ಕಸದ ರಾಶಿಯಲ್ಲಿ 12 ಮಾನವ ತಲೆಬುರುಡೆ ಪತ್ತೆ
Team Udayavani, Jan 20, 2018, 11:50 AM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ರಸ್ತೆ ಬದಿಯಲ್ಲಿ ಹತ್ತಾರು ತಲೆ ಬುರುಡೆಗಳು ಪತ್ತೆಯಾಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಮಾಗಿ ಚಳಿಯಿಂದಾಗಿ ನಿಧಾನಕ್ಕೆ ಕಣ್ಣುಬಿಡುತ್ತಿದ್ದ ಮೈಸೂರಿಗರಿಗೆ ಇಲ್ಲಿನ ವಿಜಯನಗರದ 2ನೇ ಹಂತ ಮತ್ತು ಹಿನಕಲ್ ಬಡಾವಣೆ ನಡುವೆ ಹಾದುಹೋಗುವ ರಸ್ತೆ ಬದಿಯ ಕಸದ ರಾಶಿಯಲ್ಲಿ 12 ಮಾನವ ತಲೆ ಬುರುಡೆಗಳು ಪತ್ತೆಯಾಗಿ ಭೀತಿ ಮೂಡಿಸಿತ್ತು.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ: ಹಿನಕಲ್ ಬಡಾವಣೆಯ ಚಿಕ್ಕಮ್ಮ ಶಾಲೆ ಬಳಿಯ ಖಾಲಿ ನಿವೇಶನದ ಕಸದ ರಾಶಿಯಲ್ಲಿ ತಲೆಬುರುಡೆಗಳನ್ನು ಯಾರೋ ದುಷ್ಕರ್ಮಿಗಳು ಚೀಲದಲ್ಲಿ ತುಂಬಿಕೊಂಡು ಬಂದು ಎಸೆದು ಹೋಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ದಾರಿಹೋಕರೊಬ್ಬರು ಈ ಜಾಗದಲ್ಲಿ ಮೂತ್ರ ವಿಸರ್ಜನೆಗೆ ಹೋದ ವೇಳೆ ಹತ್ತಾರು ಬುರುಡೆಗಳನ್ನು ಕಂಡು ಭಯಭೀತರಾಗಿ ಓಡಿ ಬಂದಿದ್ದಾರೆ. ವಿಷಯ ತಿಳಿದು ಗುಂಪುಗೂಡಿದ ಸ್ಥಳೀಯರು ವಿಜಯನಗರ ಠಾಣಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬುರುಡೆಗಳನ್ನು ವಶಕ್ಕೆಪಡೆದು, ವಿಧಿ ವಿಜಾnನ ಪ್ರಯೋಗಾಲಯಕ್ಕೆ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ತಲೆ ಬುರುಡೆಗಳು ಪತ್ತೆಯಾದ ಸ್ಥಳದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಶೋಧ ನಡೆಸಿದ್ದಾರೆ.
ಅನುಮಾನಗಳ ಹುತ್ತ?: ತಲೆ ಬುರುಡೆಗಳು ಪತ್ತೆಯಾದ ಜಾಗದ ಸುತ್ತಮುತ್ತ ಎಲ್ಲೂ ಸ್ಮಶಾನ ಇಲ್ಲದಿದ್ದರೂ ಈ 12 ತಲೆಬುರುಡೆಗಳನ್ನು ಎಲ್ಲಿಂದ ತಂದು ಇಲ್ಲಿ ಬಿಸಾಡಲಾಯಿತು? ಯಾರಾದರೂ ವಾಮಾಚಾರಕ್ಕೆ ಬಳಸಿದ ನಂತರ ಇಲ್ಲಿ ತಂದು ಬಿಸಾಡಿದ್ದಾರಾ? ವೈದ್ಯಕೀಯ ಕಾಲೇಜುಗಳಿಂದ ಏನಾದರೂ ಇಲ್ಲಿ ತಂದು ಸುರಿಯಲಾಗಿದೆಯೇ? ಸಾಮೂಹಿಕವಾಗಿ ಕೊಲೆ ಏನಾದರೂ ನಡೆದಿದೆಯೇ? ಎಂಬ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಲ್ಲಾ 12 ತಲೆ ಬುರುಡೆಗಳನ್ನೂ ವಶಕ್ಕೆ ಪಡೆದು ವಿಧಿ ವಿಜಾnನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು, ವಿಧಿವಿಜಾನ ಪ್ರಯೋಗಾಲಯದ ವರದಿ ಬರುವರೆಗೂ ನಿಖರವಾಗಿ ಏನನ್ನೂ ಹೇಳಲಾಗುವುದಿಲ್ಲ.
-ವಿಷ್ಣುವರ್ಧನ, ಡಿಸಿಪಿ, ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ.
ಪ್ರತಿದಿನ ಬೆಳಗ್ಗೆ ನಾನು ಇದೇ ರಸ್ತೆಯಲ್ಲೇ ವಾಕ್ ಮಾಡುತ್ತೇನೆ. ಎಂದಿನಂತೆ ಇವತ್ತು ವಾಕ್ ಮುಗಿಸಿ ಮೂತ್ರ ವಿಸರ್ಜನೆಗೆ ಹೋದಾಗ ರಾಶಿ ರಾಶಿ ತಲೆಬುರುಡೆಗಳನ್ನು ಕಂಡು ಗಾಬರಿಯಾಗಿ ಓಡಿ ಬಂದೆ.
-ಲೋಕೇಶ್, ಪ್ರತ್ಯಕ್ಷದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.