ಗಾವಡಗೆರೆ ಸಂಘಕ್ಕೆ 30 ಲಕ್ಷ ರೂ. ಲಾಭ
Team Udayavani, Sep 29, 2019, 3:00 AM IST
ಹುಣಸೂರು: ತಾಲೂಕಿನ ಗಾವಡಗೆರೆ ರೈತ ಸೇವಾ ಸಹಕಾರ ಸಂಘ 2018-19ನೇ ಸಾಲಿನಲ್ಲಿ 178 ಕೋಟಿ ರೂ. ವಹಿವಾಟು ನಡೆಸಿದ್ದು, 30 ಲಕ್ಷ ರೂ.ಲಾಭಗಳಿಸಿದೆ ಸಂಘದ ಅಧ್ಯಕ್ಷ ಲೋಕನಾಥ್ ರಾವ್ ಕದಂ ತಿಳಿಸಿದರು.
ಗಾವಡಗೆರೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನಲ್ಲಿ 2,183 ರೈತರಿಗೆ ಬೆಳೆ ಸಾಲ, ತಂಬಾಕು ಸಾಲ, ಭೂ ಅಭಿವೃದ್ಧಿ ಸಾಲ, ದ್ವಿಚಕ್ರ ಸಾಲ, ಆಭರಣ ಸಾಲ ಸೇರಿದಂತೆ 15.51 ಕೋಟಿ ರೂ. ಸಾಲ ನೀಡಿದೆ. ಈ ಪೈಕಿ ಶೇ.96 ರಷ್ಟು ಮರುಪಾವತಿಯಾಗಿದೆ.
ಇನ್ನೂ 28 ಲಕ್ಷ ರೂ. ಸಾಲ ಬಾಕಿ ಬರಬೇಕಿದೆ. 2019-20ರಲ್ಲಿ 1,870 ರೈತರಿಗೆ 13.12 ಕೋಟಿ ರೂ.ಸಾಲ ವಿತರಿಸಲಾಗಿದೆ. 884 ರೈತರ 6.25 ಕೋಟಿ ರೂ. ಸಾಲಮನ್ನಾ ಆಗಿದೆ. ಸರ್ಕಾರದಿಂದ ಇನ್ನೂ ಸಾಲ ಮನ್ನಾ ಬಾಕಿ ಹಣ ಬಂದಿಲ್ಲ ಎಂದರು.
ಸಂಘದ ಸಿಇಒ ಆರ್.ಅಶೋಕ್ ಕುಮಾರ್, ಸಂಘವು 58 ನ್ಯಾಯ ಬೆಲೆ ಅಂಗಡಿಗಳಿಗೆ ಸಗಟು ಪಡಿತರ ವಿತರಿಸುತ್ತಿದ್ದು, ಇದರಿಂದ ಸಂಘಕ್ಕೆ 36.43 ಲಕ್ಷ ರೂ. ಆದಾಯ ಬಂದಿದೆ ಎಂದರು. ಸಭೆಯಲ್ಲಿ ಹಿರಿಯ ವ್ಯವಸ್ಥಾಪಕ ಸಂತೋಷ್‌ಕುಮಾರ್, ನಿರ್ದೇಶಕರಾದ ಹೊನ್ನಪ್ಪರಾವ್ ಕಾಳಿಂಗೆ, ಬಿ.ಎಂ.ತಾರಕೇಶ್ವರಿ, ಜಯಮ್ಮ, ಸಣ್ಣೇಗೌಡ, ಅಮರನಾಥ್, ಎಂ.ಶಿವಪ್ರಸಾದ್, ಜಯರಾಮೇಗೌಡ, ಲೆಕ್ಕಾಧಿಕಾರಿ ಎನ್.ಆನಂದ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.