ನಾಡು ಬೇಡ, ಕಾಡು ವಾಸವೇ ಲೇಸು!


Team Udayavani, Jan 17, 2022, 12:41 PM IST

ನಾಡು ಬೇಡ, ಕಾಡು ವಾಸವೇ ಲೇಸು!

ಎಚ್‌.ಡಿ.ಕೋಟೆ: ಪುನರ್ವಸತಿ ಕೇಂದ್ರಕ್ಕೆ 11 ವರ್ಷಗಳ ಹಿಂದೆ ಸ್ಥಳಾಂತಗೊಂಡಿದ್ದ 15 ಕುಟುಂಬಗಳು ಅಲ್ಲಿನಅವ್ಯವಸ್ಥೆಯಿಂದ ಬೇಸತ್ತು ಮರಳಿ ತಮ್ಮ ಮೂಲಸ್ಥಾನ ಕಾಡಿಗೆ ಆಗಮಿಸಿದ್ದಾರೆ.

ವನ್ಯಜೀವಿ ಕಾಯ್ದೆ ಉಲ್ಲಂಘನೆ ಪ್ರಕಾರ, ಗಿರಿಜನರು ಅರಣ್ಯದಲ್ಲಿ ವಾಸಿಸುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಕಾಡಿಗೆ ಬಂದಿರುವ ಆದಿವಾಸಿಗರನ್ನುತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. “ನಮಗೆ ಪುನರ್ವಸತಿ ಕೇಂದ್ರದಲ್ಲಿ ಸರಿಯಾದವ್ಯವಸ್ಥೆ ಇಲ್ಲ. ಆ ಸ್ಥಳ ವಾಸಿಸಲು ಯೋಗ್ಯವಲ್ಲ. ಹೀಗಾಗಿನಮಗೆ ಕಾಡು ವಾಸವೇ ಲೇಸು. ಹೀಗಾಗಿ ನಾವುವಾಪಸ್‌ ಅಲ್ಲಿಗೆ ಹೋಗಲ್ಲ’ ಎಂದು ಆದಿವಾಸಿಗರು ಪಟ್ಟು ಹಿಡಿದಿದ್ದಾರೆ. ಗಿರಿಜನರ ಈ ನಡೆಯಿಂದ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ತಾಲೂಕಿನ ಬೋಗಾಪುರ ಹಾಡಿಯ 15 ಕುಟುಂಬಗಳು ಪುನರ್ವಸತಿ ಕೇಂದ್ರದ ಅವ್ಯವಸ್ಥೆಗಳಿಂದರೋಸಿ ಹೋಗಿ 11 ವರ್ಷಗಳ ಬಳಿಕ ಮರಳಿ ಸ್ವಂತಹಾಡಿಗೆ ಆಗಮಿಸಿದ್ದಾರೆ. ಈ ಬೋಗಾಪುರ ಹಾಡಿಯು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆಬರುವುದರಿಂದ ಪ್ರವೇಶ ನಿರ್ಬಂಧವಿದ್ದು, ಇತ್ತ ಪುನರ್ವಸತಿಯೂ ಇಲ್ಲದೆ ಇತ್ತ ಹಾಡಿಗೆ ಪ್ರವೇಶವೂ ಇಲ್ಲದೆ ಅರಣ್ಯದಂಚಿನಲ್ಲಿ ಮೊಕ್ಕಾಂ ಹೂಡಿರುವ ಗಿರಿಜನರು ಅತಂತ್ರ ಸ್ಥಿತಿ ತಲುಪಿದ್ದಾರೆ.

ತೆರವು ಯತ್ನ: ಆದಿವಾಸಿಗರು ಅರಣ್ಯ ಪ್ರವೇಶಿಸಿದರೆ ಅವರನ್ನು ತೆರವುಗೊಳಿಸುವುದು ಕಷ್ಟ ಎಂಬುದನ್ನುಅರಿತ ಅರಣ್ಯ ಇಲಾಖೆ ಸಿಬ್ಬಂದಿಯವರುಅದಿವಾಸಿಗರು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಧಾವಿಸಿ,ಅಲ್ಲಿದ್ದ ಪಾತ್ರೆ ಮತ್ತಿತರ ಸಾಮಾನುಗಳನ್ನು ಹೊರಗೆಎಸೆದಿದ್ದಾರೆ. ಅನ್ನದ ಸಮೇತ ತಮ್ಮ ಪಾತ್ರೆಗಳನ್ನು ಬಿಸಾಡಿದ್ದಾರೆ ಎಂದು ಗಿರಿಜನರು ಆರೋಪಿಸಿದ್ದಾರೆ.

ಸೌಲಭ್ಯವಿಲ್ಲ: 11 ವರ್ಷಗಳ ಹಿಂದೆ 2010ನೇ ಸಾಲಿನಲ್ಲಿ 40 ಕುಟುಂಬಗಳನ್ನು ಇಲ್ಲಿಂದ ಒಕ್ಕಲೆಬ್ಬಿಸಿದಸರ್ಕಾರವು ಪುನರ್ವಸತಿ ಕೇಂದ್ರದಲ್ಲಿ ಎಲ್ಲಾ ಸೌಲಭ್ಯಕಲ್ಪಿಸುವ ಭರವಸೆ ನೀಡಿತ್ತು. ಆದರೆ, ಅಲ್ಲಿ ಸಮರ್ಪಕ ಸವಲತ್ತು ಕಲ್ಪಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಲಕ್ಕಪಟ್ಟಣ ಪುನರ್ವಸತಿ ಕೇಂದ್ರದಲ್ಲಿ ಶಿಥಿಲಾವಸ್ಥೆಮನೆಗಳನ್ನು ನೀಡಿದೆ. ಅಲ್ಲಿ ವಿದ್ಯುತ್‌ ಇಲ್ಲ, ಕುಡಿಯಲು ಸಮರ್ಪಕ ನೀರಿಲ್ಲ, ಅಕ್ರಮ ಮದ್ಯ ಮಾರಾಟದಿಂದನಮ್ಮ ಕಡೆಯ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಕೃಷಿಗೆ ಯೋಗ್ಯ ಭೂಮಿ ನೀಡಿಲ್ಲ, 18ವರ್ಷಮೇಲ್ಪಟ್ಟವರಿಗೆ 10 ಲಕ್ಷ ರೂ. ನೀಡುವ ಪ್ಯಾಕೇಜ್‌ ನೀಡಬೇಕು. ಆದರೆ, ಈ ತನಕ ಯಾರಿಗೂ ಹಣ ನೀಡಿಲ್ಲ. ಒಟ್ಟಾರೆ ಅಲ್ಲಿ ವಾಸಕ್ಕೆ ಯೋಗ್ಯವಾಗಿಲ್ಲ.ಹೀಗಾಗಿ ನಾವು ನಮ್ಮ ಮೂಲ ಸ್ಥಳಕ್ಕೆ ಆಗಮಿಸಿದ್ದೇವೆ.ಇಲ್ಲಿಯೇ ವಾಸವಾಗಿರಲು ತೀರ್ಮಾನಿಸಿದ್ದೇವೆ ಎಂದುಆದಿವಾಸಿಗರು ಪಟ್ಟು ಹಿಡಿದಿದ್ದಾರೆ.

ಸಾಮೂಹಿಕ ಆತ್ಮಹತ್ಯೆ: ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಆದಿವಾಸಿಗರ ಪ್ರವೇಶ ನಿರಾಕರಿಸಿದ್ದು, ಸರ್ಕಾರ ನಮಗೆ ಮೂಲ ಸ್ಥಳಕ್ಕೆಅವಕಾಶ ಕಲ್ಪಿಸದೇ ಹೋದರೆ ಎಲ್ಲಾ ಆದಿವಾಸಿಗರುಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಆದಿವಾಸಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಬೋಗಪುರ ಹಾಡಿಯ ಮಂದಿ ಪ್ರಸ್ತುತಅರಣ್ಯದಂಚಿನಲ್ಲಿ ಆಶ್ರಯ ಪಡೆದಿದ್ದು, ಮಕ್ಕಳುಮಹಿಳೆಯರ ಜೊತೆಯಲ್ಲಿ ಜೀವದ ಹಂಗು ತೊರೆದುಕೊರೆವ ಚಳಿಯನ್ನೂ ಲೆಕ್ಕಿಸದೇ ಬಯಲಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಸೌಲಭ್ಯ ಸಿಗುತ್ತೆ, ವಾಪಸ್‌ ಹೋಗಿ: ತಹಶೀಲ್ದಾರ್‌ :

ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ನರಗುಂದ, ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಸೇರಿದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆದಿವಾಸಿಗರ ಸಮಸ್ಯೆಗಳನ್ನು ಆಲಿಸಿದರು. ” ಮರಳಿ ಹಾಡಿಗೆ ಆಗಮಿಸುವುದು ಕಾನೂನು ಬಾಹಿರ. ಹಾಗೊಂದು ವೇಳೆ ಅರಣ್ಯ ಪ್ರವೇಶಿಸಿದ್ದೇ ಆದಲ್ಲಿ ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಪುನರ್ವಸತಿ ಕೇಂದ್ರದ ಸಮಸ್ಯೆಗಳ ಸರಿಪಡಿಸುವ ನಿಟ್ಟಿನಲ್ಲಿ ಹುಣಸೂರು ತಹಶೀಲ್ದಾರ್‌ ಅವರನ್ನುಸಂಪರ್ಕಿಸಲಾಗಿದೆ. ಮುಂದೆ ಎಲ್ಲವೂ ಸರಿಹೋಗಲಿದೆ. ಹೀಗಾಗಿ ಪುನರ್ವಸತಿ ಕೇಂದ್ರಕ್ಕೆ ವಾಪಸ್‌ ತೆರಳಿ’ ಎಂದು ತಹಶೀಲ್ದಾರ್‌ ಮನವಿ ಮಾಡಿದರು.

ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.