ಪರಿಸರ ಸ್ನೇಹಿ ಮದುವೆಗೆ ಹಸಿರು ವಿವಾಹ ಪತ್ರ


Team Udayavani, Apr 28, 2019, 3:00 AM IST

parisara

ಮೈಸೂರು: ಜಿಲ್ಲಾಡಳಿತ ಹಾಗೂ ಪಾಲಿಕೆ ಹಸಿರು ವಿಹಾಹ ಎಂಬ ವಿನೂತನ ಯೋಜನೆ ಜಾರಿಗೆ ತರುವ ಮೂಲಕ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಇನ್ನುಷ್ಟು ಸುಧಾರಿಸಲು ವಿನೂತನ ಹೆಜ್ಜೆ ಇರಿಸಿದೆ.

ನಗರದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಮತ್ತು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೆ ಹಾಗೂ ಕಡಿಮೆ ತ್ಯಾಜ್ಯ ಉಂಟಾಗುವ ರೀತಿಯಲ್ಲಿ ಮದುವೆ ಸಮಾರಂಭವನ್ನು ನಿರ್ವಹಿಸಿದ ಮದುವೆಗೆ ಪಾಲಿಕೆ ಹಾಗೂ ಜಿಲ್ಲಾಡಳಿತ “ಹಸಿರು ವಿವಾಹ’ ಎಂಬ ಅಭಿನಂದನಾ ಪ್ರಮಾಣ ಪತ್ರ ನೀಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹಾಗೂ ತ್ಯಾಜ್ಯ ಉತ್ಪತಿ ಹೆಚ್ಚಾಗುತ್ತಿದೆ. ಊಟದ ಟೇಬಲ್‌ ಮೇಲೆ ಹಾಸುವ ಪ್ಲಾಸ್ಟಿಕ್‌ ಮತ್ತು ಪೇಪರ್‌ ಸೇರಿದಂತೆ ನೀರಿನ ಬಾಟಲಿ, ಲೋಟ, ತಟ್ಟೆ, ತಾಂಬೂಲ ನೀಡುವ ಕವರ್‌ ಕೂಡ ಪ್ಲಾಸ್ಟಿಕ್‌ ಆಗಿದ್ದು, ಇವುಗಳಿಂದ ಟನ್‌ ಗಟ್ಟಲೆ ತ್ಯಾಜ್ಯ ಉತ್ಪತಿಯಾಗುತ್ತದೆ.

ಅದರಲ್ಲೂ ಪ್ಲಾಸ್ಟಿಕ್‌ ಇಲ್ಲದೆ ಯಾವುದೇ ಕಾರ್ಯ ಸಾಧ್ಯವಿಲ್ಲ ಎಂಬಂತಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ 182 ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಿದ್ದು, ಇವುಗಳಿಂದ ಪ್ರತಿನಿತ್ಯ 1.5 ಟನ್‌ನಂತೆ 250 ಟನ್‌ ತ್ಯಾಜ್ಯ ಉತ್ಪತಿಯಾಗುವುದರಿಂದ ತ್ಯಾಜ್ಯ ನಿರ್ವಹಣೆ ಕಷ್ಟವಾಗುತ್ತಿತು. ಇದನ್ನು ಮನಗಂಡು ತ್ಯಾಜ್ಯ ತಗ್ಗಿಸುವ ಉದೇಶದಿಂದ ಮೈಸೂರು ಮಹಾನಗರ ಪಾಲಿಕೆಯು “ಹಸಿರು ವಿವಾಹ’ ಯೋಜನೆ ಜಾರಿಗೊಳಿಸಿದೆ.

ಹಸಿರು ತಂಡ: “ಹಸಿರು ವಿವಾಹ’ ಯೋಜನೆ ಮೂಲಕ ಸಾಮಾನ್ಯ ಮದುವೆ ಅಥವಾ ಹಸಿರು ವಿವಾಹ ಎಂದು ಪರೀಶಿಲನೆ ಮಾಡಲು ಪಾಲಿಕೆ ಹಸಿರು ತಂಡಗಳನ್ನು ರಚಿಸಿದೆ. ತಂಡವು ಹಸಿರು ವಿಹಾರದ ವಿಧಾನಗಳನ್ನು ವಧು-ವರರರಿಗೆ ಹಾಗೂ ಪೋಷಕರಿಗೆ ತಿಳಿಸುತ್ತಾರೆ.

ಹಸಿರು ವಿಹಾರಕ್ಕೆ ಸಾಕ್ಷಿಯಾದ ಮೊದಲ ಮದುವೆ: ಪಾಲಿಕೆ “ಹಸಿರು ವಿವಾಹ’ ಇತ್ತೀಚಿಗಷ್ಟೆ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತುಯ. ಪಾಲಿಕೆ ಎಂಜಿನಿಯರ್‌ ಮಹೇಶ್‌ ಪುತ್ರ ನಿಶ್ಚಲ್‌ ಹಾಗೂ ಪೂಜಾ ಬಿ. ಶೇಷಾದ್ರಿ ಜೋಡಿ ಪರಿಸರ ಸ್ನೇಹಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರು ಕಲ್ಯಾಣ ಮಂಟಪಕ್ಕೆ ತೆರಳಿ ಅಭಿನಂದನಾ ಪ್ರಮಾಣಪತ್ರ ಪ್ರದಾನ ಮಾಡಿ ಅವರ ದಾಂಪತ್ಯ ಜೀವನಕ್ಕೆ ಶುಭಕೋರಿದರು.

ಪ್ಲಾಸ್ಟಿಕ್‌ ಬದಲು ಸ್ಟೀಲ್‌ ಬಳಕೆ: ಮದುವೆ ಮಂಟಪವನ್ನು ಸಂಪೂರ್ಣವಾಗಿ ಹಸಿರುಮಯ ಮಾಡಲಾಗಿತ್ತು. ಧಾರೆ ಮಂಟಪದಿಂದ ಹಿಡಿದು ಊಟದವರೆಗೂ ಬಳಸುವ ವಸ್ತುಗಳನ್ನು ಪ್ಲಾಸ್ಟಿಕ್‌ ಮುಕ್ತವಾಗಿ ಮಾಡಲಾಗಿತ್ತು. ಪ್ಲಾಸ್ಟಿಕ್‌ ಮತ್ತು ಬಾಳೆ ಎಲೆಯ ಬದಲಾಗಿ ಅಂದಾಜು 2 ಸಾವಿರ ಸ್ಟೀಲ್‌ ತಟ್ಟೆ ಹಾಗೂ ಲೋಟ ಬಳಸಲಾಯಿತು. ಇದರೊಂದಿಗೆ ಮದುವೆ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುವ ತ್ಯಾಜ್ಯ ಕಡಿಮೆಯಾಗಿ ಕೇವಲ 48 ಕೆಜಿಯಷ್ಟು ತ್ಯಾಜ್ಯ ಉತ್ಪತ್ತಿಯಾಯಿತು.

ಏನಿದು ಹಸಿರು ವಿವಾಹ?: ಕೊಳೆಯದಂತಹ ಪದಾರ್ಥಗಳನ್ನು ಕಡಿಮೆ ಬಳಕೆ ಮಾಡುವುದು. ವೇದಿಕೆ ಅಲಂಕಾರದಿಂದ ಅಡುಗೆ ಕೊಠಡಿಯಲ್ಲಿ ಉತ್ಪತಿಯಾಗುವ ಕೊಳೆಯುವ ತ್ಯಾಜ್ಯವನ್ನು ಕಂಪೋಸ್ಟ್‌ ಘಟಕಕ್ಕೆ ವಿಲೇವಾರಿ ಮಾಡಿಸುವುದು. ಉಳಿದ ಊಟವನ್ನು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೀಡುವುದು, ವಿವಾಹದಲ್ಲಿ ಯಾವುದೇ ರೀತಿ ಪ್ಲಾಸ್ಟಿಕ್‌ ಬಳಸದೇ ಸ್ಟೀಲ್‌ ತಟ್ಟೆ, ಲೋಟ ಬಳಸುವುದು. ಇದರಿಂದ 5 ಟನ್‌ ತ್ಯಾಜ್ಯ ಉತ್ಪತ್ತಿಯಾಗುವ ಬದಲು 50 ಕೆಜಿ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇಂತಹ ಮದುವೆಯೇ “ಹಸಿರು ವಿವಾಹ’ ಪಟ್ಟಿಗೆ ಸೇರುತ್ತದೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.