ಹುಣಸೂರು: ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಚಿವ ಸೋಮಶೇಖರ್
ಮೈ.ವಿ.ರವಿಶಂಕರ್ ಸರಕಾರದ ಅಭ್ಯರ್ಥಿ
Team Udayavani, May 13, 2022, 6:49 PM IST
ಹುಣಸೂರು: ನಗರದ ವಿವಿಧೆಡೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತಯಾಚಿಸಿದರು.ನಗರದ ಜೆ.ಎಸ್.ಎಸ್.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಲಿ-ಕಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದು .ಶಾಲೆಗೆ ಭೇಟಿ ನೀಡಿ ಶಿಕ್ಷಕರ ಬಳಿ ಮತಯಾಚಿಸಿದ ನಂತರ ಹುಣಸೂರು ವಕೀಲರ ಸಂಘದ ಭವನದಲ್ಲಿ ವಕೀಲರನ್ನು ಭೇಟಿ ಮಾಡಿ ಮತಯಾಚಿಸಿದರು.
ಈ ವೇಳೆ ಮಾತಮಾಡಿದ ಸಚಿವರು, ಕಳೆದ ಬಾರಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಮೈ.ವಿ.ರವಿಶಂಕರ್ ಕಾರ್ಯವೈಖರಿಯನ್ನು ಗುರುತಿಸಿರುವ ಬಿಜೆಪಿ ಪಕ್ಷವು ಮತ್ತೊಂದು ಅವಕಾಶ ಕಲ್ಪಿಸುವ ಮೂಲಕ ಈಬಾರಿ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇವರು ಸರಕಾರದ ಅಭ್ಯರ್ಥಿ ಕೂಡ, ರಾಜ್ಯದಲ್ಲಿ ಇನ್ನೂ ಒಂದು ವರ್ಷ ಕಾಲ ಬಿಜೆಪಿ ಸರಕಾರ ವಿರಲಿದೆ. ಪದವೀಧರರ ಸಂಕಷ್ಟ, ನಾಡಿ ಮಿಡಿತ ಅರಿತಿರುವ ರವಿಶಂಕರ್ ರವರಿಗೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಯನ್ನು ವಿಜಯಿಯನ್ನಾಗಿಸಿರೆಂದು ಮನವಿ ಮಾಡಿದರು.
ಪದವೀಧರರ ಸಂಕಷ್ಟಕ್ಕೆ ನೆರವಾಗುವ ಗುಣವುಳ್ಳ, ಸರಳ ಸಜ್ಜನಿಕೆಗೆ ಹೆಸರಾಗಿರುವ ಮೈ.ವಿ. ರವಿಶಂಕರ್‌ರನ್ನು ಗೆಲ್ಲಿಸಿಕೊಟ್ಟಲ್ಲಿ ಮೇಲ್ಮನೆಯಲ್ಲಿ ಪದವೀಧರರ ಸಮಸ್ಯೆಗಳಿಗೆ ಧ್ವನಿ ಎತ್ತುವ ಮೂಲಕ ನೆರವಾಗಲಿದ್ದಾರೆಂದು ಭರವಸೆ ಇತ್ತರು.
60 ಸಾವಿರ ನೊಂದಣಿ
ಜಿಲ್ಲೆಯಲ್ಲಿ ಸುಮಾರು 60 ಸಾವಿರ ಪದವೀಧರರನ್ನು ಈ ಬಾರಿ ನೊಂದಾಯಿಸಲಾಗಿದೆ. ಪ್ರತಿಯೊಬ್ಬ ಪಧವೀಧರರನ್ನು ಮುಖಂಡರು ಹಾಗೂ ನಮ್ಮ ಅಭ್ಯರ್ಥಿ ಈಗಾಗಲೆ ಭೇಟಿ ಮಾಡಿದ್ದಾರೆ. ಇವರು ಸರಕಾರದ ಅಭ್ಯರ್ಥಿಯೂ ಆಗಿದ್ದಾರೆ.ಹೀಗಾಗಿ ಗೆಲ್ಲುವ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ಮುಖಂಡರಾದ ಜಾಬಗರೆ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಜಾಬಗೆರೆ ರಮೇಶ್ ಕುಮಾರ್, ಜಿಲ್ಲಾ ಕಾರ್ಯ ದರ್ಶಿ ಯೋಗಾನಂದ ಕುಮಾರ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ನಗರಸಭಾ ಸದಸ್ಯ ವಿವೇಕಾನಂದ ಸೇರಿದಂತೆ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.