ಜೈಲಿಗೆ ಹೋಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ
Team Udayavani, Dec 2, 2019, 12:04 PM IST
ಹುಣಸೂರು : ನಾನು ಹುಣಸೂರು ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಕಂಡಿದ್ದೇನೆ. ಆ ಎಲ್ಲಾ ಕನಸುಗಳನ್ನು ನನಸು ಮಾಡಲು ಮತ ಭಿಕ್ಷೆ ನೀಡಿ, ಎಂದು ಹುಣಸೂರು ಮತದಾರರಿಗೆ ಕರಪತ್ರದ ನೀಡಿ ಎ.ಹೆಚ್.ವಿಶ್ವನಾಥ್ ಮನವಿ ಮಾಡಿಕೊಂಡರು.
ನಗರದಲ್ಲಿ ಮಾದ್ಯಮಗಳ ಜೊತೆ ಸಂವಾದ ನಡೆಸಿದ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ , ಹುಣಸೂರು ಜಿಲ್ಲೆ ಕಡ್ಡಾಯವಾಗಿ ಮಾಡೇ ಮಾಡುತ್ತೇವೆ.ಇದು ಚುನಾವಣೆಗಾಗಿ ಎತ್ತಿದ ವಿಚಾರವಲ್ಲ. ಕಳೆದ ಒಂದು ವರ್ಷದಿಂದ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ಹುಣಸೂರು ಕೃಷಿ ಆರ್ಥಿಕ ವಲಯ ಚೆನ್ನಾಗಿದೆ.ರೈತರನ್ನು ಆರ್ಥಿಕವಾಗಿ ಮೇಲೆತ್ತಬೇಕು.ಬೆಳಿಗ್ಗೆ ಎಪಿಎಂಸಿ ಸದಸ್ಯರು ಬಂದು ಹುಣಸೂರು ಜಿಲ್ಲಾ ಮಾರುಕಟ್ಟೆ ಹೇಗಿರುತ್ತೆ ಅಂತ ಕೇಳಿದ್ದಾರೆ. ಹೀಗಾಗಿ ದೇವರಾಜ ಅರಸು ಹೆಸರಲ್ಲೇ ಜಿಲ್ಲೆ ಮಾಡಲು ಬದ್ಧವಾಗಿದೆ ಎಂದರು.
ಸಾಹಿತಿಗಳ ಮೇಲೆ ಹರಿಹಾಯ್ದ ಹಳ್ಳಿಹಕ್ಕಿ: ರಾಜ್ಯದಲ್ಲಿ ಸಾಹಿತ್ಯ ಭೌಧಿಕ ದಿವಾಳಿಯಾಗಿದೆ. ಸಾಹಿತಿಗಳು ಭೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ನೀವು ಎಲ್ಲಾದರೂ ರಾಜಕೀಯವಾಗಿ ಚರ್ಚೆ ಮಾಡಿದ್ದೀರಾ? ಸಾಹಿತಿಗಳು ಚಿಂತಕರು ಮನೆಯಲ್ಲಿ ಕೂತು ಹೇಳಿಕೆ ಕೊಡುತ್ತೀರಾ.ಜನರ ಮನಸ್ಸಿನಲ್ಲಿ ಏನಿದೆ ಅಂತ ಬಂದು ನೋಡಿದ್ದೀರ.
ನೀವು ಯಾವುದೋ ಪಕ್ಷ, ಯಾವುದೋ ರಾಜಕಾರಣಿ ಪರ ಮಾತನಾಡುತ್ತೀರಿ. ನಾನು ನಿಮ್ಮಂತೆ ಕಾಗಕ್ಕ ಗೂಬಕ್ಕನ ಕಥೆ ಬರೆದಿಲ್ಲ. ನಾನು ವಸ್ತುಸ್ಥಿತಿಯ ಸಾಹಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಹಣಕ್ಕಾಗಿ ಅಧಿಕಾರಕ್ಕಾಗಿ ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿಲ್ಲ. ನಾನು ಸ್ವಾಭಿಮಾನಕ್ಕೆ ಪೆಟ್ಟಾಗಿ ರಾಜೀನಾಮೆ ಕೊಟ್ಟಿದ್ದೇನೆ. ಆಗ ಮತ ಕೊಟ್ಟ ಜನರಿಗೆ ಹೇಳಲು ಸಾಧ್ಯವಾಗಲಿಲ್ಲ. ನನ್ನ ಮನಸ್ಸಿಗೆ ಘಾಸಿಯಾಗಿ ನಾನು ರಾಜೀನಾಮೆ ಕೊಡಬೇಕಾಗಿ ಬಂತು. ಹುಣಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹನುಮಜಯಂತಿ ವೇಳೆ ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ. 80 ವರ್ಷ ವಯಸ್ಸಾದವರಿಗೂ ರೌಡಿ ಶೀಟರ್ ಓಪನ್ ಮಾಡಲಾಗಿದೆ. ಹುಣಸೂರಿನಲ್ಲಿ ಹಬ್ಬ ಹರಿದಿನ ಮಾಡಲು ಪೊಲೀಸ್ ಅನುಮತಿ ಬೇಕಿದೆ ಎಂದರು.
ನಾನು ಅಭಿವೃದ್ಧಿಗೆ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಮತ ಕೇಳುತ್ತಿರುವುದು ಜನರ ಮೇಲೆ ಕೇಸ್ ಹಾಕಸಲಾ? ನಿಮಗೆ ಮತ ಹಾಕಿ ಜನ ಜೈಲಿಗೆ ಹೋಗಬೇಕಾ. ನಾನು ಅಧಿಕಾರಕ್ಕೆ ಬಂದ ತಕ್ಷಣ ಜನರ ಮೇಲಿನ ಕೇಸ್ ಗಳನ್ನು ವಾಪಸ್ ತೆಗೆಸಲಾಗುತ್ತೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದಾರೆ. ಪ್ರೀತಿ ವಿಶ್ವಾಸಕ್ಕೆ ಬಿಜೆಪಿಗೆ ಮತ ಕೊಡಿ, ಜೈಲಿಗೆ ಹೋಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ. ಲಕ್ಷ್ಮಣ ತೀರ್ಥ ನದಿ ಶುದ್ದೀಕರಕ್ಕೆ ಕ್ರಮ ವಹಿಸಲಾಗುತ್ತಿದೆ. ಇದಕ್ಕೆ 125 ಕೋಟಿ ವೆಚ್ಚದ ಪ್ರಾಜೆಕ್ಟ್ ರೆಡಿಯಾಗಿದೆ. ಹುಣಸೂರು ಜಿಲ್ಲೆಯಾಗಲು ಯೋಗ್ಯವಾದ ಸ್ಥಳವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.