ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ
Team Udayavani, Mar 5, 2019, 12:30 AM IST
ಮೈಸೂರು: ಮೈಸೂರು-ಬೆಂಗಳೂರು ನಡುವೆ ರೈಲು ಪ್ರಯಾಣ ಮಾಡುವವರಿಗಾಗಿ ರೈಲ್ವೆ ಇಲಾಖೆ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದೆ.
ಈವರೆಗೆ ಈ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಸಿಗುತ್ತಿದ್ದ ಉಚಿತ ವೈ-ಫೈ ಇನ್ನು ಮುಂದೆ ಈ ಮಾರ್ಗದ ಎಲ್ಲಾ 17 ನಿಲ್ದಾಣಗಳಲ್ಲೂ ದೊರೆಯಲಿದೆ. ಬೆಂಗಳೂರು ನಗರ ನಿಲ್ದಾಣ, ಕೆಂಗೇರಿ,ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ನಾಯಂಡಹಳ್ಳಿ, ಹೆಜ್ಜಾಲ,ಶೆಟ್ಟಿಹಳ್ಳಿ, ಹನಕೆರೆ, ಯಲಿಯೂರು, ಬ್ಯಾಡರಹಳ್ಳಿ,ಪಾಂಡವಪುರ, ನಾಗನಹಳ್ಳಿ ಸೇರಿ ಈ ಮಾರ್ಗದ ಎಲ್ಲಾ 17 ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯವನ್ನು ರೈಲ್ವೆ ಮಂತ್ರಾಲಯದ ರೈಲ್‌ಟೆಲ್ ಕಾರ್ಪೋರೆಷನ್ ಆಫ್ ಇಂಡಿಯಾ ಲಿ. ಒದಗಿಸುತ್ತಿದೆ.
ಬೆಂಗಳೂರು- ಮೈಸೂರು ನಡುವೆ 138 ಕಿ.ಮೀ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಉಚಿತ ವೈ-ಫೈ ಸೌಲಭ್ಯ ಪಡೆದುಕೊಳ್ಳಬಹುದು. ಜನವರಿಯಲ್ಲಿ ಈ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದ್ದರಿಂದ 3,16,157 ಬಳಕೆದಾರರು 109.757 ಟಿಬಿ ಡೇಟಾ ಬಳಸಿದ್ದಾರೆ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.