ರೈತರಿಂದ ಖರೀದಿಸಿದ ತರಕಾರಿ ಉಚಿತ ವಿತರಣೆ
Team Udayavani, Jun 5, 2021, 6:07 PM IST
ಮೈಸೂರು: ಕಡಕೊಳ ಜಗದೀಶ್ ಅಭಿಮಾನಿ ಬಳಗ ಮತ್ತು ಡಿಟಿಎಸ್ ಫೌಂಡೇಷನ್‌ವತಿಯಿಂದ ರೈತರಿಂದ ನೇರವಾಗಿ ತರಕಾರಿಖರೀದಿಸಿ ಅದನ್ನು ಅಸಹಾಯಕರಿಗೆಉಚಿತವಾಗಿ ವಿತರಿಸುವ ಮೂಲಕಸಂಕಷ್ಟದಲ್ಲಿರುವ ರೈತರಿಗೆ ನೆರವಾದವು.
ನಗರದ ಚಾಮುಂಡಿಪುರಂ ಅಪೂರ್ವಹೋಟೆಲ್‌ನ ಮುಂಭಾಗ ಬಡ ಮತ್ತುಅಸಹಾಯಕ ಕುಟುಂಬಗಳಿಗೆ ತರಕಾರಿವಿತರಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್,ಯಾವ ವಸ್ತು ಉತ್ಪಾದನೆಯಾಗುತ್ತೋಅದು ಸಮರ್ಪಕವಾಗಿ ಬಳಕೆಯಾಗಬೇಕು.ಇಲ್ಲದಿದ್ದರೆ ತರಕಾರಿ ಕೊಳೆತು ಹಾಳಾಗಲಿದೆ.
ತಾಜಾ ತರಕಾರಿಯನ್ನು ಉಚಿತವಾಗಿವಿತರಿಸುವ ಮೂಲಕ ಒಂದು ಕಡೆಗ್ರಾಹಕರು, ಸಾರ್ವಜನಿಕರಿಗೆ ತಲುಪಿಸುವವ್ಯವಸ್ಥೆ, ರೈತರಿಗೆ ಬೆನ್ನೆಲುಬಾಗಿ ನಿಲ್ಲುವಕೆಲಸವನ್ನು ಡಿಟಿಎಸ್ ಫೌಂಡೇಶನ್,ಜಗದೀಶ್ ಮತ್ತು ಗೆಳೆಯರುಮಾಡಿರುವುದಕ್ಕೆ ನನ್ನ ಕೃತಜ್ಞತೆ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷಡಿ.ಟಿ.ಪ್ರಕಾಶ್ ಮಾತನಾಡಿ, ರೈತರಿಂದನೇರವಾಗಿ ತರಕಾರಿ ಖರೀದಿಸಿ, ಬಡವರಿಗೆಉಚಿತವಾಗಿ ನೀಡಿದರೆ ರೈತರ ಹೊಟ್ಟೆಯೂ ತುಂಬಲಿದೆ, ಬಡವರ ಹೊಟ್ಟೆಯೂತುಂಬಲಿದೆ ಎಂದು ಹೇಳಿದರು. ಈ ವೇಳೆಕಡಕೊಳ ಜಗದೀಶ್, ಅಜಯ್ ಶಾಸಿŒ,ಅಪೂರ್ವ ಸುರೇಶ್, ಬಸವರಾಜ್ ಬಸಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.