ಅಗ್ನಿ ಅವಘಡ ತಪ್ಪಿಸಲು ಸಹಕರಿಸಿ
Team Udayavani, Jul 18, 2017, 12:25 PM IST
ಪಿರಿಯಾಪಟ್ಟಣ: ಅಗ್ನಿ ಅವಘಡಗಳನ್ನು ತಪ್ಪಿಸಲು ಇಲಾಖೆಯ ಜೊತೆಗೆ ಸಾರ್ವಜನಿಕರು ಕೂಡ ಜಾಗೃತಿ ಹೊಂದಿ ಸಹಕರಿಸಬೇಕು ಎಂದು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಗಿಡ್ಡೇಗೌಡ ತಿಳಿಸಿದರು. ಅವರು ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ಅಗ್ನಿ ಅವಘಡಗಳನ್ನು ತಪ್ಪಿಸುವ ಮುನ್ನೆಚ್ಚರಿಕೆಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಗ್ನಿ ಅವಘಡಗಳ ಬಗ್ಗೆ ಜಾಗೃತಿ ಹೊಂದುವುದರಿಂದ ಅನೇಕ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಈ ಕಾರಣಕ್ಕಾಗಿ ಬಾಲ್ಯದಿಂದಲೇ ವಿದ್ಯಾರ್ಥಿಗಳೂ ಜಾಗೃತಿ ಹೊಂದಬೇಕು. ಶಾಲೆಯಲ್ಲಿ ಅಡುಗೆಗಾಗಿ ಬಳಸುವ ಸಿಲಿಂಡರ್‌ಗಳ ಬಳಕೆ ಸೂಕ್ತವಾಗಿರಿಬೇಕು ಮನೆಗಳಲ್ಲಿಯೂ ಸಹ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿರಬೇಕು ಮತ್ತು ಮುನ್ನೇಚ್ಚರಿಕೆಯ ಕ್ರಮವಾಗಿ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಬೇಕು.
ತಾಲೂಕಿನಲ್ಲಿ ತಂಬಾಕಿನ ಹದ ಮಾಡುವ ಕಾರ್ಯವು ಪ್ರಾರಂಭವಾಗಿದ್ದು, ಹದಗೊಳಿಸುವ ಸಂದರ್ಭದಲ್ಲಿ ತಂಬಾಕಿಗೆ ಬೆಂಕಿ ತಗುಲಿ ಅನಾಹುತವಾಗುತ್ತದೆ ಅಲ್ಲದೆ ಹುಲ್ಲಿನ ಮೆದೆ, ಕಾಡ್ಗಿಚ್ಚುಗಳ ಮೂಲಕ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಬಹುದು ಆದ್ದರಿಂದ ಈ ಅನಾಹುತಗಳನ್ನು ತಪ್ಪಿಸಲು ಇಲಾಖೆಯು ಅಗ್ನಿ ನಂದಕ, ಜಲವಾಹನಗಳನ್ನು ಬಳಸುತ್ತದೆ ಅಲ್ಲದೆ ಸಣ್ಣ ಪ್ರಮಾಣದ ಬೆಂಕಿ ಅನಾಹುತಗಳನ್ನು ತಪ್ಪಿಸಲು ಮೋಟಾರ್ ಸೈಕಲ್ ವಾಹನವನ್ನು ಹೊಂದಿದ್ದು, ಇದರಲ್ಲಿ ನೊರೆ ಅಗ್ನಿನಂದಕ ಶೇಖರಣೆಯ ಕ್ಯಾನ್‌ಗಳನ್ನು ಬಳಸುತ್ತೇವೆ. ಆದ್ದರಿಂದ ಪ್ರತಿಯೊಬ್ಬರು ಕೂಡ ಅಗ್ನಿಯ ಅವಘಡಗಳನ್ನು ತಪ್ಪಿಸಲು ಜಾಗೃತಿ ಹೊಂದಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾದ್ಯಾಯರಾದ ಎಂ.ಪಿ.ನಾಗರಾಜ್ ಮಾತನಾಡಿ ಅಗ್ನಿ ಅವಘಡಗಳನ್ನು ನಂದಿಸಿ ಸಾರ್ವಜನಿಕರನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಶ್ರಮ ಶ್ಲಾಘನೀಯ. ಇಲಾಖೆಯು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರು ಅನಾಹುತಗಳನ್ನು ತಪ್ಪಿಸಲು ಮುಂದಾಗುವಂತೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ಕಾರಣದಿಂದಲೇ ಪ್ರತಿ ವಾರದ ಅಂತ್ಯದಲ್ಲಿ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಅಗ್ನಿನಂದಕಗಳ ಬಗ್ಗೆ ಮಾಹಿತಿ ನೀಡಿ ಅಣುಕು ಪ್ರಾತ್ಯೆಕ್ಷಿಕೆ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖ ಅಗ್ನಿಶಾಮಕ ಅಧಿಕಾರಿ ಎನ್.ಎಂ.ಚಂದ್ರಶೇಖರ್, ಪತ್ರಕರ್ತರಾದ ಹೆಚ್.ಕೆ.ಮಹೇಶ್, ಶಿಕ್ಷಕರಾದ ಸುರೇಶ್, ಅಣ್ಣಯ್ಯ, ಸಿಬ್ಬಂದಿಗಳಾದ ಚೇತನ್‌ಕಮಾರ್, ವಿನಯ್‌ಕುಮಾರ್, ಸುನಿಲ್, ಸತೀಶ್, ಬಸಪ್ಪ ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.