ನಮ್ಮನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ
ಮನಸ್ಸು ಮಾಡಿದರೆ ಎತ್ತಂಗಡಿ ಮಾಡಿಸುತ್ತೇನೆ! ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಜಿ.ಟಿ.ದೇವೇಗೌಡ ವಾಗ್ಧಾಳಿ
Team Udayavani, Feb 5, 2021, 2:39 PM IST
ಮೈಸೂರು : ಎಪಿಎಂಸಿ ಈ ಮಟ್ಟಕ್ಕೆ ಬೆಳೆಯಲು ನನ್ನ ಪರಿಶ್ರಮ ಕಾರಣ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ನೆನಪಿಟ್ಟುಕೊಳ್ಳಿ. ನನ್ನನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. ಮನಸ್ಸು ಮಾಡಿದರೆ ಈಗಲೇ ತೆಗೆಸಿ ಬಿಡುತ್ತೇನೆ ಎಂದು ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ಧಾಳಿ ನಡೆಸಿದರು.
ಎಪಿಎಂಸಿ ಆವರಣದ ಬಂಡೀಪಾಳ್ಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಮ್ಮ ಪುತ್ರನ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಕಾರ್ಯದರ್ಶಿ ವಿರುದ್ಧ ಹರಿಹಾಯ್ದರು. ಚುನಾವಣೆ ವಿಚಾರದಲ್ಲಿ ಏನೇ ಇದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ಒಂದಾಗಿ ಕೆಲಸ ಮಾಡಬೇಕು. ನನ್ನ ಹೋರಾಟದ ಫಲವಾಗಿ ಎಪಿಎಂಸಿ ಇಂದು ದೊಟ್ಟ ಮಟ್ಟ ದಲ್ಲಿ ಬೆಳೆಯಲು ಕಾರಣವಾಗಿದೆ. ಎಪಿಎಂಸಿಗೆ ಏನು ಬೇಕು, ಏನು ಬೇಡ ಎಂದು ಒಂದು ದಿನ ನನ್ನೊಂದಿಗೆ ಚರ್ಚಿಸಿಲ್ಲ. ನಾನು ನಿಮ್ಮನ್ನು ತರಲು ಎಷ್ಟು ಹೋರಾಟ ಮಾಡಿದ್ದೇನೆ ಎಂದು ನನಗೆ ಗೊತ್ತು. ಆದರೆ, ಇಲ್ಲಿ ನಡೆಯುತ್ತಿರುವುದು ಬೇರೆ. ನಾನು ಮನಸ್ಸು ಮಾಡಿದರೆ ನಿಮ್ಮದು ಏನೂ ನಡೆಯಲ್ಲ. ನಾನು ಮುಕ್ತ ವಾಗಿ ಬಿಟ್ಟಿದ್ದೇನೆ ಎಂದು ನನ್ನನ್ನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆ ಗಮನಕ್ಕೆ ತನ್ನಿ: ರೈತರಿಗೆ ಕುಡಿಯುವ ನೀರು,ಸಶೌಚಾಲಯ ಮೊದಲಾದ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತರಬೇಕು. ಒಂದು ದಿನ ಬಂದು ನೋಡಿಲ್ಲ, ಚರ್ಚಿಸಿಲ್ಲ. ನೇರ ಬೆಂಗಳೂರಿಗೆ ಹೋಗಿ ಮನವಿ ಸಲ್ಲಿಸಿದರೆ ಕಷ್ಟ. ನಮ್ಮನ್ನು ಬಿಟ್ಟು ಏನಾದರೂ ಮಾಡಬಹುದೆಂದು ಭಾವಿಸಿದ್ದರೆ ಅದೆಲ್ಲವನ್ನೂ ಬಿಟ್ಟು ಬಿಡಿ. ದಬ್ಟಾಳಿಕೆ ಮಾಡುವವರಿಗೆ ಎರಡು-ಮೂರು ಅಂಗಡಿ ಕೊಡುವುದು. ಮಾತನಾಡದವರಿಗೆ ಅಂಗಡಿ ಕೊಡುವುದಿಲ್ಲ. ಬಂಡೀಪಾಳ್ಯದಲ್ಲಿ ಎಲ್ಲವೂ ನಡೆದುಕೊಂಡು ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಕೈ ಹಾಕಿಲ್ಲ, ಮಾತನಾಡಿಲ್ಲ. 25-30 ವರ್ಷದಿಂದ ವ್ಯಾಪಾರ ಮಾಡಿಕೊಂಡು ಬಂದಿರುವವರಿಗೆ ಮಳಿಗೆಗಳನ್ನು ಕೊಡಬೇಕು. ಶಕ್ತಿ ತುಂಬಬೇಕೇ ಹೊರತು ದಬ್ಟಾಳಿಕೆ ಮಾಡುವವರಿಗೆ, ದುಡ್ಡು ಇದ್ದವರಿಗೆ ಮಣೆ ಹಾಕುವುದಲ್ಲ ಎಂದು ಎಚ್ಚರಿಕೆ ನೀಡಿದರು.
ಉತ್ತಮ ಸಂಬಂಧವಿರಲಿ: ಮೈಸೂರು-ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿ, ರೈತ ಬೆಳೆಗಳನ್ನು ಕಷ್ಟಪಟ್ಟು ಬೆಳೆದು ಮಾರುಕಟ್ಟೆಗೆ ತರುತ್ತಾನೆ. ಹೀಗಾಗಿ ರೈತರಿಗೆ ಯಾವುದೇ ಅನ್ಯಾಯವಾಗಬಾರದು. ವರ್ತಕರು ಹಾಗೂ ರೈತರ ನಡುವೆ ಉತ್ತಮ ಸಂಬಂಧವಿದ್ದರೆ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ಉಪ್ಪಿನಂಗಡಿ: ಸಿಮೆಂಟ್ ಮಿಕ್ಸರ್ ವಾಹನ- ಬೈಕ್ ನಡುವೆ ಅಪಘಾತ, ಮಹಿಳೆ ಸಾವು
ಉತ್ತಮ ಬೆಲೆ ನೀಡಿ: ರೈತರು ಶ್ರಮಪಟ್ಟು ಬೆಳೆದ ಫಸಲನ್ನು ಮಾರುಕಟ್ಟೆಗೆ ತಂದಾಗ ಉತ್ತಮ ಬೆಲೆ ಸಿಗಬೇಕೇ ಹೊರತು ಅನ್ಯಾಯವಾಗಬಾರದು. ರೈತರ ಬೆಳೆಗಳಿಂದ ಮಾರುಕಟ್ಟೆ ಅಭಿವೃದ್ಧಿ ಹೊಂದುವ ಜತೆಗೆ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ. ರೈತರ ಶ್ರಮದ ಫಲವಾಗಿ ಇಂದು ಸಾವಿರಾರು ಕುಟುಂಬಗಳ ಬದುಕು ಸಾಗುತ್ತಿದೆ. ಆಟೋ, ಟ್ಯಾಕ್ಸಿ, ಕೂಲಿಕಾರ್ಮಿಕರು, ವರ್ತಕರು ಸೇರಿ ಎಲ್ಲರ ಜೀವನಕ್ಕೂ ಆಧಾರವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಬಸವರಾಜು,ಮಾಜಿ ಅಧ್ಯಕ್ಷ ಎಚ್.ಎಸ್.ನಾಗರಾಜು, ಮಾಜಿ ಉಪಾಧ್ಯಕ್ಷ ಜವರಪ್ಪ, ಎಪಿಎಂಸಿ ವರ್ತಕರ ಪ್ರತಿನಿಧಿ ಎಸ್. ಆರ್.ಎಸ್.ಪ್ರಕಾಶ್, ಬಾಲಾಜಿ ವೆಜಿಟೇಬಲ್ ಮಾಲೀಕ ಬಂಡೀಪಾಳ್ಯ ವೆಂಕಟೇಶ್, ಜಿಪಂ ಸದಸ್ಯ ಎಸ್. ಮಾದೇಗೌಡ, ಮುಖಂಡರಾದ ಜಾಕೀರ್ ಹುಸೇನ್, ಸೋಮಣ್ಣ, ಕಾರ್ತಿಕ್, ಕೃಷ್ಣಮೂರ್ತಿ, ಸಂದೀಪ್ ಮಹದೇವು, ಅಮೀರ್‌ಜಾನ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.