ರಸ್ತೆಯಲ್ಲಿರುವ ಮಣ್ಣು ತೆರವುಗೊಳಿಸಲು ಒತ್ತಾಯ
Team Udayavani, Apr 12, 2017, 1:12 PM IST
ಎಚ್.ಡಿ.ಕೋಟೆ: ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ಪುರಸಭೆ ಅಧ್ಯಕ್ಷೆ ಮಂಜುಳಾ ಪತಿಯೇ ಚರಂಡಿ ಕಾಮಗಾರಿಯೊಂದನ್ನು ನೆರವೇರಿಸಿ ಡಾಂಬರ್ ರಸ್ತೆ ಮಧ್ಯೆ ಸುರಿದಿದ್ದ ಮಣ್ಣು ಶುಚಿಗೊಳಿಸದೇ ರಸ್ತೆ ಸಂಚಾರಕ್ಕೆ ಸಂಚಕಾರವಾಗುತ್ತಿದ್ದರೂ ಪುರಸಭೆ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದೆ.
9ನೇ ವಾರ್ಡ್‌ನ ವಿಶ್ವನಾಥಯ್ಯ ಕಾಲೋನಿಯ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಗುತ್ತಿಗೆದಾರರೊಬ್ಬರ ಹೆಸರಿನಲ್ಲಿ ತಮ್ಮದಾಗಿಸಿಕೊಂಡ ಮಂಜುಳಾ ಪತಿ ಗೋವಿಂದಾಚಾರ್ ಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಗುಂಡಿ ಮಚ್ಚಿಸುವ ಸಲುವಾಗಿ ಲಾರಿಗಳಿಂದ ವಿಶ್ವನಾಥಯ್ಯ ಕಾಲೋನಿಯ ಡಾಂಬರ್ ರಸ್ತೆ ಮಧ್ಯೆಯೇ ಮಣ್ಣು ಸುರಿಸಲಾಗಿತ್ತು.
ಬಳಿಕ ಜೆಸಿಬಿ ಯಂತ್ರದಿಂದ ನೆಪಮಾತ್ರಕ್ಕೆ ಲಾರಿಯಿಂದ ರಸ್ತೆ ಮಧ್ಯೆ ಸುರಿದಿದ್ದ ಮಣ್ಣು ಸಮತಟ್ಟು ಮಾಡಿದ ಗುತ್ತಿಗೆದಾರ ರಸ್ತೆಯಲ್ಲಿ ಸುರಿದಿರುವ ಮಣ್ಣು ಶುಚಿಗೊಳಿಸಲು ಮುಂದಾಗಿಲ್ಲ. ಸೋಮವಾರ ರಾತ್ರಿ ಪಟ್ಟಣದಲ್ಲಿ ಬಿದ್ದ ಮಳೆಗೆ ಡಾಂಬರ್ ರಸ್ತೆಯಲ್ಲಿ ಸುರಿದಿದ್ದ ಮಣ್ಣು ಕೆಸರು ಗದ್ದೆಯಂತಾಗಿದೆ. ರಾತ್ರಿ ವೇಳೆ ಬೀದಿ ದೀಪ ಇಲ್ಲದ ಈ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಮಣ್ಣು ಸುರಿದಿರುವುದು ತಿಳಿಯದೆ ವೇಗವಾಗಿ ಬಂದು ಬಿದ್ದ ಅನೇಕ ಘಟನೆಗಳು ನಡೆದಿವೆ.
ಅಧ್ಯಕ್ಷರ ಮನೆಯ ಎದುರಿನಲ್ಲಿ ಚರಂಡಿ ಕಾಮಗಾರಿಗೂ ಮುನ್ನ ಸುಸ್ಥಿತಿ ಯಲ್ಲಿದ್ದ ರಸ್ತೆ ಬಳಿಕ ಹದಗೆಟ್ಟು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೂ ಸಂಬಂಧ ಗುತ್ತಿಗೆದಾರನಿಗೆ ಕಾಮಗಾರಿ ಹಕ್ಕು ನೀಡಿದ್ದ ಪುರಸಭೆ ಮಾತ್ರ ಕಂಡು ಕಾಣದಂತೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪುರಸಭೆ ಕೂಡಲೆ ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.