![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 29, 2022, 2:20 PM IST
ಮೈಸೂರು: ನಮ್ಮ ಮತ ಮಾರಾಟಕ್ಕಿಲ್ಲ ಎಂದು ಜನರೆಲ್ಲ ಸಂಕಲ್ಪ ಮಾಡಬೇಕೆಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನುಡಿದರು.
ಶ್ರೀಗಳ 80ನೇ ಜನ್ಮದಿನೋತ್ಸವದ ಭಾನುವಾರದ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿದ ಶ್ರೀಗಳು, ನಮ್ಮ ದೇಶಕ್ಕೆ ಒಳ್ಳೆಯದಾಗಬೇಕಾದರೆ ಇಂದೇ ನಾವೆಲ್ಲ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ನಮ್ಮ ವೋಟನ್ನು ಮಾರುವುದಿಲ್ಲ,ಇದನ್ನು ಬೇರೆಯವರಿಗೂ ಹೇಳುತ್ತೇವೆ ಎಂಬ ಸಂಕಲ್ಪವನ್ನು ಸ್ವಾಮೀಜಿಯವರು ನಾದಮಂಟಪದಲ್ಲಿ ಸೇರಿದ್ದ ಎಲ್ಲರಿಂದ ಮಾಡಿಸಿದುದು ವಿಶೇಷವಾಗಿತ್ತು.
ನಾವು ಜನರೇ ಸರಿಯಿಲ್ಲ,ನಾವೇ ಲಂಚಕೊಡುವುದನ್ನು ಅಭ್ಯಾಸ ಮಾಡಿಸುತ್ತೇವೆ. ನಮ್ಮಿಂದ ಹತ್ತು ಸಾವಿರ ಪಡೆದವರು ನಂತರ ಇಪ್ಪತ್ತು ಸಾವಿರ ತೆಗೆದುಕೊಳ್ಳುತ್ತಾರೆ.ಅದರ ಹೊರೆ ನಮ್ಮ ಮೇಲೆಯೇ ಬೀಳುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಎಲ್ಲರಿಗೂ ತಿಳಿಹೇಳಿದರು.
ನಮ್ಮ ಹಾಗೂ ಸಮಾಜವನ್ನು ಉದ್ದಾರ ಮಾಡುವಂತಹ ಶಕ್ತಿಯುಳ್ಳವರನ್ನು ಆರಿಸಿ, ದೇಶವನ್ನು ನಾಶ ಮಾಡುವವರು ಜನರೇನೆ ಹಾಗಾಗಿ ಈಗಿನಿಂದಲೇ ಎಚ್ಚೆತ್ತಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ನಮ್ಮಲ್ಲಿರುವ ಕಾಮಕ್ರೋದಗಳನ್ನು ಹೊಡೆದು ಓಡಿಸಬೇಕು.ಅಜ್ಞಾನದಲ್ಲಿರುವವರು ಗುರು ಮುಖೇನ ಜ್ಞಾನ ಪಡೆದುಕೊಳ್ಳಬಹುದು.ಶ್ರೀ ದತ್ತಾತ್ರೇಯ ಎಲ್ಲಾರೀತಿಯಲ್ಲೂ ಜನರನ್ನು ಕಾಪಾಡುತ್ತಾನೆ ಎಂದು ತಿಳಿಸಿದರು.
ನನ್ನ ಜನ್ಮದಿನೋತ್ಸವದ ಈ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀಗಳು ಹೇಳಿದರು.
ಆಖಿಲ ಕರ್ನಾಟಕ ಬ್ರಾಹ್ಮಣ ಸಭಾ,ವಿಪ್ರ ಜಗೃತ ವೇದಿಕೆ,ಹೊಯ್ಸಳ ಕರ್ನಾಟಕ ಸಂಘ ಸೇರಿದಂತೆ ಹಲವಾರು ಬ್ರಾಹ್ಮಣ ಸಮಾಜದ ಸದಸ್ಯರು ಗಣಪತಿ ಶ್ರೀಗಳಿಗೆ ಶುಭಕಾಮನೆ ಸಲ್ಲಿಸಿದರು.
ಇದೇ ವೇಳೆ ಪೌರಕಾರ್ಮಿಕ ಸಂಘದವರು, ನಾದ ಮಂಟಪಕ್ಕೆ ಸೇವೆಸಲ್ಲಿಸಿದವರು ಮತ್ತಿತರರಿಗೆ ವಸ್ತ್ರ ಪ್ರಸಾದ ನೀಡಲಾಯಿತು. ಇದೇ ವೇಳೆ ಶ್ರೀಯವರ ಮಾತೃಶ್ರೀ ಯವರ ಊರು ಸೋಗಾಲದಿಂದ ಬಹಳಷ್ಟು ಮಂದಿ ಸ್ವಾಮೀಜಿಯವರ ದರುಶನ ಮಾಡಿದರು. ಇಂದು ಬೆಳಗಿನಿಂದ ಸ್ವಾಮೀಜಿಯವರ ದರ್ಶನ ಮಾಡಲು ಬಂದ ಪ್ರತಿಯೊಬ್ಬರಿಗೂ ವಸ್ತ್ರ ಪ್ರಸಾದವನ್ನು ಸ್ವಾಮೀಜಿಯವರು ನೀಡಿದುದು ವಿಶೇಷ.
ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ಜನ್ಮ ದಿನೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ ಶ್ರೀ ಚಕ್ರಪೂಜೆ,ಮಹಾ ಸೌರಹೋಮ ನೆರವೇರಿಸಲಾಯಿತು.
ನಂತರ ಶ್ರೀಗಳಿಗೆ ಪಾದಪೂಜೆ ಹಾಗೂ ಭಕ್ತಾದಿಗಳಿಗೆ ದತ್ತಪಾದುಕಾ ದರ್ಶನ ಮಾಡಲಾಯಿತು.ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾನುವಾರ ನಾದಮಂಟಪಕ್ಕೆ ಆಗಮಿಸಿ ಶ್ರೀಗಳಿಗೆ ಜನ್ಮದಿನದ ಶುಭ ಕೋರಿದರು.ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ರಾಮಪ್ರಸಾದ್,ಅಕ್ಬರ್ ಖಾನ್ ಮತ್ತಿತರರು ಶ್ರೀಗಳಿಗೆ ಶುಭಕಾಮನೆ ಸಲ್ಲಿಸಿದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.