ಉದ್ಯಾನವನ ನಿರ್ಮಿಸಿ ಅಂದ್ರೆ ಕೈತೋಟ ನಿರ್ಮಿಸಿದ್ರು
Team Udayavani, Jan 20, 2020, 3:00 AM IST
ನಂಜನಗೂಡು: ಸಂಸದರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶ್ರೀನಿವಾಸ್ ಪ್ರಸಾದ್ ಅಧಿಕಾರಿಗಳ ಕಾರ್ಯವೈಖರಿ ಕುರಿತು ಕೋಪದಿಂದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ತಾವು ಕಂದಾಯ ಸಚಿವರಾಗಿದ್ದಾಗ ಆರಂಭಿಸಿದ ಕಾಮಗಾರಿಗಳ ವಿವರಗಳನ್ನು ಕೈ ಗೆತ್ತಿಕೊಂಡ ಪ್ರಸಾದ್ ಅವುಗಳ ಸ್ಥಿತಿಯ ಕುರಿತು ಪೂರ್ಣವಿವರ ಕಲೆಹಾಕಲು ಆರಂಭಿಸಿದರು.
ಅಧಿಕಾರಿಗಳ ತರಾಟೆ: ದಕ್ಷಿಣ ಕಾಶಿಯಲ್ಲೊಂದು ಸಸ್ಯ ಕಾಶಿ ನಿರ್ಮಿಸಬೇಕು ಎನ್ನುವ ಸದುದ್ದೇಶದಿಂದ ತಾವು ಕಪಿಲಾ ನದಿಯ ದಡದಲ್ಲಿರುವ ಕಂದಾಯ ಹಾಗೂ ತೋಟಗಾರಿಕಾ ಇಲಾಖೆಯಲ್ಲಿನ 26.5 ಎಕರೆ ಪ್ರದೇಶ ಗುರುತಿಸಿ 10 ಕೋಟಿ ರೂ.. ವೆಚ್ಚದ ನೀಲ ನಕ್ಷೆ ಸಿದ್ಧಪಡಿಸಿ ಆಗಲೇ 3 ಕೋಟಿ ರೂ.. ಹಣ ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಗಳೇ ಬಂದು ಭೂಮಿ ಪೂಜೆ ನೆರವೇರಿಸಿದ್ದರು, ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅದು ಸಸ್ಯ ಕಾಶಿಯಾಗದೇ ಮನೆ ಮುಂದಿನ ಕೈ ತೋಟವಾಗಿದೆ ಎಂದು ತೋಟಗಾರಿಕಾ ಅಧಿಕಾರಿಗಳನ್ನು ಪ್ರಸಾದ್ ತರಾಟೆಗೆ ತೆಗೆದುಕೊಂಡರು.
ಭಕ್ತರ ಹಣ ಭಕ್ತರಿಗೆ ಮೀಸಲು: ದೇವಾಲಯದ ಹಣ ಬ್ಯಾಂಕಿನಲ್ಲಿ ಕೂಡಿಡಲು ಇರೋದಲ್ಲ, ಶ್ರೀಕಂಠೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸಿ ಭಕ್ತರ ಹಣ ಭಕ್ತರಿಗಾಗಿ ಸದ್ಬಳಕೆಯಾಗಬೇಕು ಎಂದರು.
ಹಿರಿಯ ಅಧಿಕಾರಿಗಳೇ ಸಭೆಗೆ ಬರಬೇಕು: 110 ಕೋಟಿ ರೂ. ಬ್ಯಾಂಕಿನಲ್ಲಿ ಠೇವಣಿಯಾಗಿದ್ದರೆ ಏನು ಪ್ರಯೋಜನ?, ಎಲ್ಲಿ ನಿಮ್ಮ ಅಧಿಕಾರಿಗಳು ಏನೇನು ಯೋಜನೆ ಇದೆ ನಿಮ್ಮಲ್ಲಿ ಎಂದು ಪ್ರಶ್ನಿಸಿದರು. ಕಿರಿಯ ಅಧಿಕಾರಿಗಳು ಉತ್ತರಿಸಿಲಾಗದೆ ಚಡಪಡಿಸಿದಾಗ ನಿಮ್ಮಲ್ಲಿ ಕೇಳಿ ಪ್ರಯೋಜನವಿಲ್ಲ ಮುಂದಿನ ಸಭೆಗೆ ಹಿರಿಯ ಅಧಿಕಾರಿಯೇ ಬರಬೇಕು ಎಂದು ತಾಕೀತು ಮಾಡಿದರು.
ನಿವೇಶನ ರಹಿತರಿಗೆ ಆದ್ಯತೆ ನೀಡಿ: ಕ್ರೀಡಾಂಗಣ, ಸಮುದಾಯ ಭವನ, ಮಹಿಳಾ ಪದವಿ ಪೂರ್ವ ಕಾಲೇಜು ಸೇರಿದಂತೆ ಹಲವು ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಅವರು, ಹಣ ಕೊರತೆಯಾಗಿದ್ದರೆ ತಮ್ಮ ಗಮನಕ್ಕೆ ತಂದಿಲ್ಲ ಎಂದರು. ಮೂಳ್ಳೂರು ಗುಡ್ಡದಲ್ಲಿ ತಾವು ಸಚಿವರಾಗಿದ್ದಾಗಲೇ 800 ನಿವೇಶನಗಳ ಫಲಾನುಭವಿಗಳ ಪಟ್ಟಿ ಸಿದ್ಧವಾಗಿತ್ತು ಎಂದ ಅವರು, ಹೊರಳವಾಡಿ ಸೇರಿದಂತೆ ಸುತ್ತಲಿನ ಗಾಮ್ರಗಳ ನಿವೇಶನ ರಹಿತರಿಗೆ ಅಲ್ಲಿ ಆದ್ಯತೆ ಮೆರೆಗೆ ಜಾಗ ನೀಡಬೇಕಾಗಿದೆ ಎಂದರು.
ಆದರ್ಶ ಗ್ರಾಮವಾಗಿ ದೇಬೂರು: ಈ ಬಾರಿ ಸಂಸದರ ಆದರ್ಶ ಗ್ರಾಮಕ್ಕೆ ತಾವು ನಗರದ ಹೊರವಲಯದ ದೇಬೂರು ಗ್ರಾಮವನ್ನು ಆಯ್ಕೆ ಮಾಡಿ ಕೊಂಡಿದ್ದು ಅದರ ಸಮಗ್ರ ಅಭಿವೃದ್ಧಿ ತಮ್ಮದಾಗಿದೆ ಎಂದು ತಿಳಿಸಿದರು
ನಗರ ವಿಸ್ತರಣೆ: ದೇಬೂರು ಹಾಗೂ ದೇವೀರಮ್ಮನಹಳ್ಳಿ ಪಂಚಾಯಿತಿಯ ಹಲವು ಪ್ರದೇಶಗಳು ನಗರಸಭೆಯ ವ್ಯಾಪ್ತಿಗೆ ಸೇರಬೇಕಾಗಿದ್ದು ಬರುವ ಪಂಚಾಯಿತಿ ಚುನಾವಣೆಯಲ್ಲಿ ನಗರಸಭೆಗೆ ಸೇರಲ್ಪಡುವ ಪ್ರದೇಶಗಳನ್ನು ಹೊರಗಿಟ್ಟು ಚುನಾವಣೆ ನಡೆಸಲು ಕ್ರಮ ಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ವಿರುದ್ಧ ಅಸಮಾಧಾನ: ಅಧಿಕಾರಿಗಳು ಸರ್ಕಾರದ ಆಸ್ತಿ ಪಾಸ್ತಿಗಳನ್ನು ಕಾಪಾಡಿಕೊಳ್ಳಬೇಕು, ಅಭಿವೃದ್ಧಿ ಕೆಲಸಗಳ ಪಟ್ಟಿ ತಯಾರಿಸಿ ಹಣ ಬಿಡುಗಡೆ ಮಾಡಿಸುವುದು ಜನಪ್ರತಿನಿಧಿಗಳಾದ ನಮ್ಮ ಕೆಲಸ ಆ ಹಣ ಲೂಟಿಯಾದರೆ ಸಾಮಗ್ರಿಗಳು ಕಾಣೆಯಾದರೆ ನಾವೇನು ಮಾಡಲು ಸಾಧ್ಯ ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡೋಣ ಎಂದ ಅವರು, ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ತಮ್ಮಲ್ಲಿರುವ ಸೋಮಾರಿತನ ಬಿಟ್ಟು ಕೆಲಸದಲ್ಲಿ ತೊಡಗಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಮಹೇಶ ಕುಮಾರ್, ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ದಯಾನಂದ ಮೂರ್ತಿ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಇತರರು ಇದ್ದರು.
ಮರಗಳ್ಳತನ ಹೊಸತೇನೂ ಅಲ್ಲ: ತಾಲೂಕು ಕ್ರೀಡಾಂಗಣದಲ್ಲಿದ್ದ ನಾಲ್ಕು ಕೊಠಡಿಗಳ 10 ಲಕ್ಷ ರೂ. ಬೆಲೆ ಬಾಳುವ ಸುಮಾರು 139 ತೇಗದ ಮರದ ಜಂತಿಗಳು ಕಾಣೆಯಾದ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿದಾಗ ಇಲ್ಲಿ ಮರಗಳ್ಳ ತನ ಹೊಸತಲ್ಲ. ದಳವಾಯಿ ಶಾಲೆ ಹಾಗೂ ಪ್ರವಾಸಿ ಮಂದಿರದ ಬೆಲೆ ಬಾಳುವ ಮರಗಳು ಸಹ ಹಿಂದೆ ಕಾಣೆಯಾಗಿದ್ದವು ಈಗ ಕ್ರೀಡಾಂಗಣದ ಮರಗಳ್ಳತನ ನಡೆದಿದೆ ಅಧಿಕಾರಿಗಳ ಪಾತ್ರವಿಲ್ಲದೆ ಇದು ನಡೆಯಲು ಸಾಧ್ಯವೇ ಇಲ್ಲಾ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಸಂಸದ ಪ್ರಸಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.