HD Revanna ನನ್ನನ್ನು ಅಪಹರಿಸಿಲ್ಲ, ಸಂಬಂಧಿಕರ ಮನೆಯಲ್ಲಿದ್ದೇನೆ
ರೇವಣ್ಣ ಅಪಹರಣ ಪ್ರಕರಣದ್ದು ಎನ್ನಲಾದ ಸಂತ್ರಸ್ತೆಯ ವೀಡಿಯೋ ಹೇಳಿಕೆ ಬಹಿರಂಗ
Team Udayavani, May 12, 2024, 11:55 PM IST
ಮೈಸೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣದ ಸಂತ್ರಸ್ತೆ ಎನ್ನಲಾಗಿರುವ ಮಹಿಳೆ, “ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಯಾರಿಂದಲೂ ನನಗೆ ತೊಂದರೆ ಆಗಿಲ್ಲ’ ಎಂದು ವೀಡಿಯೋ ಮೂಲಕ ಹೇಳಿಕೆ ನೀಡಿದ್ದು, ಇದರಿಂದಾಗಿ ಪ್ರಕರಣ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ಸಂಸ್ರಸ್ತೆ ಹೇಳಿರುವುದಿಷ್ಟು
ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ. ನಾನು ಎಲ್ಲಿಯೂ ಹೋಗಿಲ್ಲ. ನನ್ನ ಸಂಬಂಧಿಕರ ಮನೆಯಲ್ಲಿದ್ದೇನೆ. ರೇವಣ್ಣ, ಪ್ರಜ್ವಲ್, ಭವಾನಿ ಅಕ್ಕ ಅಥವಾ ಸತೀಶ್ ಬಾಬಣ್ಣ ಆಗಲಿ ಯಾರಿಂದಲೂ ತೊಂದರೆ ಆಗಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ನಾನು ಆರಾಮವಾಗಿದ್ದೇನೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡುವಾಗ ವಿಚಾರ ಗೊತ್ತಾಯಿತು. ಮೊಬೈಲ್‌ನಲ್ಲಿ ಬಂದಿ ರುವ ವೀಡಿಯೋಗೂ ನನಗೂ ಸಂಬಂಧ ಇಲ್ಲ. ಯಾರೂ ಗಾಬರಿ ಆಗುವುದು ಬೇಡ. ನಾನು ಸುರಕ್ಷಿತವಾಗಿದ್ದೇನೆ. ವಾಪಸ್ ಬರುತ್ತೇನೆ. ಎಲ್ಲಿ ಯಾರಿಗೆ ಮಾಹಿತಿ ಕೊಡಬೇಕೋ ಕೊಡುತ್ತೇನೆ. ಯಾರೂ ಮನೆ ಹತ್ತಿರ ಹೋಗಬೇಡಿ, ಪೊಲೀಸ್‌ನವರು ಟಾರ್ಚರ್ ಕೊಡಬೇಡಿ. ನಾವು ಕೂಲಿ ಮಾಡಿಕೊಂಡು ಇರುವವರು. ಹೊಟ್ಟೆ ಮೇಲೆ ಹೊಡಿಯಬೇಡಿ. ಏನಾದರೂ ತೊಂದರೆಯಾದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ. ನನಗಾಗಲಿ, ಕುಟುಂಬದವರಿ ಗಾಗಲಿ ತೊಂದರೆಯಾದರೆ ನೀವೇ ಜವಾಬ್ದಾರರು ಎಂದಿದ್ದಾರೆ.
ರಕ್ಷಣೆಗೂ ಪೂರ್ವದಲ್ಲೇ ವೀಡಿಯೋ ಚಿತ್ರೀಕರಣ?
ವೀಡಿಯೋವನ್ನು ಯಾವಾಗ, ಎಲ್ಲಿ ಚಿತ್ರೀಕರಣ ಮಾಡಲಾಯಿತು ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲದೇ ವೀಡಿಯೋದಲ್ಲಿ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ ಎನ್ನಲಾದ ಮಹಿಳೆಯು ಎಸ್‌ಐಟಿಯವರು ರಕ್ಷಣೆ ಮಾಡಿ, ಕರೆದುಕೊಂಡು ಹೋದ ಮಹಿಳೆಯೇ ಎನ್ನುವುದೂ ಗೊತ್ತಾಗಿಲ್ಲ. ಮಹಿಳೆಯ ಮಾತುಗಳನ್ನು ಕೇಳಿಸಿಕೊಂಡರೆ, ಅದು ಎಸ್‌ಐಟಿಯವರು ರಕ್ಷಣೆ ಮಾಡುವ ಮೊದಲು ಮಾಡಿಕೊಂಡಿರುವ ವೀಡಿಯೋ ಎಂಬ ಶಂಕೆ ಮೂಡುತ್ತದೆ. ಪೊಲೀಸರು ಮನೆ ಬಳಿ ಹೋಗಿ ಟಾರ್ಚರ್ ಕೊಡಬೇಡಿ. ತೊಂದರೆ ಆದರೆ ನಾನೇ ಬಂದು ಹೇಳಿಕೆ ಕೊಡುತ್ತೇನೆ ಎಂಬ ಮಹಿಳೆ ಹೇಳಿಕೆ ಗಮನಿಸಿದರೆ ರಕ್ಷಣೆಗೂ ಪೂರ್ವದಲ್ಲೇ ಈ ವೀಡಿಯೋ ಚಿತ್ರೀಕರಣವಾಗಿರಬಹುದು. ಆದರೆ ಈಗ ಅದನ್ನು ಬಹಿರಂಗಕ್ಕೆ ತಂದಿರುವುದು ಮಾತ್ರ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.