ವಲಸಿಗರ ತಾಣಕ್ಕೆ ಆರೋಗ್ಯ ಇಲಾಖೆ ಭೇಟಿ
Team Udayavani, Dec 13, 2022, 4:17 PM IST
ಎಚ್.ಡಿ.ಕೋಟೆ: ಉದಯವಾಣಿ ವರದಿಯಿಮದ ಎಚ್ಚೆತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಪಟ್ಟಣದಲ್ಲಿ ಬೀಡುಬಿಟ್ಟಿದ್ದ ಆಂಧ್ರಮೂಲದ ವಲಸಿಗರ ತಾಣಕ್ಕೆ ಭೇಟಿ ನೀಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ಚುಚ್ಚು ಮತ್ತು ಔಷಧಿಗಳನ್ನು ವಿತರಿಸಿದರು.
ಪಟ್ಟಣದ ಹುಣಸೂರು ಬೇಗೂರು ಮುಖ್ಯರಸ್ತೆ ಬದಿಯ ಜೆ.ಎಸ್.ಎಸ್. ಮಂಗಳ ಮಂಟಪದ ಬಳಿ ಬಯಲಿನಲ್ಲಿ ಕಳೆದ 3 ವರ್ಷಗಳಿಂದ ಆಂಧ್ರ ಮೂಲದ ಸುಮಾರು 10 ಬಡಕುಟುಂಬಗಳು ಜೀವನೋಪಾಯಕ್ಕಾಗಿ ವಲಸೆ ಬಂದು ಬೀಡು ಬಿಟ್ಟಿದ್ದರೂ ಇಲ್ಲಿಯ ತನಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲ ಸೌಕರ್ಯ ವಂಚಿತರಾದ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸದೇ ಇರುವ ಬಗ್ಗೆ ಉದಯವಾಣಿ ಸೋಮವಾರ ” 20 ಮಕ್ಕಳು ಶಿಕ್ಷಣದಿಂದ ವಂಚಿತ’ ಎನ್ನುವ ತಲೆ ಬರದಹದಡಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು.
ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಹಿರಿಯ ಆರೋಗ್ಯ ಮಹಿಳಾ ಸುರಕ್ಷಾಣಾಧಿಕಾರಿ ಸರಳಾ, ದೇವೇಂದ್ರಮ್ಮ, ರವಿರಾಜ್, ವಿದ್ಯಾ ತಂಡ ನಿರಾಶ್ರಿತರ ತಾಣಕ್ಕೆ ಭೇಟಿ ನೀಡಿ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಗರ್ಭಿಣಿಯರು ಮಗುವಿನ ಬೆಳವಣಿಗೆ ಮತ್ತು ಅನಾರೋಗ ರಕ್ಷಣೆಗೆ ಪೂರಕ ವಾದ ಚುಚ್ಚು ಮದ್ದುಗಳನ್ನು ಪಡೆದುಕೊಂಡಿಲ್ಲ. ಸ್ಥಳದಲ್ಲೇ ಇಬ್ಬರು ಗರ್ಭಿಣಿಯರಿಗೆ ಟಿ.ಡಿ ಚುಚ್ಚುಮದ್ದು ನೀಡಲಾಯಿತು. ಮಕ್ಕಳಿಗೆ ಮೊದಲ ಹಂತದ ಎಂ.ಆರ್, ಪೋಲಿಯೋ ವ್ಯಾಕ್ಸಿನ್, ವಿಟಮಿನ್ ಎ ದ್ರಾವಣ ನೀಡಿ ವಲಸಿಗರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್