ಮಾರ್ಚ್‌ನಲ್ಲಿ ಗೋಶಾಲೆಗಳ ಆರಂಭ
Team Udayavani, Feb 24, 2017, 12:03 PM IST
ಮೈಸೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಆರಂಭ ವಾಗಲಿದೆ. ಜತೆಗೆ ರೈತರಿಗೆ ಮೇವು ಬ್ಯಾಂಕ್‌ಗಳಲ್ಲಿ ನೀಡಲಾಗುವ ಹುಲ್ಲಿನ ದರವನ್ನು ಪ್ರತಿ ಕೆಜಿಗೆ 2 ರೂ.ಗೆ ಇಳಿಸಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ತಿಳಿಸಿದರು.
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳ ಸಭೆಯಲ್ಲಿ ನೀಡಲಾದ ಜಿಲ್ಲಾವಾರು ಮೇವು ಸಂಗ್ರಹದ ಮಾಹಿತಿಯನ್ನು ಮುಖ್ಯ ಮಂತ್ರಿಯವರು ಒಪ್ಪದೆ, ಹಳ್ಳಿಗಳಲ್ಲಿ ರೈತರ ಮನೆ ಮನೆ ಸಮೀಕ್ಷೆ ನಡೆಸಿ, ಯಾವ ರೈತರ ಬಳಿ ಹುಲ್ಲಿದೆ, ಯಾರ ಬಳಿ ಇಲ್ಲ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಿದ್ದಾರೆ.
ಜತೆಗೆ ಮೇವು ಬ್ಯಾಂಕ್‌ಗಳ ಮೂಲಕ ಜಾನುವಾರುಗಳಿಗೆ ಸಮರ್ಪಕ ವಾಗಿ ಮೇವು ಒದಗಿಸಲಾಗುವುದಿಲ್ಲ. ಹೀಗಾಗಿ ಗೋಶಾಲೆ ತೆರೆಯುವಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಾರ್ಚ್‌ನಲ್ಲಿ ಗೋಶಾಲೆಗಳು ಆರಂಭವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ವಿವರಣೆ ನೀಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ಜಿಲ್ಲೆಯಲ್ಲಿ 5 ಲಕ್ಷ ಜಾನುವಾರುಗಳಿದ್ದು, ಎಲ್ಲರಿಗೂ ಮೇವು ಕೊಡುವುದಾದರೆ ನಿತ್ಯ 3 ಸಾವಿರ ಟನ್ ಮೇವು ಬೇಕಾಗುತ್ತದೆ. ಆದರೆ, ಐದು ದಿನಕ್ಕೊಮ್ಮೆ ಪ್ರತಿ ಜಾನುವಾರಿಗೆ ದಿನಕ್ಕೆ 5 ಕೆಜಿಯಂತೆ ಮೇವು ಬ್ಯಾಂಕ್‌ಗಳ ಮೂಲಕ ಕೊಡಲಾಗಿದೆ.
ಕೆಲ ಮೇವು ಬ್ಯಾಂಕ್‌ಗಳಲ್ಲಿ ಈವರೆಗೆ 2-3 ಬಾರಿ ಮೇವು ಕೊಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 618 ಮೆಟ್ರಿಕ್ ಟನ್ ಮೇವು ಖರೀದಿಸಲಾಗಿದ್ದು, ಈವರೆಗೆ 354 ಟನ್ ವಿತರಣೆ ಮಾಡಲಾಗಿದೆ. ಇನ್ನೂ 264 ಟನ್ ಮೇವು ದಾಸ್ತಾನಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳ ಜತೆಗೂಡಿ ಗ್ರಾಮಗಳಲ್ಲಿ ಹುಲ್ಲು ಎಷ್ಟಿದೆ ಎಂಬ ಬಗ್ಗೆ ಮನೆ ಮನೆ ಸಮೀಕ್ಷೆ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಕಾಲು-ಬಾಯಿ ಜ್ವರ: ಗೋಶಾಲೆಗಳಿಂದ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಹರಡುವ ಆತಂಕ ಇರುವುದರಿಂದ ಗೋಶಾಲೆ ತೆರೆಯಲು ವಿಳಂಬ ಮಾಡಲಾಗುತ್ತಿದೆ. ಈಗಾಗಲೇ ಹಾಸನ, ಮಂಡ್ಯ, ಚಾಮರಾಜನಗರಗಳ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಹರಡಿದೆ ಎಂದು ಮಾಹಿತಿ ನೀಡಿದರು.
ಇನ್ನು ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಯಲ್ಲಿ ಮೇವು ಬ್ಯಾಂಕ್ ತೆರೆಯಲು ಹುಲ್ಲು ದಾಸ್ತಾನು ಮಾಡಲಾಗಿದ್ದರೂ ಗಣ್ಯರಿಗೋಸ್ಕರ ಕಾಯುತ್ತಾ ವಿಳಂಬ ಮಾಡುತ್ತಿರುವ ಬಗ್ಗೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ ಅಸಮಾಧಾನ ವ್ಯಕ್ತಪಡಸಿದರು. ಮಧ್ಯಪ್ರವೇಶಿಸಿದ ಸಿಇಒ, ಕಸುವಿನಹಳ್ಳಿಯಲ್ಲಿ ಶುಕ್ರವಾರವೇ ಮೇವು ಬ್ಯಾಂಕ್ ಆರಂಭಿಸಲು ತಾಪಂ ಅಧಿಕಾರಿಗೆ ಸೂಚನೆ ನೀಡಿದರು.
ಸೇರ್ಪಡೆ – ಮಾರ್ಪಾಡು: ತಾಪಂ ಯೋಜನೆಯಡಿ ಶಿಕ್ಷಣ ಇಲಾಖೆಯ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದಲ್ಲಿ ಎಚ್.ಡಿ. ಕೋಟೆ ತಾಲೂಕಿಗೆ 6.75 ಲಕ್ಷ ರೂ. ಬಿಡುಗಡೆಯಾಗಿದ್ದು, 12 ಕಾಮಗಾರಿ ಗಳಲ್ಲಿ 4 ಪೂರ್ಣಗೊಂಡಿದ್ದು, 8 ಪ್ರಗತಿ ಯಲ್ಲಿವೆ. ಹುಣಸೂರು ತಾಲೂಕಿಗೆ 6.50 ಲಕ್ಷ ರೂ. ಬಿಡುಗಡೆಯಾಗಿದ್ದು, 6 ಕಾಮಗಾರಿಗಳಲ್ಲಿ 4 ಪೂರ್ಣಗೊಂಡಿದೆ. ಕೆ.ಆರ್. ನಗರ ತಾಲೂಕಿಗೆ 6.50 ಲಕ್ಷ ಬಿಡುಗಡೆಯಾಗಿದ್ದು, 8 ಕಾಮಗಾರಿಯಲ್ಲಿ 3 ಮಾತ್ರ ಪ್ರಗತಿಯಲ್ಲಿದೆ.
ಪಿರಿಯಾಪಟ್ಟಣ ತಾಲೂಕಿಗೆ 6.75 ಲಕ್ಷ ಬಿಡುಗಡೆಯಾಗಿದ್ದು, 7 ಕಾಮಗಾರಿಗಳಲ್ಲಿ 2 ಪೂರ್ಣಗೊಂಡಿದ್ದು, 5 ಕಾಮಗಾರಿ ಪ್ರಗತಿ ಯಲ್ಲಿದೆ. ನಂಜನಗೂಡು ತಾಲೂಕಿಗೆ 7 ಲಕ್ಷ ರೂ. ಬಿಡುಗಡೆ ಯಾಗಿದ್ದು, 7 ಕಾಮಗಾರಿಗಳಲ್ಲಿ 6 ಪ್ರಗತಿ ಯಲ್ಲಿವೆ. ತಿ.ನರಸೀಪುರ ತಾಲೂಕಿಗೆ 6.50 ಲಕ್ಷ ಬಿಡುಗಡೆ ಯಾಗಿದ್ದು, 6 ಕಾಮಗಾರಿಗಳಲ್ಲಿ 3 ಪೂರ್ಣ ಗೊಂಡಿದ್ದು, 3 ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದಮೂರ್ತಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಜರಿದ್ದರು.
“ಸರ್ಕಾರಿ ಸೇವೆಗೆ ಅನ್‌ಫಿಟ್ ನೀನು’
ತಾಲೂಕು ಪ್ಲಾನಿಂಗ್ ಆಫೀಸರ್ ಆಗಿ ಏನ್ಮಾಡ್ತಿ ನೀನು. ಕೆಲಸ ಮಾಡದೆ ಸಂಬಳ ತಗೊಂಡೊಗೋಕೆ ಬಂದಿದ್ದೀಯಾ. ಸರ್ಕಾರಿ ಸೇವೆಗೆ ಅನ್‌ಫಿಟ್ ನೀನು. ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡ ಬೇಕಾಗ್ತದೆ ಎಂದು ಜಿಪಂ ಸಿಇಒ ಪಿ. ಶಿವಶಂಕರ್, ಎಚ್.ಡಿ.ಕೋಟೆ ತಾಲೂಕು ಯೋಜನಾ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಜನವರಿ 11ರಂದು ನಡೆದ ಕೆಡಿಪಿ ಸಭೆಯ ನಡಾವಳಿ ಮೇಲಿನ ಅನುಪಾಲನಾ ವರದಿ ಮಂಡನೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಯೋಜನೆಯಡಿ ಶಿಕ್ಷಣ ಇಲಾಖೆಯ ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದ ತಾಲೂಕುವಾರು ಪ್ರಗತಿ ಪರಿಶೀಲನೆ ವೇಳೆ ಎಚ್.ಡಿ.ಕೋಟೆ ತಾಲೂಕು ಯೋಜನಾಧಿಕಾರಿ, ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಸಭೆಗೆ ಬಂದಿದ್ದರು.
ಅಲ್ಲದೆ ತಾಲೂಕಿಗೆ ಬಿಡುಗಡೆಯಾದ 6.75 ಲಕ್ಷ ರೂ.ಗಳ ಕಾಮಗಾರಿ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ತಡಕಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡ ಸಿಇಒ, ಅನು ಪಾಲನಾ ವರದಿ ನೋಡಿಕೊಂಡು ಸಭೆಗೆ ಯಾಕೆ ಬರಲ್ಲ. ಸೇರ್ಪಡೆ – ಮಾರ್ಪಡು ಕಾರ್ಯಕ್ರಮದಲ್ಲಿ 12 ಕಾಮಗಾರಿಗೆ 6.75 ಲಕ್ಷ ರೂ. ಬಿಡುಗಡೆಯಾಗಿದೆ. ಇದರ ಪ್ರಗತಿ ವರದಿ ತರದೆ ಸಭೆಗೇಕೆ ಬರಿಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಶಾಲಾ ಕಟ್ಟಡ ದುರಸ್ತಿಗೆ 10.40 ಕೋಟಿ ರೂ.
ಡಿಡಿಪಿಐ ಎಚ್.ಆರ್ ಬಸಪ್ಪ ಮಾತನಾಡಿ, ಜಿಲ್ಲೆಯ ಶಾಲಾ ಕಟ್ಟಡಗಳ ದುರಸ್ತಿಗೆ 10.40 ಕೋಟಿ ರೂ. ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಒಂದೂವರೆ ತಿಂಗಳ ಹಿಂದೆಯೇ ಸಲ್ಲಿಸಲಾಗಿದೆ ಎಂದರು. ಪಶುಭಾಗ್ಯ ಯೋಜನೆಯಡಿ ಎಚ್.ಡಿ. ಕೋಟೆ, ಕೆ.ಆರ್.ನಗರ ಬಿಟ್ಟು ಉಳಿದ ಐದು ತಾಲೂಕುಗಳಲ್ಲಿ ಫಲಾನುಭವಿಗಳ ಆಯ್ಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಾಳೆಹಣ್ಣಿನ ಜ್ಯೂಸ್ ಘಟಕ: ಬಾಳೆಹಣ್ಣಿನ ಜ್ಯೂಸ್ ತಯಾರಿಕಾ ತರಬೇತಿಯನ್ನು ಸಿಎಫ್ಟಿಆರ್‌ಐನಲ್ಲಿ ಜಿಲ್ಲಾ ಎಲ್ಲಾ ಏಳು ತಾಲೂಕುಗಳ 7 ಇಲಾಖಾ ಅಧಿಕಾರಿಗಳು ಸೇರಿದಂತೆ 28 ಜನ ರೈತರಿಗೆ ತರಬೇತಿ ಕೊಡಿಸಲಾಗಿದೆ.
ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಟೋನ್‌ಮಿಲ್ಕ್ ಮಾದರಿಯಲ್ಲಿ ಬಾಳೆಹಣ್ಣಿನ ಜ್ಯೂಸ್ ಮಾರಾಟ ಮಾಡುವ ಯೋಜನೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ವಿವರಿಸಿದರು. ಬೇಡಿಕೆ ನೋಡಿಕೊಂಡು ಮಾಡಿ, ಯಶಸ್ಸುಕಂಡರೆ ಮುಂದುವರಿಸಿ, ಇಲ್ಲವಾದರೆ ಬೇಡ. ಅದಕ್ಕಾಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಘಟಕ ಆರಂಭಿಸುವಂತೆ ಸಿಇಒ ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.