![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 15, 2024, 12:27 PM IST
ಹುಣಸೂರು: ಮಾಂಸದ ಊಟ ಸೇವಿಸಿದ ನಂತರ ಅತಿಯಾದ ವಾಂತಿ – ಬೇಧಿಯಿಂದ ಬಳಲುತ್ತಿದ್ದ ಸಹೋದರರ ಪೈಕಿ ಅಣ್ಣ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಬ್ಬೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಬ್ಬೂರಿನ ಅಶೋಕ- ಸವಿತ ದಂಪತಿಯ ಮೊದಲ ಪುತ್ರ ಪ್ರದೀಪ್‌ಕುಮಾರ್(12) ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಈತನ ಸಹೋದರ ರಜತ್‌ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ.
ಆಗಿರೋದಿಷ್ಟು:
ಹಬ್ಬದಂದು ಮಾಂಸದ ಅಡುಗೆ ಮಾಡಿದ್ದರು. ಮನೆಯವರೊಂದಿಗೆ ಸಹೋದದರು ಸಹ ಮಾಂಸದೂಟ ಸೇವಿಸಿದ್ದ ಪ್ರದೀಪ್‌ಕುಮಾರ್ ಮತ್ತು ರಜತ್‌ಕುಮಾರ್ ಸಹೋದರರಿಬ್ಬರಿಗೂ ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ನಡುವೆ ಮನೆಯಲ್ಲಿ ಮಾಡಿದ್ದ ಮಾಂಸದ(ಲಾಕಿ) ಅಡುಗೆ ತಿಂದಿದ್ದರಿಂದಾಗಿ ವಾಂತಿ-ಬೇಧಿ ಹೆಚ್ಚಾಗಿ ಜ್ವರ ಕಾಣಿಸಿಕೊಂಡು ನಿತ್ರಾಣಗೊಂಡು ಶನಿವಾರದಂದು ಹನಗೋಡು ಆಸ್ಪತ್ರೆಯ ವೈದ್ಯ ಡಾ. ಜೋಗೇಂದ್ರನಾಥ್ ಚಿಕಿತ್ಸೆ ನೀಡುತ್ತಿದ್ದ ವೇಳೆ ಪಿಟ್ಸ್ ಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಪ್ರದೀಪ್ ಕುಮಾರ್ ಸಾವನ್ನಪ್ಪಿದ್ದು, ಈತನ ಸಹೋದರ ರಜತ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ.
ಫುಡ್ ಪಾಯಿಸನ್ ಕಾರಣ ಟಿ.ಎಚ್.ಓ ಸ್ಪಷ್ಟನೆ:
ಮಾಂಸ ಆಹಾರ ಸೇವಿಸಿದ ನಂತರ ಫುಡ್ ಫಾಯಿಸನ್ ಆಗಿ ಪರಿವರ್ತನೆಯಾಗಿದ್ದು, ವಾಂತಿ- ಭೇದಿ ಜೊತೆಗೆ ನಿತ್ರಾಣಗೊಂಡು ತೀವ್ರಜ್ವರ ಕಾಣಿಸಿಕೊಂಡಿದೆ. ಅಕ್ವಿಟ್ ವೈರಲ್ ಎನ್ಫಲಾಟೀಸ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆಂದು ಟಿಎಚ್.ಓ.ಡಾ.ಕೀರ್ತಿಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Iran-Israel ಯುದ್ಧ: ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.