ಹನುಮ ಜಯಂತಿ ಹಿಂದೆ ಸಾಂಸ್ಕೃತಿಕ ಸಾಮ್ರಾಜ್ಯ ಶಾಹಿಗಳ ಕುತಂತ್ರ
Team Udayavani, Dec 12, 2017, 12:53 PM IST
ಹುಣಸೂರು: ವೈಚಾರಿಕ ನೆಲೆಗಟ್ಟಿನಲ್ಲಿ ಪೆರಿಯಾರ್ ಅವರು ಹೇಳಿರುವಂತೆ ರಾಮ ಪ್ರಬುದ್ಧತೆ ಸಂಕೇತವಾಗಿದ್ದರೆ, ಹನುಮ ಗುಲಾಮಗಿರಿ ಸಂಕೇತವೆಂದಿದ್ದರು. ಇಲ್ಲಿ ನಡೆಯುತ್ತಿರುವ ಹನುಮ ಜಯಂತಿ ಹಿಂದೆ ಸಾಂಸ್ಕೃತಿಕ ಸಾಮ್ರಾಜ್ಯ ಶಾಹಿಗಳ ಕುತಂತ್ರವಿದೆ ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶಚಂದ್ರಗುರು ಆರೋಪಿಸಿದರು.
ಮೈಸೂರಿನಿಂದ ಹುಣಸೂರಿಗೆ ಆಗಮಿಸಿದ್ದ ಪ್ರಗತಿಪರರು ಹಾಗೂ ಹುಣಸೂರಿನ ವಿವಿಧ ಸಂಘ ಸಂಸ್ಥೆಗಳವರು ನಗರದ ದೇವರಾಜೇಅರಸ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಬಸ್ ನಿಲ್ದಾಣದ ಎದುರಿನ ಕಲ್ಪತರು ವೃತ್ತದಿಂದ ಮೆರವಣಿಗೆಯಲ್ಲಿ ಹೊರಟು ತಾಲೂಕು ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಹನುಮನಂತಹ ಗುಲಾಮರನ್ನು ಸೃಷ್ಟಿ ಮಾಡುವುದೇ ಅವರ ಅಜೆಂಡಾ ಆಗಿದ್ದು ಇದಕ್ಕೆ ನಮ್ಮ ವಿರೋಧವಿದೆ. ಸಾಮ್ರಾಜ್ಯಶಾಹಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕು. ದೇಶ ಉಳಿಯಬೇಕೆಂದರೆ ಬಹುತ್ವ ಸಂಸ್ಕೃತಿ-ಸಂಪತ್ತು ಉಳಿಯಬೇಕು ಎಂದು ಹೇಳಿದರು.
ಎನ್‌ಡಿಎ ತೊಲಗಿಸಿ: ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ನಾವು ಕ್ವಿಟ್ ಎನ್‌ಡಿಎ ವಿರುದ್ಧ ಚಳವಳಿ ಮಾಡಬೇಕಿದೆ. ನಮ್ಮ ಹೋರಾಟಕ್ಕೆ ಅಂಬೇಡ್ಕರ್, ಪಿರಿಯಾರ್ ಪ್ರೇರಣೆಯಾಗಬೇಕು ಎಂದರು.
ಚಿಂತಕ ಕೆ.ಎಸ್.ಭಗವಾನ್, ನಾಡಿನ ಬಾಬಾಬುಡನ್‌ಗಿರಿ, ಕರಾವಳಿಯಲ್ಲಿ ಕೋಮುವಾದ ಹುಟ್ಟುಹಾಕಿದ್ದಾರೆ. ನೈಜ ಇತಿಹಾಸವನ್ನು ಶಾಲೆಗಳಲ್ಲಿ ಭೋಧಿಸುತ್ತಿಲ್ಲ, ಇದನ್ನು ಎಲ್ಲರೂ ವಿರೋಧಿಸಬೇಕು. ದೇಶವನ್ನುವೈಚಾರಿಕತೆ, ವೈಜ್ಞಾನಿಕತೆಯಲ್ಲಿ ಕಾಣಬೇಕು, ಹನುಮ ಜಯಂತಿ ಆಚರಿಸುವವರು ರಕ್ಷಕರಲ್ಲ, ಭಕ್ಷಕರೆಂದು ಆಪಾದಿಸಿ, ಇದರಿಂದ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕೆಂದರು.
ಸಂಘಟಕ ಕೆ.ಶಿವರಾಂ, ಕರಾವಳಿ, ಚಿಕ್ಕಮಗಳೂರಿನಲ್ಲಿ ಕಲುಷಿತ ವಾತಾವರಣ ನಿರ್ಮಿಸಿ ಇದೀಗ ಮೈಸೂರು ಕಡೆಯಲ್ಲೂ ಕೋಮುವಾದ ಬಿತ್ತುವ ಮೂಲಕ ಅರಾಜಕತೆ ಸೃಷ್ಟಿಯಾಗುತ್ತಿದೆ. ಇನ್ನು ಉಡುಪಿ ಧರ್ಮ ಸಂಸತ್ ಹಿಡನ್ ಅಜೆಂಡಾ ಮೂಲಕ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ದೂರಿದರು.
ಡಾ.ರತಿರಾವ್ ಮಾತನಾಡಿ, ಮುಖ್ಯಮಂತ್ರಿಗಳನ್ನು ಪಾಪದ ಪಿಂಡ ಎನ್ನುವ ಮೂಲಕ ತಾಯಿಯನ್ನು ಅವಹೇಳನ ಮಾಡಿದ್ದಾರೆ. ಇವರದೆಂತಹ ಸಂಸ್ಕೃತಿ ಎಂದು ಪ್ರಶ್ನಿಸಿದರು. ದಸಂಸ ಮುಖಂಡ ಹರಿಹರಾನಂದಸ್ವಾಮಿ, ಹನುಮ ಜಯಂತಿ ಹೆಸರಿನಲ್ಲಿ ಯುವಕರು, ಬಾಲಕರಿಗೆ ಧರ್ಮದ ಅಮಲು ಹತ್ತಿಸಿ, ದಿಕ್ಕುತಪ್ಪಿಸಿ ವೋಟಿನ ರಾಜಕಾರಣ ಮಾಡುತ್ತಿದ್ದಾರೆಂದು ದೂರಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಿಪಿಎಂ ಮುಖಂಡರಾದ ಜಗದೀಶ್‌ಸೂರ್ಯ, ಬಸವರಾಜು, ಕಲ್ಕುಣಿಕೆ ಬಸವರಾಜು ಮತ್ತಿತರರು ಮಾತನಾಡಿದರು.
ಸೌಹಾರ್ದ ನಡಿಗೆ: ಹುಣಸೂರು ನಗರದಲ್ಲಿ ಹನುಮಜಯಂತಿ ಸಂದರ್ಭದಲ್ಲಾದ ಘಟನೆಗಳ ಹಿನ್ನೆಲೆಯಲ್ಲಿ ಶಾಂತಿ-ಸೌಹಾರ್ದತೆ ಸಹಬಾಳ್ವೆಗಾಗಿ ಪ್ರಗತಿಪರರು ಸೌಹಾರ್ದ ನಡಿಗೆ ನಡೆಸಿದರು. ಹುಣಸೂರಲ್ಲಿ ಶಾಂತಿ ಕದಡಲು ಬಿಡುವುದಿಲ್ಲ. ಎಲ್ಲರ ಮೈಯಲ್ಲೂ ಹರಿಯುತ್ತಿರುವುದು ಒಂದೇ ರಕ್ತ.
ಧರ್ಮದ ಹೆಸರಿನಲ್ಲಿ ನಡೆಯುವ ಕೋಮುವಾದ ನಿಲ್ಲಲಿ. ಹೀಗೆ ಅನೇಕ ಘೋಷಣೆ ಕೂಗುತ್ತಾ ಭಿತ್ತಿ ಪತ್ರ ಹಿಡಿದು ಕರಪತ್ರ ಹಂಚಿ ಗಮನ ಸೆಳೆದರು. ನಂತರ ತಾಲೂಕು ಕಚೇರಿಗೆ ಆಗಮಿಸಿ ಉಪವಿಭಾಗಾಧಿಕಾರಿ ಕೆ.ನಿತೀನ್‌ರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಸಭೆಗೆ ನಿರಾಕರಣೆ: ಪ್ರಗತಿ ಪರ ಸಂಘಟನೆಗಳು ನಗರಸಭಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸುವ ಉದ್ದೇಶ ಹೊಂದಿದ್ದರೂ ಪೊಲೀಸರು ಮುನ್ನೆಚ್ಚರಿಕೆಯಾಗಿ ಅವಕಾಶ ನಿರಾಕರಿಸಿ, ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ಕಲ್ಪಿಸಿದರು.
ವಿವಿಧ ಸಂಘಟನೆಗಳ ಪುರುಷೋತ್ತಮ್, ಡಾ.ಲಕ್ಷಿನಾರಾಯಣ್, ಸ್ಟ್ಯಾನ್ಲಿ, ಸುಧಾಕರ್, ಸೋಮಯ್ಯ ಮಲೆಯೂರು, ಜೆ.ಮಹದೇವ್, ಮಹದೇವಮ್ಮ, ಹೊಸೂರುಕುಮಾರ್, ನೇತ್ರಾವತಿ, ಮಹೇಶ, ಪುಟ್ಟಸ್ವಾಮಿ, ಚಂದ್ರಶೇಖರ್, ದ್ಯಾವಪ್ಪನಾಯ್ಕ, ಎಸ್.ಪ್ರಕಾಶ್, ಚುಂಚನಹಳ್ಳಿ ಮಲ್ಲೇಶ್, ಜಾಕೀರ್‌ಹುಸೇನ್, ಕಸಾಪ ಜಿಲ್ಲಾ ಮಾಜಿ ಕಾರ್ಯದರ್ಶಿ ಚಂದ್ರಶೇಖರ್, ಬಿಎಸ್‌ಪಿ ಗೋವಿಂದರಾಜು, ಅಶೋಕ್ ಮತ್ತಿತರರಿದ್ದರು.
ಅವಿವೇಕಿ ಸಂಸದ: ಸಂಸದ ಪ್ರತಾಪಸಿಂಹ ಸ್ಥಾಪಿತ ಹಿತಾಸಕ್ತಿಯ ಅವಿವೇಕಿ ಸಂಸದರಲ್ಲೊಬ್ಬ ಈತ ನಮ್ಮ ಪ್ರತಿನಿಧಿಯಲ್ಲ. ಕೆಲವೇ ಜನರ ಅಭಿವೃದ್ಧಿಗೆ ಸಾಂಸ್ಕೃತಿಕ ಸಾಮ್ರಾಜ್ಯ ಶಾಹಿಯ ಪ್ರತಿನಿಧಿಯಾಗಿದ್ದಾನೆ. ನಮಗೆ ಕೋಮು ರಾಜಕೀಯ ಬೇಡ, ಬೇಕಿರುವುದು ಹಿಂದುತ್ವವಲ್ಲ ಬಂಧುತ್ವಬೇಕು.
ಈತನ ವಿರುದ್ಧ ಜಾಗೃತಿ ಮಾಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇಂತಹವರು ಮುಂದೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರೊ.ಮಹೇಶಚಂದ್ರಗುರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.