ಹೈನುಗಾರಿಕೆಯಿಂದ ಗ್ರಾಮೀಣರ ಬದುಕು ಹಸನು
Team Udayavani, Jan 14, 2019, 7:00 AM IST
ತಿ.ನರಸೀಪುರ: ಹಾಲಿಗೆ ಮಾರುಕಟ್ಟೆಯಲ್ಲಿ ನಿಖರವಾದ ಬೆಲೆ ಖಚಿತವಾಗಿ ಸಿಗುವುದರಿಂದ ರೈತರು ಹೈನುಗಾರಿಕೆಯಲ್ಲಿ ತೊಡಗಿ ಅಭಿವೃದ್ಧಿ ಹೊಂದಬೇಕು ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಕೆ.ಜಿ.ಮಹೇಶ್ ಹೇಳಿದರು.
ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಆರ್ಥಿಕವಾಗಿ ಸದೃಢರಾಗಲು ಹೈನುಗಾರಿಕೆ ಉಪ ಕಸುಬನ್ನಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಹೈನುಗಾರಿಕೆಗೆ ಉತ್ತೇಜನ ನೀಡಲು ಒಕ್ಕೂಟದಿಂದ ಹಾಲಿನ ಬೆಲೆಯನ್ನು 1 ರೂ. ಏರಿಕೆ ಮಾಡಿದ್ದೇವೆ. ಲೀಟರ್ ಹಾಲಿಗೆ ಕನಿಷ್ಠ ಬೆಲೆ 23.50 ರೂ. ನೀಡಲಾಗುತ್ತಿತ್ತು. ಈಗ 24.50 ರೂ. ಲಭಿಸಲಿದೆ ಎಂದರು. ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ,
ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವಲ್ಲಿ ಹೈನುಗಾರಿಕೆ ಸಹಕಾರಿಯಾಗಿದ್ದು, ಸರ್ಕಾರ ನೀಡುವ ಸಹಾಯಧನವನ್ನು ರೈತರ ಕುಟುಂಬದ ಆರೋಗ್ಯ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಪ್ರಗತಿಯ ಹಾದಿಯಲ್ಲಿರುವ ಹೆಗ್ಗೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವ ಸಾಮರ್ಥ್ಯದಿಂದ ಕಟ್ಟಡ ನಿರ್ಮಾಣ: ಹೆಗ್ಗೂರು ಗ್ರಾಮದಲ್ಲಿ ಯಾವುದೇ ಚುನಾಯಿತ ಜನಪ್ರತಿನಿಧಿಗಳ ಅನುದಾನವಿಲ್ಲದೆ, ಕೆಎಂಎಫ್ ಅಥವಾ ಜಿಲ್ಲಾ ಒಕ್ಕೂಟದ ನೆರವಿಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಿರುವುದು ವಿಶೇಷವಾಗಿದೆ.
ಈ ವೇಳೆ ಜಿಪಂ ಸದಸ್ಯ ಎಸ್.ಜಯಪಾಲ್ ಭರಣಿ, ತಾಪಂ ಅಧ್ಯಕ್ಷ ಆರ್.ಚಲುವರಾಜು, ಎಚ್.ಜವರಯ್ಯ, ಮೈಮುಲ್ ನಿರ್ದೇಶಕರಾದ ಕೆ.ಸಿ.ಬಲರಾಮ್, ಲೀಲಾ, ಮಾಜಿ ನಿರ್ದೇಶಕ ಕೆ.ಬಿ.ಪ್ರಭಾಕರ, ಉಪ ವ್ಯವಸ್ಥಾಪಕ ಡಾ.ಕೆ.ಬಿ.ಪ್ರಭಾಕರ್, ವಿಸ್ತರಣಾಧಿಕಾರಿ ಆರ್.ವಿನುತಾ, ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ಕಾ.ನಂ.ಗಣೇಶ್, ಎಂ.ರವೀಂದ್ರನಾಥ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಎನ್.ಆರ್.ರಾಜೇಶ್, ಗ್ರಾಪಂ ಅಧ್ಯಕ್ಷ ಸಿ.ರಾಜು,
ಮಾಜಿ ಅಧ್ಯಕ್ಷ ಟಿ.ಕೆ.ಲಕ್ಷ್ಮೀ, ಸದಸ್ಯರಾದ ಎಚ್.ಎನ್.ಸತೀಶ್, ಶೋಭಾ, ನಾಗರಾಜಚಾರಿ, ಪಿಎಸಿಸಿಎಸ್ ಅಧ್ಯಕ್ಷ ಎಚ್.ಕೆ.ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎಂ.ಅಂಕರಾಜೇಗೌಡ, ದಾಸಯ್ಯ, ಸಂಘದ ಅಧ್ಯಕ್ಷ ಎಚ್.ಪಿ.ಮಧುವರ್ಧನ್, ಸಿಇಒ ಎಚ್.ಆರ್.ನಿಂಗರಾಜು, ಉಪಾಧ್ಯಕ್ಷ ಬಸವೇಗೌಡ, ನಿರ್ದೇಶಕರಾದ ರಾಮಲಿಂಗೇಗೌಡ, ಎಚ್.ಎನ್.ನಾಗರಾಜು, ಎಚ್.ಎನ್.ನಂಜೇಗೌಡ, ಚಿಕ್ಕಸಿದ್ದಯ್ಯ, ಗೌರಮ್ಮ,ರತ್ನಮ್ಮ, ಕೆಂಪಮ್ಮ, ನಿಂಗಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.