ಶೇ.71ರಷ್ಟು ಕುಲ ಕಸುಬುದಾರರಿಗೆ ಸಹಾಯಧನ
ಜಿಲ್ಲೆಯಲ್ಲಿ 8,443 ಅರ್ಜಿ ಸಲ್ಲಿಕೆ 5,750 ಮಂದಿ ಖಾತೆಗೆ ಧನ ಸಹಾಯ ಜಮೆ
Team Udayavani, Aug 28, 2020, 3:57 PM IST
ಸಾಂದರ್ಭಿಕ ಚಿತ್ರ
ಮೈಸೂರು: ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಅಸಂಘಟಿತ ವಲಯ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ್ದ 5 ಸಾವಿರ ರೂ. ಸಹಾಯಧನ ಜಿಲ್ಲೆಯ ಶೇ.71ರಷ್ಟು ಜನರಿಗೆ ಸಂದಾಯವಾಗಿದೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ಸಾಂಪ್ರದಾಯಿಕ ಕುಲಕಸುಬುದಾರರ ಕೈಹಿಡಿದಿದೆ. ಮಾರ್ಚ್ ಅಂತ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಇಡೀ ದೇಶವೇ ಸ್ತಬ್ಧ ಗೊಂಡಿತ್ತು. ಮೂರುವರೆ ತಿಂಗಳಿಗೂ ಹೆಚ್ಚು ಕಾಲ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಿದ್ದರಿಂದ ನಿತ್ಯ ದುಡಿಮೆಯನ್ನೇ ನಂಬಿದ್ದ ಕಟ್ಟಡ ಕಾರ್ಮಿಕರು, ಕುಲ ಕಸುಬುದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಜೀವನ ನಿರ್ವಹಣೆಗೆ ಹೆಣಗಾಡುವಂತಾಗಿತ್ತು.
ಕಾರ್ಯ ಪ್ರಗತಿಯಲ್ಲಿದೆ: ರಾಜ್ಯ ಸರ್ಕಾರ ಉಚಿತ ಅಕ್ಕಿ ಸೇರಿದಂತೆ ಇತರೆ ಪಡಿತರ ನೀಡಿದರೂ ಮನೆಗೆ ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಇತರೆ ಖರ್ಚು-ವೆಚ್ಚಗಳಿಗೆ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಕೆಲವು ಕ್ಷೌರಿಕರು ಅಂಗಡಿ ತೆರದು ಪೊಲೀಸರಿಂದ ಲಾಠಿ ರುಚಿಯನ್ನೂ ಕಂಡಿದ್ದರು. ಅಗಸರಿಗೆ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಮನೆಗಳಿಂದ ಶುಚಿಗಾಗಿ ಬರುತ್ತಿದ್ದ ಬಟ್ಟೆಗಳು ಬರದ ಹಿನ್ನೆಲೆ ಅವರೂ ಕಷ್ಟದಲ್ಲಿದ್ದರು. ಮತ್ತೂಂದೆಡೆ ನೇರವಾಗಿ ಜನರ ಪ್ರಾಥಮಿಕ ಸಂಪರ್ಕಕ್ಕೆ ಬರುವುದರಿಂದ ಕೋವಿಡ್ ಭೀತಿಯೂ ಹೆಚ್ಚಿತ್ತು. ರಾಜ್ಯದ ವಿವಿಧೆಡೆ ಕ್ಷೌರಿಕರು, ಅಗಸರು ಸಂಕಷ್ಟದಲ್ಲಿರುವದನ್ನು ಕಂಡ ಸರ್ಕಾರ 5 ಸಾವಿರ ರೂ. ನೆರವು ಘೋಷಣೆ ಮಾಡಿತ್ತು. ಕೋವಿಡ್ ಸಂಕಷ್ಟದಲ್ಲಿಯೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಶೇ.71ರಷ್ಟು ಮಂದಿಗೆ ನೆರವು ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಶೇ.29ರಷ್ಟು ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯ 5750 ಮಂದಿಗೆ ನೆರವು:ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನೆರವು ಘೋಷಿದ ಹಿನ್ನೆಲೆ ಕುಲ ಕಸುಬನ್ನೇ ನಂಬಿ ಜೀವನ ನಡೆಸುತ್ತಿದ್ದ ನಗರ ಹಾಗೂ ಗ್ರಾಮಾಂತರ ಪ್ರದೇಶದ ಕ್ಷೌರಿಕರು ಹಾಗೂ ಅಗಸರು 8443 ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 266 ಅರ್ಜಿಗಳು ವಿವಿಧ ಕಾರಣದಿಂದ ತಿರಸ್ಕೃತಗೊಂಡರೆ, 8177 ಅರ್ಜಿಗಳನ್ನು ಸೌಲಭ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಸದ್ಯಕ್ಕೆ 5750 ಮಂದಿಗೆ ಈಗಾಗಲೇ ನೆರವು ಲಭ್ಯವಾದರೆ, 2427 ಅರ್ಜಿಗಳು ಬಾಕಿ ಉಳಿದಿವೆ. 15 ದಿನದಲ್ಲಿ ಪೂರ್ಣ: ಈವರೆಗೆ ಸೇವಾಸಿಂಧು ಪೋರ್ಟಲ್‌ನಲ್ಲಿ 3294 ಕ್ಷೌರಿಕ ಸಮಾಜದವರಿಂದ ಅರ್ಜಿಗಳು ಹಾಗೂ 5149 ಸರ್ಕಾರ ನಿಗದಿ ಮಾಡಿದ್ದ 5 ಸಾವಿರ ರೂ.ನೆರವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಉಳಿದ 2427 ಅರ್ಜಿಗಳ ದಾಖಲೆಯಲ್ಲಿ ಆಧಾರ್ ಲಿಂಕ್, ಬಿಪಿಎಲ್ ಕಾರ್ಡ್ ಸಂಖ್ಯೆ ಬಿಟ್ಟು ಹೋಗಿರುವುದರಿಂದ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಹದಿನೈದು ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ. ಪ್ರತಿನಿತ್ಯ ಅಲೆದಾಟ:ಆಧಾರ್ ಲಿಂಕ್, ಬಿಪಿಎಲ್ ಸಂಖ್ಯೆ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಸರ್ಕಾರದ ಸಹಾಯಧನ ಬಿಡುಗಡೆಯಾಗಿಲ್ಲ. ಪರಿಣಾಮ 2 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿತ್ಯ ತಮ್ಮ ಕೆಲಸ ಕಾರ್ಯ ಬಿಟ್ಟು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಅಲೆಯುವಂತಾಗಿದೆ.
ಕುಲಕಸುಬನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮ್ಮಂತ ಸಾವಿರಾರು ಮಂದಿಗೆ ಲಾಕ್‌ಡೌನ್ ಸಂದರ್ಭ ಜೀವನ ನಡೆಸುವುದಕ್ಕೆ ಕಷ್ಟವಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ 5 ಸಾವಿರ ರೂ. ಧನ ಸಹಾಯ ಸದ್ಯದ ಮಟ್ಟಿಗೆ ಸುಧಾರಿಸಿಕೊಳ್ಳಲು ನೆರವಾಗಿದೆ. – ಮಹದೇವ್, ಕಾರ್ಯದರ್ಶಿ ಮಡಿವಾಳ ಮಾಚಿದೇವರ ಸಂಘ
ಸರ್ಕಾರದ ಧನ ಸಹಾಯಕ್ಕಾಗಿ ಆನ್ ಲೈನ್ ಪೋರ್ಟಲ್‌ನಲ್ಲಿ ಸ್ವೀಕೃತ ಗೊಂಡಿದ್ದ ಶೇ.71ರಷ್ಟು ಅರ್ಜಿದಾ ರರಿಗೆ 20 ದಿನಗಳ ಒಳಗೆ ಸಹಾಯಧನ ಅವರ ಖಾತೆಗೆ ಜಮೆ ಆಗಿದೆ. ಉಳಿದ ಅರ್ಜಿದಾರರ ದಾಖಲೆಗಳಲ್ಲಿ ಲೋಪವಿರುವುದರಿಂದ ತಡವಾಗಿದೆ. ಕಟ್ಟಡ ಕಾರ್ಮಿರಿಗೆ ನೀಡುವ ಸೌಲಭ್ಯ ಪಡೆದುಕೊಂಡವರೂ ಅರ್ಜಿ ಸಲ್ಲಿಸಿದ್ದವರನ್ನೂ ಕೈಬಿಡಲಾಗಿದೆ. – ಎಸ್.ಎಂ. ಮಂಜುಳಾದೇವಿ, ಜಿಲ್ಲಾ ಕಾರ್ಮಿಕ ಅಧಿಕಾರಿ
–ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.