ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ
Team Udayavani, May 8, 2020, 6:10 PM IST
ಹುಣಸೂರು: ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ನಗರಸಭೆಗೆ ಮನೆ ಮನೆ ಕಸ ಸಂಗ್ರಹಿಸುವ 10 ಆಟೋ, ಟಿಪ್ಪರ್‌ಗಳಿಗೆ ಗುರುವಾರ ಶಾಸಕ ಎಚ್.ಪಿ. ಮಂಜುನಾಥ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಮಾತನಾಡಿ, ಸ್ವಚ್ಛಭಾರತ್ ಯೋಜನೆಯಡಿ 3 ಕೋಟಿ ಅನುದಾನ ಬೇಡಿಕೆ ಸಲ್ಲಿಸಲಾಗಿದ್ದು, 1.86 ಕೋಟಿ ಅನುದಾನ ಬಂದಿದೆ. ಸ್ವತ್ಛ ಭಾರತ್ ಯೋಜನೆಯಡಿ 18.65 ಲಕ್ಷ, ರಾಜ್ಯ ಸರ್ಕಾರ 12.43 ಲಕ್ಷ, ನಗರಸಭೆಯ 22.25 ಲಕ್ಷ ಸೇರಿದಂತೆ ಒಟ್ಟು 53,33 ಲಕ್ಷ ರೂ. ವೆಚ್ಚದಡಿ ಸರ್ಕಾರದ ಇ-ಮಾರ್ಕೆಟ್ ಮೂಲಕ ಮಾರುಕಟ್ಟೆ ದರಕ್ಕಿಂತ ಶೇ.10ರಷ್ಟು ಕಡಿಮೆ ದರದಲ್ಲಿ ಆಟೋಗಳನ್ನು ಖರೀದಿಸಲಾಗಿದೆ ಎಂದರು. ಪರಿಸರ ಎಂಜಿನಿಯರ್ ರೂಪಾ ಮಾತನಾಡಿ, ಹಸಿ, ಒಣ ಕಸ ಬೇರ್ಪಡಿಸಲು ಮನೆಗೆ ಎರಡರಂತೆ 12,971 ಜೊತೆ ಕೆಂಪು, ಹಸಿರು ಬಣ್ಣದ ಡಬ್ಬಿಗಳನ್ನು ವಿತರಿಸಲಾಗುವುದು. ನಗರದಿಂದ ದೂರದಲ್ಲಿರುವ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ ಘಟಕದ ಮೂಲಕ ನಗರದ ಕಸವನ್ನು ವಿಂಗಡಿಸಿ, ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಇದಕ್ಕೆ ಬೇಡಿಕೆ ಇದ್ದು, ನಗರಸಭೆಗೆ ತಿಂಗಳಿಗೆ 15 ಸಾವಿರ ರೂ. ಆದಾಯ ಬರುತ್ತಿದೆ ಎಂದರು.
ನೀರಿನ ಸಮಸ್ಯೆ ಪರಿಹರಿಸಲಾಗುವುದು. ಮನೆ, ವಾಣಿಜ್ಯ ಸಂಕೀರ್ಣ, ನೀರಿನ ತೆರಿಗೆಯನ್ನು ಮೇ ಅಂತ್ಯದೊಳಗೆ ಪಾವತಿಸಿದಲ್ಲಿ ಶೇ.5ರಷ್ಟು ವಿನಾಯಿತಿ ಸಿಗಲಿದೆ ಎಂದು ಪೌರಾಯುಕ್ತ ಮಂಜುನಾಥ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮನು, ಮಾಲಿಕ್, ಸತೀಶ್‌ಕುಮಾರ್, ಕೋಳಿಮಂಜು, ಮುಖಂಡರಾದ ಪೆರುಮಾಳ್, ರಾಘು, ಲಕ್ಷ್ಮಣ್, ಕಣ್ಣಯ್ಯ, ಆರ್.ಐ.ಜಯಶೀಲ ಮೊದಲಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.