೀಡಲಾಗುತ್ತಿದ್ದು, ಸೆ.12ರ ಕುಶಾಲ ತೋಪಿನ ನಂತರ ಅರಮನೆಯಿಂದ ಬನ್ನಿಮಂಟಪದವರೆಗೂ ಎಲ್ಲ 14 ಆನೆಗಳು ನಡಿಗೆ ತಾಲೀಮಿನಲ್ಲಿ ಭಾಗಿಯಾಗಲಿವೆ.
– ಡಾ.ವಿ.ಕರಿಕಾಳನ್, ಡಿಸಿಎಫ್ ವನ್ಯಜೀವಿ ವಿಭಾಗ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.