ರಂಗೇರಿದ ಗ್ರಾಪಂ ಚುನಾವಣಾ ಅಖಾಡ
Team Udayavani, Dec 8, 2020, 2:06 PM IST
ಸಾಂದರ್ಭಿಕ ಚಿತ್ರ
ಮೈಸೂರು: ಗ್ರಾಮ ಪಂಚಾಯ್ತಿ ಚುನಾವಣೆ ದಿನ ಘೋಷಣೆಯಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಚುನಾವಣೆಯ ಕಣ ರಂಗೇರಿದ್ದು, ಮತದಾರರ ಓಲೈಕೆಯ ಪ್ರಯತ್ನಗಳು ಗರಿಗೆದರಿವೆ.
ಗ್ರಾಪಂ ಚುನಾವಣಾ ಆಕಾಂಕ್ಷಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಈಗಾಗಲೇ ಗ್ರಾಮದ ಎಲ್ಲರ ಮನೆಗೆ ತೆರಳಿ ಒಂದು ಸುತ್ತಿನ ಮತ ಬೇಟೆಯ ಕಸರತ್ತು ನಡೆಸುವ ಮೂಲಕ ಮತದಾರರಿಗೆ ಆಮಿಷಗಳ ಮಹಾಪೂರವನ್ನೇ ಹರಿಸಿದ್ದಾರೆ. ಜೊತೆಗೆಗ್ರಾಮಗಳಲ್ಲಿ ಹೆಚ್ಚು ಮತ ಇರುವಕುಟುಂಬ, ಪ್ರಬಲಸಮುದಾಯಗಳ ಮುಖಂಡರ ಮನೆ ಮುಂದೆ ಪರೇಡ್ ನಡೆಸುತ್ತಿರುವ ಆಕಾಂಕ್ಷಿಗಳು, ಅವರ ಓಲೈಕೆಗೆ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.
ಸಂಘ ಸಂಸ್ಥೆಗಳಿಗೆ ಪ್ಯಾಕೇಜ್: ಗ್ರಾಮಗಳಲ್ಲಿರುವ ಪ್ರಮುಖ ಸಂಘಗಗಳು ಹಾಗೂ ಸಂಸ್ಥೆಗಳಿಗೆ ಇಂತಿಷ್ಟುಕಾಣಿಕೆ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಹಾಗೆಯೇ ಮಹಿಳಾ ಮತದಾರರ ಓಲೈಕೆಗಾಗಿ ಸ್ತ್ರೀಶಕ್ತಿ ಸಂಘಗಳ ಬಾಗಿಲು ತಟ್ಟುತ್ತಿರುವ ಆಕಾಂಕ್ಷಿಗಳು, ಪ್ರತಿ ಸಂಘಕ್ಕೆ ಇಂತಿಷ್ಟು ಹಣ, ಅಡುಗೆ ಪಾತ್ರೆ, ಶಾಮಿಯಾನ ಸೆಟ್, ಸೀರೆ ನೀಡುವು ದಾಗಿ ಮತ್ತು ಗೆದ್ದ ನಂತರ ಸಂಘಕ್ಕೆ ಕಟ್ಟಡ ಮತ್ತಿತರಸೌಕರ್ಯ ಕೊಡಿಸುವ ಹತ್ತಾರು ಭರವಸೆ ನೀಡಿದ್ದಾರೆ. ಈ ನಡುವೆ ಕೆಲ ಆಕಾಂಕ್ಷಿಗಳಿಂದ ಮದ್ಯ ಮತ್ತು ಬಾಡೂಟ ಹಂಚುವ ಕಾರ್ಯವೂ ಸದ್ದಿಲ್ಲದೆ ನಡೆದಿದೆ.
ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಒಟ್ಟು 250 ಗಾಮ ಪಂಚಾಯಿತಿಗಳಿಂದ 4,232 ಸದಸ್ಯರನ್ನು ಚುನಾಯಿಸಬೇಕಿದೆ. ಒಟ್ಟು 1,670 ಗ್ರಾಮಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಲಾಗಿದ್ದು,2,049 ಸಾಮಾನ್ಯ,2,183 ಮಹಿಳಾ ಸದಸ್ಯರಿಗೆ ನಿಯಮಾನು ಸಾರ ಮೀಸಲು ಇಡಲಾಗಿದೆ. ಡಿಸೆಂಬರ್22 ಹಾಗೂ 27ರಂದು ಎರಡು ಹಂತದಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಡಿ.30ರಂದು ಮತ ಎಣಿಕೆ ಇರಲಿದೆ.
ಜಿಲ್ಲೆಯಲ್ಲಿ ಒಟ್ಟು 266 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ 250 ಗ್ರಾಪಂಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಮೈಸೂರು ತಾಲೂಕಿನ14, ನಂಜನಗೂಡು ತಾಲೂಕಿನ ಎರಡು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ, ನಗರಸಭೆ ರಚನೆ/ಸೇರ್ಪಡೆ ಸಲುವಾಗಿ ಚುನಾವಣೆ ಯಿಂದ ಹೊರಗಿಡಲಾಗಿದೆ. ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿಗೆ ಸೇರಿದ ಗ್ರಾಮ ಪಂಚಾಯಿತಿಗಳಿಗೆ ಡಿ.22ರಂದು ಮೊದಲ ಹಂತದ ಚುನಾವಣೆ ನಡೆಯ ಲಿದೆ.ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಮತದಾನಕ್ಕಾಗಿ 1722 ಮೂಲ ಮತಗಟ್ಟೆ ಹಾಗೂ 356 ಆಕ್ಸಿಲರಿ ಮತಗಟ್ಟೆಗಳು ಸೇರಿ ಒಟ್ಟು 2,078 ಮತ ಗಟ್ಟೆಗಳಿವೆ. ಜಿಲ್ಲೆಯಲ್ಲಿ 6,81,474 ಪುರುಷ, 6,72,668 ಮಹಿಳಾ ಮತದಾರರು ಹಾಗೂ 71 ಇತರ ಮತದಾರರು ಸೇರಿ ಒಟ್ಟು13,54,213 ಮತದಾರರು ಇದ್ದಾರೆ.
ಮೊದಲ ಹಂತ: ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಹಾಗೂ ಸರಗೂರುತಾಲೂಕಿಗೆ ಸೇರಿದ ಗ್ರಾಮ ಪಂಚಾಯಿತಿಗಳ ನಾಮಪತ್ರಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದ್ದು,ಡಿ.11 ಉಮೇದುವಾರಿಕೆ ಸಲ್ಲಿಸಲು ಕಡೆಯದಿನವಾಗಿದೆ. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು 14 ಕಡೆಯ ದಿನವಾಗಿದೆ. ಡಿ. 22ರಂದು ಮತದಾನನಡೆಯಲಿದೆ. ಅಗತ್ಯಬಿದ್ದರೆ 24ರಂದು ಮರು ಮತದಾನ ನಡೆಯಲಿದೆ.
ಎರಡನೇ ಹಂತ: ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎಡರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಡಿ.11ರಿಂದ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆಪ್ರಕ್ರಿಯೆ ಆರಂಭವಾಗಲಿದೆ. ಡಿ.16 ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನ. 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಹಿಂಪಡೆಯಲು 19 ಕಡೆಯ ದಿನವಾಗಿದೆ. 27 ರಂದುಮತದಾನ ನಡೆಯಲಿದೆ. ಅಗತ್ಯಬಿದ್ದರೆ 29ರಂದು ಮರು ಮತದಾನ ನಡೆಯಿದೆ.
ಮದ್ಯದಂಗಡಿಗಳಲ್ಲಿ ನೋ ಸ್ಟಾಕ್ : ಈಗಾಗಲೇ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳಲ್ಲಿಕಡಿಮೆ ಬೆಲೆಯ ಮದ್ಯ ಖಾಲಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಚುನಾವಣಾ ಆಕಾಂಕ್ಷಿಗಳು ಮತದಾರರ ಓಲೈಕೆಗಾಗಿ ಮದ್ಯ ಸಂಗ್ರಹಕ್ಕೆ ಮುಂದಾಗಿರುವುದರಿಂದ ಎಲ್ಲಾ ಕಡೆ ಕಡಿಮೆ ಬೆಲೆಯ ಮದ್ಯ ಸಿಗದಂತಾಗಿದ್ದು, ಮದ್ಯಕ್ಕಾಗಿನಗರ ಪ್ರದೇಶಗಳತ್ತ ಮುಖಮಾಡಿದ್ದಾರೆ.
ಮೊದಲ ಹಂತಕ್ಕೆ ನೀತಿಸಂಹಿತೆ ಜಾರಿ : ರಾಜ್ಯ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಸೋಮವಾರದಿಂದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.