Nanjangud ಶ್ರೀಕಂಠೇಶ್ವರನ ದರ್ಶನ ಪಡೆದ ಎಚ್‌ಡಿಕೆ; ನನಗೆ ದೇವರ ಆಶೀರ್ವಾದ ಸಾಕು
ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ
Team Udayavani, Jul 28, 2024, 10:26 PM IST
ನಂಜನಗೂಡು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ದೇವಾಲಯಗಳ ನಗರ ದಕ್ಷಿಣ ಕಾಶಿ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಮುಂಜಾನೆ 9 ಗಂಟೆಗೆ ನಂಜನಗೂಡಿಗೆ ಅಗಮಿಸಿದ ಕೇಂದ್ರ ಸಚಿವರಿಗೆ ದೇಗುಲದಿಂದ ಸ್ವಾಗತ ನೀಡಲಾಯಿತು. ಮೊದಲಿಗೆ ವಿಘ್ನೇಶ್ವರನ ದರ್ಶನ ಪಡೆದು ನಂತರದಲ್ಲಿ ಸ್ವಾಮಿ ಸನ್ನಿಧಾನಕ್ಕೆ ಬಂದ ಕುಮಾರಸ್ವಾಮಿ, 40 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ ಬಿಲ್ವಪತ್ರಾರ್ಚನೆ ಮಾಡಲಾಯಿತು.
ಅಮ್ಮನವರ ಸನ್ನಿಧಾನಕ್ಕೆ ತೆರಳಿ, ಕುಂಕುಮಾರ್ಚನೆ ನಡೆಸಲಾಯಿತು.ನಂತರದಲ್ಲಿ ಎಷ್ಟೇ ದೇವಾಲಯಗಳು ಸುತ್ತಿದರೂ ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಡಿಸಿಎಂ ಅವರು ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ನಾನು ಗೆದ್ದು ಕೇಂದ್ರ ಸಚಿವನಾಗಿಲ್ಲವೇ? ಹಾಗೆಯೇ ಅವರು ಹೇಳಿದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ನನಗೆ ಒಳ್ಳೆಯದು ನಡೆಯುತ್ತದೆ ಅವರು ಆ ಪದ ಬಳಕೆ ಮಾಡಿದ್ದರಿಂದಲೇ ದೇವರು ನಿನಗೆ ಬೇಗನೆ ಆಶೀರ್ವಾದ ಮಾಡುತ್ತೇನೆ ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿ ಶ್ರೀಕಂಠೇಶ್ವರನಲ್ಲಿ ಬಂದು ದರ್ಶನ ಮಾಡಿದ್ದೆ. ಕೇಂದ್ರ ಸಚಿವನಾದೆ, ಈ ಸರಿ ದರ್ಶನ ಮಾಡಿದ್ದೇನೆ. ಮನಸ್ಸಿನಲ್ಲಿ ಬೇಡಿಕೊಂಡಿದ್ದೇನೆ ಅದು ನಡೆಯುತ್ತದೆ. ಅದರಲ್ಲಿ ಯಾವುದೇ ಸಂಶಯ ಬೇಡ, ನನ್ನಗೆ ದೇವರ ಆಶೀರ್ವಾದ ಸಾಕು ಡಿ.ಕೆ.ಶಿವಕುಮಾರ್ ಆಶೀರ್ವಾದ ಬೇಡ ಎಂದು ಹೇಳಿದರು.
ಪ್ರವಾಸಿ ಮಂದಿರಕ್ಕೆ ಬೀಗ ಹಾಕಿದ್ದಕ್ಕೆ ಅಸಮಾಧಾನ
ದೇವರ ದರ್ಶನ ಪಡೆದು ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಮಾರ್ಗಮಧ್ಯ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಸ್ಥಳೀಯರೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ವಿಶ್ರಾಂತಿ ಗೃಹಕ್ಕೆ ತೆರಳಿದರು. ಆದರೆ, ಬೇಗ ತೆರೆದಿರಲಿಲ್ಲ. 15 ನಿಮಿಷ ಕಾರಿನಲ್ಲೇ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಆದರೂ, ಯಾವುದೇ ಅಧಿಕಾರಿಯಾಗಲಿ ಅಥವಾ ಅತಿಥಿ ಗೃಹದ ಸಿಬ್ಬಂದಿಯಾಗಲಿ ಬಾರದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳಿದ ಕೇಂದ್ರ ಸಚಿವರು, ತಮ್ಮ ಅಸಮಾಧಾನ ಹೊರಹಾಕಿದರು.
ನಾನು ನಂಜನಗೂಡು ಪ್ರವಾಸ ಕೈಗೊಂಡಿರುವುದು ಎಲ್ಲಾ ಅಧಿಕಾರಿಗಳಿಗೂ ಮಾಹಿತಿ ಕೇಂದ್ರ ಸಚಿವಾಲಯದಿಂದ ರವಾನೆಯಾಗಿದೆ. ಕೇಂದ್ರ ಸಚಿವರಿಗೆ ಈ ರೀತಿ ಅವಮಾನವಾದರೆ ಸಾಮಾನ್ಯ ಜನರ ಗತಿ ಏನು ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತದೆ. ನನ್ನನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ ನಾನು ಅವರ ಮಧ್ಯೆ ಬೆಳೆದಿದ್ದೇನೆ ಮತ್ತು ಅವರ ಮಧ್ಯೆ ಇರುತ್ತೇನೆ ಎಂದು ಕಿಡಿಕಾರಿದರು.
ಸಚಿವರು ಬರುವ ಬಗ್ಗೆ ಮಾಹಿತಿ ನೀಡಿರಲಿಲ್ಲ:
ಸಚಿವರು ಬರುವ ಯಾವುದೇ ಮಾಹಿತಿ ನಮಗೆ ಇರಲಿಲ್ಲ. ನಮ್ಮ ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೆ, ಮಳೆ ಬಂದು ಅತಿವೃಷ್ಟಿ ಆದ ಹಿನ್ನೆಲೆಯಲ್ಲಿ ಅತಿಥಿ ಗೃಹದ ತಳ ಮಹಡಿ ಎಲ್ಲಾ ಸಾಮಾನುಗಳನ್ನು ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ರಾಂತಿ ಗೃಹಕ್ಕೆ ನೀರು ನುಗ್ಗುತ್ತದೆ ಎಂದು ಮುಂಜಾಗ್ರತೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 4 ವರ್ಷ ಹಿಂದೆ ಅತಿವೃಷ್ಟಿಯಿಂದ ಸಂಪೂರ್ಣ ಪ್ರವಾಸಿ ಮಂದಿರ ನೀರಿನಲ್ಲಿ ಮುಳುಗಿತ್ತು. ಬೆಲೆಬಾಳುವ ಎಲ್ಲಾ ವಸ್ತುಗಳು ನೀರಿನಿಂದ ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಪಿಡಬ್ಲೂಡಿ ಇಲಾಖೆ ಎಇಇ ಸತ್ಯನಾರಾಯಣ ಸ್ಪಷ್ಟನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.