ಬಾಬೂಜೀ ಭವನಕ್ಕೆ ಅನುದಾನ
Team Udayavani, Nov 11, 2017, 1:05 PM IST
ಭೇರ್ಯ: “ನನ್ನ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಬಹುತೇಕ ಅಂಬೇಡ್ಕರ್ ಭವನಗಳು ನಿರ್ಮಾಣವಾಗಿದ್ದು ಮಿರ್ಲೆ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ಬಾಬು ಜಗಜೀವನ್‌ರಾಂ ಸಮುದಾಯ ಭವನ ನಿರ್ಮಾಣಕ್ಕೆ 12 ಲಕ್ಷ ರೂ.ಅನುದಾನ ನೀಡುವುದಾಗಿ ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಸಮೀಪದ ಮಿರ್ಲೆ ಗ್ರಾಮದ ಪೌರ ಕಾರ್ಮಿಕರ ಕಾಲೋನಿಯ ದಸಂಸ ಗ್ರಾಮಶಾಖೆ ಬುದ್ಧವನ ಪೌರಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾಲೋನಿಯಲ್ಲಿ ವಾಸವಿರುವ ಎಲ್ಲಾ ಪೌರಕಾರ್ಮಿಕ ಕುಟುಂಬಗಳಿಗೆ ನಿಯಮಾನುಸಾರ ವಾಸಸ್ಥಳದ ದಾಖಲೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನ ನೀಡಿರುವ ಮೀಸಲಾತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು, ಶಿಕ್ಷಣವಂತರಾದರೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಲು, ಕೀಳರಿಮೆ ಹೋಗಲಾಡಿಸಲು ಸಹಕಾರಿಯಾಗಲಿದೆ. ಪೌರಕಾರ್ಮಿಕರ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯ ನೀಡಲು ತಾನೂ ಸಹಕಾರ ನೀಡುವುದಾಗಿ ತಿಳಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ ಮಲ್ಲಾಡಿ, ಶಾಸಕ ಸಾ.ರಾ.ಮಹೇಶ್ ಅವರು ಒಂಬತ್ತೂವರೆ ವರ್ಷ ಶಾಸಕರಾಗಿದ್ದು, ಈ ದಿನಗಳ ಅವಧಿಯಲ್ಲಿ ಯಾವುದೇ ದೌರ್ಜನ್ಯ ಪ್ರಕರಣಗಳಾಗಲಿ ಅಥವಾ ಘರ್ಷಣೆಗೆ ಅವಕಾಶ ನೀಡದೇ ಸದಾ ದಲಿತ ಸಮುದಾಯದ ಏಳಿಗೆಗೆ ದುಡಿಯುತ್ತಾ ಬಂದಿರುವುದು ಶ್ಲಾಘನೀಯ. ಇಂತಹ ಗುಣಗಳನ್ನು ಉಳಿದ ಶಾಸಕರು ಆಳವಡಿಸಿ ಕೊಂಡಾಗ ಮಾತ್ರ ಎಷ್ಟೋ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟ ಬಹುದು ಎಂದರು.
ಪ್ರಸ್ತುತ ದಲಿತ ಜನಾಂಗ ಸೇರಿದಂತೆ ಎಲ್ಲಾ ಜಾತಿ ಜನಾಂಗದಲ್ಲಿಯೂ ಮೀಸಲಾತಿ ಉಳ್ಳವರ ಪಾಲಾಗಿದ್ದು, ಅದರಲ್ಲಿ ರಾಜಕಾರಣಿ, ಐಎಎಸ್, ಐಪಿಎಸ್, ಉನ್ನತ ವರ್ಗದ ಅಧಿಕಾರಿಗಳ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ನುಡಿದರು.
ಮಧ್ಯಮ ವರ್ಗದವರ ಹಾಗೂ ಬಡವರ ಮಕ್ಕಳಿಗೆ ಯಾವುದೇ ಸರ್ಕಾರಿ ನೌಕರಿಯಾಗಲಿ ಅಥವಾ ಸರ್ಕಾರದ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಸ್ಥರು ಇಂತಹ ಕೀಳರಿಮೆ ಬಿಟ್ಟು ಮೀಸಲಾತಿಯಲ್ಲಿ ಉದ್ಯೋಗ ಪಡೆಯದೇ, ಬಡವರ ಮಕ್ಕಳಿಗೆ ಉದ್ಯೋಗ ದೊರೆಯುವಂತೆ ಅವಕಾಶ ಕಲ್ಪಿಸಲಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರು ಮುಗ್ಧರು, ಇವರಲ್ಲಿ ಮಾನವೀಯತೆಯಿಂದ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ದನಿಯಿಲ್ಲದ ಇಂತಹವರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಜವಾಬ್ದಾರಿ ಬರೀ ಸರ್ಕಾರದ್ದಲ್ಲ. ಎಲ್ಲಾ ಪ್ರಜಾnವಂತ ನಾಗರಿಕರದು ಎಂದು ತಿಳಿಸಿದರು. ಬಹಳ ಹಿಂದಿನಿಂದಲೂ ಜಾತಿ ವ್ಯವಸ್ಥೆ ಬೇರೂರಿದ್ದು, ಸಹೋದರತ್ವ, ಸೌಹಾರ್ದತೆ, ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ದಸಂಸ ಉಪಪ್ರಧಾನ ಸಂಚಾಲಕ ಎಚ್.ಬಿ.ದಿವಾಕರ್, ದಲಿತ ಮುಖಂಡ ಹನಸೋಗೆ ನಾಗರಾಜ್, ಗ್ರಾಪಂ ಅಧ್ಯಕ್ಷ ಮಹದೇವ್, ತಾಪಂ ಸದಸ್ಯೆ ಶೋಭಾಕೋಟೇಗೌಡ, ದಸಂಸ ತಾಲೂಕು ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಸಂಘಟನಾ ಸಂಚಾಲಕರಾದ ಎಸ್.ಎನ್.ಮೂರ್ತಿ, ಸುಧಾಕರ, ಮೈಸೂರು ನಗರ ಸಂಚಾಲಕ ಬಸವನಗುಡಿ ಕೆ.ನಂಜಪ್ಪ, ತಾಲೂಕು ದಸಂಸ ಪದಾಧಿಕಾರಿಗಳು, ಪೌರಕಾರ್ಮಿಕರು, ಗ್ರಾಪಂ ಸದಸ್ಯರು ಇದ್ದರು.
ಕೃಷ್ಣರಾಜನಗರ ತಾಲೂಕಿನಲ್ಲಿ ಎಲ್ಲಾ ಕೋಮಿನವರು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದೇನೆ. ತಾನು ಶಾಸಕನಾದ ಬಳಿಕ ದೌರ್ಜನ್ಯ ಪ್ರಕರಣಗಳು ಮತ್ತು ಸಣ್ಣ ಸಂಘರ್ಷಕ್ಕೂ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದ್ದೇನೆ.
-ಸಾ.ರಾ.ಮಹೇಶ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.