ಮೋದಿ ಸೌಜನ್ಯ ನೋಡಿ ಕಲಿಯಿರಿ:  ಎಚ್‌. ವಿಶ್ವನಾಥ್‌

Team Udayavani, Dec 4, 2021, 5:29 PM IST

vishwanath

ಮೈಸೂರು: ರಾಜಕಾರಣದಲ್ಲಿ ಇರುವವರು ಎಲ್ಲರನ್ನು ಏಕವಚನದಲ್ಲಿ ಮಾತನಾಡುವುದನ್ನು ಬಿಟ್ಟು, ಪ್ರಧಾನಿ ಮೋದಿ ಅವರಿಂದ ಸೌಜನ್ಯ ಕಲಿಯಬೇಕಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರೇಳದೆ ಛೇಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪಿಎಂ ಎಚ್‌.ಡಿ.ದೇವೇಗೌಡರು ಭೇಟಿ ಮಾಡಿದ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಅವರಿಬ್ಬರ ಭೇಟಿ ಸೌಜನ್ಯದ ಭೇಟಿಯಾಗಿದೆ. ಸಂವಿಧಾನದ ದಿನದಂದು ಮೋದಿ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡಿ, ಅದು ಗೆದ್ದಲಿನ ರೀತಿ ಕಾಡುತ್ತಿದೆ ಅಂದರು. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಆದರೆ, ಇದೊಂದು ಸೌಜನ್ಯದ ಭೇಟಿ ಎಂಬುದಷ್ಟೇ ಮುಖ್ಯ ಎಂದರು.

ವೈಯಕ್ತಿಕ ಆಪಾದನೆ ಸಲ್ಲದು: ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವ್ಯಕ್ತಿಗಳ ಬಗ್ಗೆ ವೈಯಕ್ತಿಕ ಆಪಾದನೆ ಸಲ್ಲದು. ಜಾ.ದಳ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ ಕಿಡ್ನಿ ಕಳ್ಳ ಹಾಗೂ ಬೆಂಗಳೂರಿನ ಅಭ್ಯರ್ಥಿಯನ್ನು ಅತ್ಯಾಚಾರಿ ಆರೋಪಿ ಎಂದು ಒಬ್ಬ ಜವಾಬ್ದಾರಿಯುತ ಸಚಿವರಾಗಿ ಎಸ್‌.ಟಿ.ಸೋಮಶೇಖರ್‌ ಆಪಾದನೆ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ಅಧೀರರನ್ನಾಗಿ ಮಾಡಬಾರದು ಎಂದು ಹೇಳಿದರು.

ಬೊಮ್ಮಾಯಿ ಬದಲಿಸುವ ಪ್ರಶ್ನೆಯೇ ಇಲ್ಲ: ಶಾಸಕ ರಮೇಶ್‌ ಜಾರಕಿಹೊಳಿ ಅಥವಾ ಬಸನಗೌಡ ಪಾಟೀಲ್‌ ಯತ್ನಾಳ್‌ ಯಾವ ಮಾತುಗಳನ್ನಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಿಸುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ವಿಶ್ವನಾಥ್‌ ತಿಳಿಸಿದರು.

“ಬಿಡಿಎ ಅಧ್ಯಕ್ಷ, ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹಾಗೂ ಗೋಪಾಲಕೃಷ್ಣ ರಿಯಲ್‌ ಎಸ್ಟೇಟ್‌ ಗಿರಾಕಿಗಳು. ಅವರಿಬ್ಬರ ನಡುವೆ ಏನೇನು ವ್ಯವಹಾರ ನಡೆದಿದೆಯೋ ಗೊತ್ತಿಲ್ಲ. ದ್ವೇಷದ ರಾಜಕಾರಣಕ್ಕೂ ಅದಕ್ಕೂ ಸಂಬಂಧವಿಲ್ಲ.” ಎಚ್‌. ವಿಶ್ವನಾಥ್‌, ಎಂಎಲ್‌ಸಿ.

ಟಾಪ್ ನ್ಯೂಸ್

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ಮೃತ್ಯು

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ

3-gangavathi-3

Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ

Pit Bull: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್‌ ಬುಲ್‌ ಶ್ವಾನ ಕಿತ್ತ ಕಿವಿ ಜೋಡಣೆ

Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್‌ ಬುಲ್‌ ಶ್ವಾನದ ಕಿತ್ತ ಕಿವಿ ಜೋಡಣೆ

Gadaga: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಅಕ್ರಮ ಸಾಗಾಟ…

Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು

2-chikkamagaluru

Chikkamagaluru: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

revenge

Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

1 ವರ್ಷದ ಆಶೀರ್ವಾದ ಕೇಳಿದ ಸಿಎಂ ಸಿದ್ದರಾಮಯ್ಯ: ಕುತೂಹಲ

1 ವರ್ಷದ ಆಶೀರ್ವಾದ ಕೇಳಿದ ಸಿಎಂ ಸಿದ್ದರಾಮಯ್ಯ: ಕುತೂಹಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ಮೃತ್ಯು

Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ

3-gangavathi-3

Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ

Pit Bull: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್‌ ಬುಲ್‌ ಶ್ವಾನ ಕಿತ್ತ ಕಿವಿ ಜೋಡಣೆ

Surgery: 11 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಪಿಟ್‌ ಬುಲ್‌ ಶ್ವಾನದ ಕಿತ್ತ ಕಿವಿ ಜೋಡಣೆ

Gadaga: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಅಕ್ರಮ ಸಾಗಾಟ…

Gadaga: ಹುರಿಗಡಲೆ ಚೀಲದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ… ಕಣ್ಮುಚ್ಚಿ ಕುಳಿತ ಅಧಿಕಾರಿಗಳು

2-chikkamagaluru

Chikkamagaluru: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.