ಕೇಂದ್ರದ ಯೋಜನೆ ಜಾರಿಯಲ್ಲಿ ಕೋಟೆ ಫಸ್ಟ್, ನಂಜನಗೂಡು ಲಾಸ್ಟ್
Team Udayavani, Jan 11, 2019, 6:09 AM IST
ನಂಜನಗೂಡು: ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ತಾಲೂಕು ವಿಫಲವಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಕಿಡಿಕಾರಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ 21 ಯೋಜನೆಗಳ ಅಭಿವೃದ್ಧಿಯಲ್ಲಿ ಎಚ್.ಡಿ. ಕೋಟೆ ಗರಿಷ್ಠ ಸಾಧನೆಗೈದರೆ, ನಂಜನಗೂಡು ತಾಲೂಕು ಕನಿಷ್ಠ ಸಾಧನೆ ಮಾಡಿದೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ತಾಲೂಕು 32.5 ಕೋಟಿ ರೂ. ಬಳಸಿಕೊಳ್ಳಬೇಕಿತ್ತು. ಆದರೆ, ಇದುವರೆಗೂ ಕೇವಲ 9.5 ಕೋಟಿ ರೂ. ಮಾತ್ರ ಉಪಯೋಗಿಸಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಸತಿ ಯೋಜನೆ: 2016-17ನೇ ಸಾಲಿನಲ್ಲಿ ತಾಲೂಕಿಗೆ ಮಂಜೂರಾಗಿದ್ದ 1,440 ಮನೆಗಳ ಪೈಕಿ 323 ಹಾಗೂ 2017-18 ರ ಸಾಲಿನ 484 ಮನೆಗಳನ್ನೂ ಇನ್ನೂ ಆರಂಭಿಸದೇ ಇರಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ರೈತರು ಹೆಚ್ಚಾಗಿ ಬಾಳೆ ಬೆಳೆಯುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಬಾಳೆಗೆ ಪೋ›ತ್ಸಾಹಧನ ನೀಡಬೇಕು ಎಂದು ಸಂಸದರು ಸೂಚಿಸಿದಾಗ, ಅಧಿಕಾರಿ ಸುರೇಂದ್ರ ಪ್ರತಿಕ್ರಿಯಿಸಿ, ಉದ್ಯೋಗಖಾತ್ರಿಯಡಿ ನಂಜನಗೂಡು ರಸಬಾಳೆಗೆ ಅವಕಾಶವಿಲ್ಲ, ಎಲಕ್ಕಿ ಬಾಳೆಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಈ ವಿಷಯವನ್ನು ಮೊದಲೇ ತಮ್ಮ ಗಮನಕ್ಕೆ ತಂದಿದ್ದರೆ ಇವೆರಡಕ್ಕೂ ಅನುಮತಿ ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ಸಂಸದರು ಭರವಸೆ ನೀಡಿದರು. ಬಹು ನಿರೀಕ್ಷೀತ ಸಸ್ಯ ಕಾಶಿ ಕಾಮಗಾರಿ ಪ್ರಾರಂಭವಾಗಿದ್ದನ್ನು ಉಲ್ಲೇಖೀಸಿದ ಸಂಸದರು, ಮತುವರ್ಜಿ ವಹಿಸಿ ಅಚ್ಚುಕಟ್ಟಾಗಿ ಅಲ್ಲಿ ಉದ್ಯಾನವನ ನಿರ್ಮಿಸಿ ಎಂದು ಸೂಚಿಸಿದರು.
ಸಭೆಗೆ ಹಾಜರಾಗಿ: ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾದರೆ ಶಾಸಕರು ಹಾಗೂ ಸಂಸದರಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನಾದರೂ ಕ್ರಿಯಾಶಿಲರಾಗಿ ಉಳಿದಿರುವ 60 ದಿನಗಳಲ್ಲಿ ಕೆಲಸ ಮಾಡಿ ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಪಂ ಸದಸ್ಯೆ ಮಂಗಳಾ ಮಾತನಾಡಿ, ಭೂಸೇನಾ ನಿಗಮಕ್ಕೆ ವಹಿಸಿದ ಕೆಲಸಗಳು ಅವಧಿ ಮುಗಿದರೂ ಪೂರ್ಣಗೊಂಡಿಲ್ಲ ಎಂದು ದೂರಿದರು.
ದಯಾನಂದ ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಹುಲ್ಲಹಳ್ಳಿ ರಸ್ತೆ ಬದಿಯಲ್ಲಿನ ಮೀನು ಹಾಗೂ ಮಾಂಸದ ಅಂಗಡಿಗಳನ್ನು ತಕ್ಷಣ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.
ನೋಟಿಸ್ ನೀಡಿ: ಸಭೆಗೆ ಗೈರಾದ ಸಾಮಾಜಿಕ ಅರಣ್ಯ, ಅಕ್ಷರ ದಾಸೋಹ ಹಾಗೂ ಅಬಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಂಸದರು ಸೂಚಿಸಿದರು. ಸಭೆಯಲ್ಲಿ ಜಿಪಂ ಸಹ ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ದಯಾನಂದ ಮೂರ್ತಿ, ಪುಷ್ಪಾ, ಲತಾ, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ತಾಪಂ ಇಒ ಶ್ರೀಕಂಠರಾಜೇ ಅರಸು ಇತರರಿದ್ದರು.
ಭತ್ತ ಖರೀದಿಸದ ಅಧಿಕಾರಿಗಳಿಗೆ ತರಾಟೆ: ಕೃಷಿ ಇಲಾಖೆಯ ಪ್ರಗತಿ ಕೈಗೆತ್ತಿಕೊಂಡ ಸಂಸದ ಆರ್. ಧ್ರುವನಾರಾಯಣ್, ಇಲಾಖೆ ಕಳಪೆ ಸಾಧನೆ ತೋರಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಭತ್ತದ ಸುಗ್ಗಿ ಮುಗಿದ ಮೇಲೆ ಭತ್ತ ಖರೀದಿಸುವ ನೀವು ರೈತರ ಪರವೋ ಅಥವಾ ದಲ್ಲಾಳಿಗಳ ಪರವೋ ಎಂದು ತರಾಟೆಗೆ ತೆಗೆದುಕೊಂಡ ಧ್ರುವನಾರಾಯಣ,
ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ 1,700 ರೂ. ನಿಗದಿ ಪಡಿಸಿದ್ದು, ಆದರೆ ನೀವು ಖರೀದಿಸಿಲ್ಲ. ಸಾಲ ಮಾಡಿ ಭತ್ತ ಬೆಳೆದ ರೈತರು ಕೇವಲ 1,200 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ನೋಡಿಯೂ ಸುಮ್ಮನಿದ್ದೀರಿ. ಸಂಬಳ ಪಡೆಯುತ್ತಿರುವ ನೀವು ರೈತರು ಹಾಗೂ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದೀರಿ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.