ಪಾಳು ಬಿದ್ದ ಕಲ್ಯಾಣಿಗೆ ಕಾವಾ ಕಲಾಶೃಂಗಾರ
Team Udayavani, Feb 5, 2018, 12:43 PM IST
ಮೈಸೂರು: ಪರಿಣಾಮಕಾರಿ ಮಾಧ್ಯಮವೆಂದೇ ಕರೆಯಲ್ಪಡುವ ಕಲೆಯನ್ನು ಬಳಸಿಕೊಂಡು ಮೈಸೂರಿನ ಕಾವಾ ಕಾಲೇಜಿನ ವಿದ್ಯಾರ್ಥಿಗಳು ಪಾಳು ಬಿದಿದ್ದ ಕಲ್ಯಾಣಿಗೆ ಹೊಸ ಸ್ಪರ್ಶ ನೀಡುವ ಮೂಲಕ ಸಾರ್ವಜನಿಕರ ಆಕರ್ಷಣೆ ಸ್ಥಳವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು(ಕಾವಾ) ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಕಲೆಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಸಲಾಯಿತು. ಈ ಕಾರ್ಯಗಾರದ ನೆಪದಲ್ಲಿ ಪುರಾತನ ಕಲ್ಯಾಣಿಗೆ ವೈಭವದ ಲುಕ್ ಕೊಡುವ ಪ್ರಯತ್ನ ಮಾಡಿದ ಕಾವಾ ವಿದ್ಯಾರ್ಥಿಗಳು,
ಹಳೆಯ ಕಲ್ಯಾಣಿ ಆವರಣದಲ್ಲಿ ಬಿದ್ದಿದ್ದ ಕಲೆವೊಂದು ವಸ್ತುಗಳನ್ನು ಬಳಸಿಕೊಂಡು ಕಸದಿಂದ ರಸ ಎಂಬಂತೆ ಕಲ್ಯಾಣಿಯ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ. ಕಾವಾ ವಿದ್ಯಾರ್ಥಿಗಳ ಅಪರೂಪದ ಪ್ರಯತ್ನಕ್ಕೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ಸಾರ್ವಜನಿಕರು ಮನಸೋತಿದ್ದಾರೆ.
ಹಳೆ ಜಾಗಕ್ಕೆ ಹೊಸ ಲುಕ್: ನಗರದ ಸಿದ್ದಾರ್ಥ ಬಡಾವಣೆಯ ಸಮೀಪವಿರುವ ಟೇರಿಷಿಯನ್ ಕಾಲೇಜು ಪಕ್ಕದ ಹಳೆಯ ಕಲ್ಯಾಣಿಯೊಂದು ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿತ್ತು. ಇನ್ನೂ ಕಲ್ಯಾಣಿಗೆ ಇರುವ ಪುರಾತನ ಇತಿಹಾಸವನ್ನು ಮರೆತಿದ್ದ ಒಂದಿಷ್ಟು ಮಂದಿ ಕಲ್ಯಾಣಿ ಆವರಣದಲ್ಲಿ ನಿರುಪಯುಕ್ತ ವಸ್ತುಗಳು, ಕಸದ ರಾಶಿಯನ್ನು ತಂದು ಬಿಸಾಡಿದ್ದರು.
ಇದರಿಂದಾಗಿ ರಸ್ತೆಯ ಪಕ್ಕದಲ್ಲೇ ಇದ್ದ ಕಲ್ಯಾಣಿಯತ್ತ ಯಾರೊಬ್ಬರು ನಿಗಾವಹಿಸುತ್ತಿರಲಿಲ್ಲ. ಆದರೆ, ನಗರದ ಪ್ರತಿಷ್ಠಿತ ಕಾವಾ ಕಾಲೇಜಿನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನಡೆಸಲಾದ ಸೈಟ್ ಸ್ಪೇಸಿಫಿಕ್ ವಿಷಯ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಪಾಳು ಬಿದ್ದಿದ್ದ ಕಲ್ಯಾಣಿಗೆ ಹೊಸ ಸ್ಪರ್ಶ ನೀಡಲು ವಿದ್ಯಾರ್ಥಿಗಳು ನಿರ್ಧರಿಸಿದರು.
ಈ ಹಿನ್ನೆಲೆಯಲ್ಲಿ ಪಾರಂಪರಿಕ ಸ್ಥಳದಲ್ಲಿ ವಿನೂತನ ಕಾರ್ಯಗಾರದಲ್ಲಿ ಭಾಗವಹಿಸಿದ ಕಾವಾ ಕಾಲೇಜಿನ ಅಂದಾಜು 40 ಪದವಿ ಹಾಗೂ ಸ್ನಾತಕೋತ್ತರ ವಿಬಾಗದ ವಿದ್ಯಾರ್ಥಿಗಳು 4-5 ದಿನಗಳವರೆಗೆ ಇಡೀ ಕಲ್ಯಾಣಿಯ ಆವರಣವನ್ನು ಸ್ವತ್ಛಗೊಳಿಸಿ, ಆವರಣದಲ್ಲಿ ದೊರೆತ ವಸ್ತುಗಳನ್ನ ಬಳಸಿಕೊಂಡು ಕಲ್ಯಾಣಿ ಪ್ರದೇಶವನ್ನ ಶೃಂಗರಿಸಿದ್ದಾರೆ.
ಕಲ್ಯಾಣಿಯ ಆಕರ್ಷಣೆ: ಕಲ್ಯಾಣಿಗೆ ಹೊಸ ಲುಕ್ ನೀಡಿರುವ ವಿದ್ಯಾರ್ಥಿಗಳು ಇದಕ್ಕಾಗಿ ಹೊರಗಿನಿಂದ ಯಾವುದೇ ವಸ್ತುಗಳನ್ನು ಬಳಿಸದಿರುವುದು ವಿಶೇಷ. ಕಲ್ಯಾಣಿ ಸ್ವತ್ಛಗೊಳಿಸುವಾಗ ದೊರೆತ ವಸ್ತುಗಳನ್ನೇ ಬಳಸಿಕೊಂಡಿರುವ ವಿದ್ಯಾರ್ಥಿಗಳು ಬಣ್ಣ ಒಂದನ್ನ ಬಿಟ್ಟು ಬೇರಾವುದೇ ವಸ್ತುಗಳನ್ನು ಹೊರಗಿಂದ ತಂದಿಲ್ಲ ಹಾಗೂ ಒಳಗಿನಿಂದ ಯಾವುದೇ ವಸ್ತುವನ್ನು ಸಹ ಹೊರಗೆ ಕೊಂಡೊಯ್ದಿಲ್ಲ.
ಹೀಗಾಗಿ ನಿರುಪಯುಕ್ತ ವಸ್ತಗಳನ್ನೇ ಸಂಪೂರ್ಣವಾಗಿ ಬಳಸಿಕೊಂಡಿರುವ ಕಾವಾ ವಿದ್ಯಾರ್ಥಿಗಳು, ಇತಿಹಾಸವನ್ನ ಸಾರುವ ಕಲ್ಯಾಣಿಯ ಅಂದವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಕಲ್ಯಾಣಿ ಆವರಣದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಬೆಳಕಿನಲ್ಲೆ ಮೂಡಿದ ಸಾಲು ಸಾಲು ದೀಪಗಳ ಚಿತ್ತಾರ,
ತ್ಯಾಜ್ಯದಿಂದಲೇ ಎದ್ದು ನಿಂತ ಮಹಾರಾಜರ ಸಿಂಹಾಸನ, ವಿಭಿನ್ನ ಕಲಾಕೃತಿಗಳು, ಬಣ್ಣ ಬಣ್ಣದ ಚಿತ್ರಗಳನ್ನ ಬಿಡಿಸಿ ಕಲ್ಯಾಣಿಯ ಅಂದಕ್ಕೆ ಮೆರಗು ನೀಡಿದ್ದಾರೆ. ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಕಾವಾ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥರಾದ ಪೊ›. ರಾಥೋಡ್, ನಿವೃತ್ತ ಪ್ರಾಧ್ಯಾಪಕ ಬಸವರಾಜು ಮತ್ತಿತರರು ಬೆನ್ನುತಟ್ಟಿ ಪೋ›ತ್ಸಾಹ ನೀಡಿದ್ದಾರೆ.
ಕಲ್ಯಾಣಿಯ ಇತಿಹಾಸ: ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಪುರಾತನ ಕಲ್ಯಾಣಿಗೆ ತನ್ನದೆ ಆದ ಇತಿಹಾಸವಿದೆಯಂತೆ. ಮೈಸೂರು ಅರಸರ ಮರದ ಅರಮನೆ ಬೆಂಕಿ ಅನಾಹುತದಿಂದ ಸುಟ್ಟುಹೋದ ಸಂದರ್ಭದಲ್ಲಿ ಮೈಸೂರು ಅರಸರು ಇದೇ ಕಲ್ಯಾಣಿಯ ಆವರಣದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರೆಂಬ ಇತಿಹಾಸವಿದ್ದು,
ಆ ಸಂದರ್ಭದಲ್ಲೇ ಕಲ್ಯಾಣßಗೆ ಭವ್ಯ ಸ್ವಾಗತ ಕಮಾನುಗಳನ್ನು ಹಾಗೂ ಮಲೆ ಮಹದೇಶ್ವರನ ದೇವಾಲಯವನ್ನು ಕಟ್ಟಿಸಿದ್ದಾರೆ ಎಂಬ ಮಾತಿದೆ. ಹೀಗಿರುವ ಕಲ್ಯಾಣಿ 40 ಅಡಿ ಅಳವಿದ್ದು, ಇಂದಿಗೂ ಇಲ್ಲಿ ಅಂತರ್ಜಲ ಬತ್ತದಿರುವುದು ಈ ಜಾಗದ ಇತಿಹಾಸಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಆದರೆ, ಸ್ಥಳೀಯ ಆಡಳಿತ ಸಂಸ್ಥೆಗಳ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಕಲ್ಯಾಣಿ ಆವರಣ, ಸಂಪೂರ್ಣ ಕಸ ಹಾಗೂ ತ್ಯಾಜ್ಯವಸ್ತುಗಳಿಂದ ತುಂಬಿತ್ತು.
ಆದರೆ, ಇದೀಗ ಕಾವಾ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಸ್ಥಳದಲ್ಲಿ ಕಾರ್ಯಗಾರ ನಡೆಸಿ, ಇದರ ಫಲವಾಗಿ ಕಲ್ಯಾಣಿಗೆ ಹೊಸ ರೂಪವನ್ನು ನೀಡಿರುವುದರ ಹಿಂದೆ ಹಗಲು-ರಾತ್ರಿ ಎನ್ನದೇ ಶ್ರಮಿಸಿರುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸಾರ್ವಜನಿಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಇಂತಹ ಪ್ರಯತ್ನಕ್ಕೆ ಕೇವಲ ಕಾವಾ ವಿದ್ಯಾರ್ಥಿಗಳಷ್ಟೇ ಅಲ್ಲದೆ ಮೈಸೂರಿಗರು ಕೈಜೋಡಿಸಿದರೆ, ಪಾರಂಪರಿ ನಗರದಲ್ಲಿರುವ ಮತ್ತಷ್ಟು ಐತಿಹಾಸಿಕ ಸ್ಥಳಗಳನ್ನು ಉಳಿಸಬಹುದಾಗಿದೆ.
ಪುರಾತನ ಇತಿಹಾಸ ಹೊಂದಿದ್ದ ಕಲ್ಯಾಣಿ ಸರಿಯಾದ ನಿರ್ವಹO2/4/2018 8:15:20 ಇಲ್ಲದೆ ಹಾಳಾಗಿತ್ತು. ಹೀಗಾಗಿ ಕಲೆಯ ಮೂಲಕ ಇದನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ. ಇಂತಹ ಪ್ರಯತ್ನದಲ್ಲಿ ಕಾವಾ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಇದು ಕೇವಲ ಆರಂ¸ವಾಗಿದ್ದು, ಕಲೆಯ ಮೂಲಕ ಮುಂದೆ ಇಂತಹ ಸಾಕಷ್ಟು ಪ್ರಯತ್ನಗಳನ್ನು ಮಾಡಬಹುದಾಗಿದೆ.
-ಸುರೇಖಾ, ಕಲಾ ನಿರ್ದೇಶಕಿ ಕಾವಾ ಕಾಲೇಜು.
ನಿತ್ಯವೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಕಲ್ಯಾಣಿಯನ್ನು ಸರಿಯಾಗಿ ನೋಡಿರಲಿಲ್ಲ. ಆದರೆ, ಕಾವಾ ವಿದ್ಯಾರ್ಥಿಗಳು ತಮ್ಮ ಕಲೆಯಿಂದ ಪಾಳುಬಿದ್ದಿದ್ದ ಕಲ್ಯಾಣಿಗೆ ಹೊಸ ರೂಪ ನೀಡಿ, ಕಲ್ಯಾಣಿಯ ಆಕರ್ಷಣೆ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರು ಪುರಾತನ ಕಲ್ಯಾಣಿಯನ್ನು ಸರಿಯಾದ ನಿರ್ವಹಣೆ ಮಾಡುವ ಬಗ್ಗೆ ಆಸಕ್ತಿವಹಿಸಬೇಕಿದೆ.
-ಪ್ರಕಾಶ್, ಸ್ಥಳೀಯ ನಿವಾಸಿ.
* ಸಿ. ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.