![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 22, 2021, 12:50 PM IST
ಎಚ್.ಡಿ.ಕೋಟೆ: ತಾಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಪ್ಪಿತಪ್ಪಿ ಕೂಡ ರಾತ್ರಿ ತುರ್ತು ಚಿಕಿತ್ಸೆಗೆ ಹೋಗಬೇಡಿ. ಒಂದು ವೇಳೆ ಹೋದರೂ ಬರಿಗೈಲಿ ವಾಪಸ್ ಬರುವುದು ಖಚಿತ. ಏಕೆಂದರೆ ಈ ಆಸ್ಪತ್ರೆಯಲ್ಲಿ ರಾತ್ರಿ ವಿದ್ಯುತ್ ಸೌಲಭ್ಯವೇ ಇಲ್ಲದಿ ರುವಾಗ ಇನ್ನು ಚಿಕಿತ್ಸೆ ಹೇಗೆ ಸಾಧ್ಯ?, ಕನಿಷ್ಠ ಪಕ್ಷ ಆಸ್ಪತ್ರೆಯಲ್ಲಿ ಯುಪಿಎಸ್ ವ್ಯವಸ್ಥೆಯೇ ಇಲ್ಲವಾಗಿದೆ.
ಯುಪಿಎಸ್ ಕೆಟ್ಟು ತಿಂಗಳು ಕಳೆದರೂ ದುರಸ್ತಿಯಾಗಿಲ್ಲ. ಆದಿವಾಸಿ ತುಂಬು ಗರ್ಭಿಣಿಯೊಬ್ಬರು ತುರ್ತು ಚಿಕಿತ್ಸೆಗೆ ಹೋದಾಗ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ವಾಪಸ್ ಕಳುಹಿಸಿದ್ದಾರೆ. ವಾರದ ಹಿಂದಷ್ಟೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಆದಿವಾಸಿ ಮಹಿಳೆ ತನ್ನ ಪೋಷಕರೊಂದಿಗೆ ರಾತ್ರಿ ವೇಳೆ ಆಸ್ಪತ್ರೆಗೆ ಆಗಮಿಸಿದ್ದಾರೆ.
ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಆಕೆಯನ್ನು ಎಚ್.ಡಿ. ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಳೆದ ವಾರ ಅಣ್ಣೂರು ಆಸ್ಪತ್ರೆ ವೈದ್ಯ ರಾದ ಡಾ.ಹರ್ಷಿತ್ ಶೆಟ್ಟಿ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, “ಕಳೆದ ವಾರದ ಹಿಂದಷ್ಟೇ ಯುಪಿಸಿ ಕೆಟ್ಟು ಹೋಗಿದೆ. ಒಂದೇ ದಿನದಲ್ಲಿ ದುರಸ್ತಿ ಮಾಡಿಸಲಾಗುವುದು’ ಎಂದು ಹೇಳಿದ್ದರು.
ಇದನ್ನೂ ಓದಿ;- ಮಕ್ಕಳಿಗೆ ಸಂಸ್ಕಾರ ಕೊಡಿಸದಿದ್ದರೆ ಅಪಾಯ: ಸ್ವರ್ಣವಲ್ಲೀ ಶ್ರೀ
ಈ ಭರವಸೆಯ ಮಾತು ಒಂದು ದಿನ ಅಲ್ಲ, ವಾರವೇ ಉರುಳಿದರೂ ಯಾವುದೇ ಕ್ರಮ ವಹಿಸಿಲ್ಲ. ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇತರೆ ಆರೋಗ್ಯ ಕೇಂದ್ರಗಳಂತೆ ವಿದ್ಯುತ್ ವ್ಯತ್ಯಯವಾಗ ದಂತೆ ಯುಪಿಎಸ್ ಅಳವಡಿಸಲಾಗಿದೆ. ಆದರೆ, ಈ ಯಂತ್ರ ನಿರ್ವಹಣೆ ಕಾಣದೇ ತಿಂಗಳು ಕಳೆದರೂ ದುರಸ್ತಿಪಡಿಸಿಲ್ಲ. ರಾತ್ರಿ ವೇಳೆ ಕರೆಂಟ್ ಹೋದರೆ ಆಸ್ಪತ್ರೆಯಲ್ಲಿ ಕಗ್ಗತ್ತಲು ಆವರಿಸಿರುತ್ತದೆ. ಕರೆಂಟ್ ಮತ್ತೆ ಬರುವ ತನಕ ಕತ್ತಲಿನಲ್ಲಿ ಕಾಲ ಕಳೆಯ ಬೇಕಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ರೋಗಿಗಳು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ಅವರನ್ನು ದೇವರೇ ಕಾಪಾಡಬೇಕಿದೆ. ಎಚ್.ಡಿ.ಕೋಟೆ ತಾಲೂಕಿನ ಇತರೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಲಿಕೆ ಮಾಡಿದಾಗ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 34,800 ಜನಸಂಖ್ಯೆ ಇದೆ..
ಅದರಲ್ಲೂ ಹಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಪ್ರತಿ 10 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು ಎಂಬ ನಿಯಮ ಇದೆ. ಆದರೆ, ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 35 ಸಾವಿರ ಜನಸಂಖ್ಯೆ ಹೊಂದಿದ್ದರೂ ಸಮರ್ಪಕ ವ್ಯವಸ್ಥೆಯೇ ಇಲ್ಲವಾಗಿದೆ. ಈ ಭಾಗದಲ್ಲಿ ಜನರಲ್ಲಿ ರಾತ್ರಿ ಆರೋಗ್ಯ ವ್ಯತ್ಯಯವಾದರೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯೇ ಸಿಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಂಡು ಆಸ್ಪತ್ರೆಗೆ ಯುಪಿಎಸ್ ದುರಸ್ತಿ ಮಾಡಿಸಿ, ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ಸಿಗುವಂತೆ ಮಾಡಬೇಕಿದೆ.
“ತಾಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಡಿಗಳು ಸೇರಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣದಲ್ಲೇ ವಿದ್ಯುತ್ ಸಮಸ್ಯೆ ಸರಿಪಡಿಸಲಾಗುವುದು.” – ಡಾ| ರವಿಕುಮಾರ್ ತಾಲೂಕು ಆರೋಗ್ಯಾಧಿಕಾರಿ
– ಎಚ್.ಬಿ.ಬಸವರಾಜು
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.