ರಮೇಶ್‌ಕುಮಾರ್‌ರನ್ನು ಒದ್ದು ಒಳಗೆ ಹಾಕಿ: ಎಚ್.ವಿಶ್ವನಾಥ್
Team Udayavani, Mar 10, 2020, 7:40 PM IST
ಮೈಸೂರು: “ಮುಸ್ಲಿಮರೆಲ್ಲ ಸಂಘಟಿತರಾಗಿ ಎದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒದ್ದು ದೇಶದಿಂದ ಹೊರಹಾಕಿ’ ಎಂದು ಹೇಳಿಕೆ ನೀಡಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿಕೊಂಡು, ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನೇ ಯೇಸು, ನಾನೇ ಬಸವೇಶ್ವರ, ನಾನೇ ರಾಮಾನುಜಾಚಾರ್ಯ, ಶಂಕರಾಚಾರ್ಯ’ ಎಂದು ಬೊಗಳೆ ಬಿಡುವ ರಮೇಶ್‌ಕುಮಾರ್, ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸರ್ಕಾರ ಸುಮ್ಮನೆ ಕೂರದೆ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಹಾಕಬೇಕು. ಸಂವಿಧಾನಬಾಹಿರವಾಗಿ ಮಾತನಾಡುವ ಎಲ್ಲರ ಮೇಲೂ ಪಕ್ಷಾತೀತವಾಗಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಸೀರೆ, ಪಂಚೆ ಕೊಟ್ಟು ಋಣ ತೀರಿಸಬೇಡಿ:
ಎಚ್.ಡಿ.ಕುಮಾರಸ್ವಾಮಿ ಮಗನ ಮದುವೆ ಹೆಸರಲ್ಲಿ ರಾಮನಗರ, ಚನ್ನಪಟ್ಟಣದ ಜನತೆಗೆ ಸೀರೆ, ಪಂಚೆ ಕೊಟ್ಟು ಊಟ ಹಾಕಿಸಿ, ಋಣ ತೀರಿಸುವುದಲ್ಲ. ಜನಪರ ಕಾರ್ಯಕ್ರಮ ಕೊಟ್ಟು ಆ ಜನರ ಋಣ ತೀರಿಸಬೇಕೆಂದು ಸಲಹೆ ನೀಡಿದರು. ಸಚಿವ ಶ್ರೀರಾಮುಲು ಕೂಡ ಬಳ್ಳಾರಿಯಲ್ಲಿ 500, ಸಾವಿರ ಜನರ ಸಾಮೂಹಿಕ ವಿವಾಹ ಮಾಡುವವರು. ಆದರೆ, ತಮ್ಮ ಮಗಳನ್ನು ಬೆಂಗಳೂರಿಗೆ ಕರೆ ತಂದು ಅದ್ಧೂರಿಯಾಗಿ ಮದುವೆ ಮಾಡಿಕೊಡುತ್ತಾರೆ. ಇವರಿಗೆ ಏನು ಹೇಳುವುದು ಎಂದು ಮೂದಲಿಸಿದರು.
ನಾನು, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಆಂಜನೇಯ ಅವರು ನಮ್ಮ ಮಕ್ಕಳಿಗೆ ಸರಳ ವಿವಾಹ ಏರ್ಪಡಿಸಿ ಆದರ್ಶ ಮೆರೆದಿದ್ದೇವೆ ಎಂದು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.