ಗ್ರಾಮದೇವತೆ ಕಿತ್ತೂರಮ್ಮ ರಥೋತ್ಸವ ಸಂಪನ್ನ
Team Udayavani, Feb 26, 2018, 12:26 PM IST
ಕಿತ್ತೂರು: ಪಿರಿಯಾಪಟ್ಟಣ ತಾಲೂಕು ಕಿತ್ತೂರು ಗ್ರಾಮದೇವತೆ ದುರ್ಗಾಪರಮೇಶ್ವರಿ ಕಿತ್ತೂರಮ್ಮ 18 ಕೊಪ್ಪಲಿಗೆ ಹೆಸರಾದ ಗ್ರಾಮದೇವತೆ ಕಿತ್ತೂರಮ್ಮನ ರಥೋತ್ಸವ ಭಾನುವಾರ ದಶಮಿ ಲಗ್ನದಲ್ಲಿ ಅದ್ಧೂರಿಯಾಗಿ ಜರುಗಿತು.
ಕಿತ್ತೂರು ಹಾಗೂ ಸುತ್ತಮುತ್ತಲಿನ 18 ಕೊಪ್ಪಲಿನ ವಿವಿಧ ಕೋಮುಗಳ ಮುಖಂಡರ ಮುಂದಾಳತ್ವದಲ್ಲಿ ದೇವರನ್ನು ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಗ್ರಾಮದ ತೇರಿನ ಮನೆಯ ಹತ್ತಿರ ತಂದು ಪೂಜಿಸಿ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ರಥವನ್ನು ಎಳೆಯಲಾಯಿತು.
ಶಾಸಕ ಕೆ.ವೆಂಕಟೇಶ್ ಅಭಿಮಾನಿ ಸಂಘದ ವತಿಯಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜನರಿಗೆ ಮಜ್ಜಿಗೆ ಹಾಗೂ ಪಾನಕ ವಿತರಿಸಿದರು.
ರಥೋತ್ಸವದ ಸಂದರ್ಭದಲ್ಲಿ ಶಾಸಕ ಕೆ.ವೆಂಕಟೇಶ್, ಜಿಪಂ ಸದಸ್ಯರಾದ ಕೆ.ಎಸ್ ಮಂಜುನಾಥ್, ಮುಖಂಡರಾದ ಎಸ್.ಮಂಜುನಾಥ್, ತಾಪಂ ಸದಸ್ಯರಾದ ಕೆ.ಕೀರ್ತಿ, ಗ್ರಾಮದ ಮುಖಂಡರಾದ ಪಟೇಲ ಕೀರ್ತಿ ಹಾಗೂ ತಾಲೂಕಿನ ಎಲ್ಲ ಪಕ್ಷದ ಮುಖಂಡರುಗಳು ಆಗಮಿಸಿದ್ದರು, ಅರ್ಚಕ ರಾಜಶೇಖರ್, ಗ್ರಾಪಂ ಅಧ್ಯಕ್ಷ ಜವರೇಗೌಡ, ಗ್ರಾಪಂ ಸದಸ್ಯರಾದ ಜಿ.ಸಿ.ಮಹದೇವಶೆಟ್ಟಿ ಹಾಗೂ ಇನ್ನು ಹಲವು ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.