Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Team Udayavani, Nov 19, 2024, 11:43 PM IST

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

ಮೈಸೂರು: ಮುಡಾದಲ್ಲಿನ 50:50ರ ಅನುಪಾತದಲ್ಲಿನ ನಿವೇಶನ ಹಂಚಿಕೆ ಹಗರಣ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ವಿಜಯನಗರದಲ್ಲಿ 14 ಬದಲಿ ನಿವೇಶನ ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಸಂಬಂಧ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್‌ ಅವರನ್ನು ಮಂಗಳವಾರ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.

ಅಧಿಕಾರಿಗಳ ತಂಡವು ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಿತು. ಪ್ರತಿಯೊಂದಕ್ಕೂ ನಟೇಶ್‌ ತಾವು ಕೈಗೊಂಡ ಕ್ರಮದ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಂದರ್ಭ ನಟೇಶ್‌, ಮಾಧ್ಯಮ ಪ್ರತಿನಿಧಿಗಳನ್ನು ಕಂಡು ಸಿಡಿಮಿಡಿಗೊಂಡರು. ಮಾಧ್ಯಮ ಪ್ರತಿನಿಧಿಗಳು ಕೆಮರಾ ಹಿಡಿದು ಸುತ್ತುವರಿದಾಗ ನನ್ನನ್ನು ಯಾಕೆ ವೀಡಿಯೋಮಾಡುತ್ತಿದ್ದೀರಿ… ನಾನೇನು ಡ್ಯಾನ್ಸ್‌ ಮಾಡುತ್ತಿದ್ದೇನಾ?, ಕಾಮನ್‌ ಸೆನ್ಸ್‌ ಇಲ್ಲವಾ ಎಂದು ರೇಗಿದರು.

ಪತ್ನಿಗೆ ಬದಲಿ ಭೂಮಿ ತೀರ್ಮಾನಕ್ಕೆ ಸಿಎಂ ಒಪ್ಪಿರಲಿಲ್ಲ: ಧ್ರುವಕುಮಾರ್‌
ಮೈಸೂರು: ನನ್ನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಬದಲಿ ಭೂಮಿ ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ ಅದಕ್ಕೆ ಸಿದ್ದರಾಮಯ್ಯ ಒಪ್ಪಿರಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್‌ ಹೇಳಿದರು.

ಮೈಸೂರು ಲೋಕಾಯುಕ್ತ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ, ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಕಳೆದುಕೊಂಡ ಭೂಮಿಗೆ ಸಮಾನಂತರ ಬಡಾವಣೆಯಲ್ಲಿ ಭೂಮಿ ಕೊಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ವಿಚಾರವನ್ನು ನಾನೇ ಖುದ್ದಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ನಾನು ಸಿಎಂ ಆಗಿರುವ ಸಮಯದಲ್ಲಿ ಈ ನಿರ್ಣಯಗಳು ಬೇಡ ಎಂದಿ ದ್ದರು ಎಂದು ಹೇಳಿ ದರು. ನನ್ನ ಅವಧಿ ಮುಗಿದ ಬಳಿಕ ಮುಂದೆ ಏನಾಗಿದೆಯೋ ಗೊತ್ತಿಲ್ಲ. ಬುಧ ವಾರದ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಲು ಬಂದಿದ್ದೇನೆ ಎಂದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.