ಅದ್ಧೂರಿ ಹನುಮ ಜಯಂತಿ
Team Udayavani, Jul 8, 2018, 3:34 PM IST
ನಂಜನಗೂಡು: ನಂಜನಗೂಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹನುಮ ಜಯಂತಿ ಮಹೋತ್ಸವ ವರುಣನ ಸಿಂಚನದ ಮಧ್ಯೆಯೂ ವಿಜೃಂಭಣೆಯಿಂದ ನೆರವೇರಿತು. ಹನುಮ ಭಕ್ತರು ವೀರಾಂಜನೇಯ ಧರ್ಮ ಜಾಗೃತಿ ಬಳಗ ಸ್ಥಾಪಿಸಿಕೊಂಡು ಅದರ ನೇತೃತ್ವದಲ್ಲಿ ಅದ್ಧೂರಿ ಹನುಮನ ಮೆರವಣಿಗೆ ಆಚರಿಸಿ ನಗರ ಬೀದಿಗಳನ್ನು ಕೇಸರಿಮಯವಾಗಿಸಿದ್ದರು.
ಶನಿವಾರ ಬೆಳಗ್ಗೆಯಿಂದಲೇ ಇಲ್ಲಿನ ಕಪಿಲಾ ನದಿ ತಟದಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಕೃಷ್ಣ ಜೋಯಸ್ ನೇತೃತ್ವದಲ್ಲಿ ಹನುಮ ಜಯಂತಿ ವೀರಾಂಜನೆಯ ಬಳಗಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಶನಿವಾರ ಬೆಳಗಿನಿಂದ ತುಂತುರು ಮಳೆಯಲ್ಲೂ ಸಹಸ್ರಾರು ಭಕ್ತರು ವೀರ ಹನುಮನ ಮೆರವಣಿಗೆ ಕಣ್ತುಂಬಿಕೊಂಡು ಭಕ್ತಿಪರವಶರಾದರು. ರಾಷ್ಟ್ರಪತಿ ರಸ್ತೆ ಹಾಗೂ ಮಹಾತ್ಮ ಗಾಂಧಿ ರಸ್ತೆ ಮೂಲಕ ಮತ್ತೆ ದೇವಾಲಯದತ್ತ ಸಾಗಿ ಮೆರವಣಿಗೆ ಸಾಗಿತು.
ಶನಿವಾರ ಸಂಜೆ 4.30ಕ್ಕೆ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಮಲ್ಲನಮೂಲೇ ಪೀಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಡಾ. ಶ್ರೀಕಾಂತ ಕೇಸರಿ ಧ್ವಜವನ್ನು ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಭಕ್ತ ಹುನಮನ ವಿಗ್ರಹದೊಂದಿಗೆ ಆಳೆತ್ತರದ ಆಂಜನೆಯ ಮೂರ್ತಿ ಮರವಣಿಗೆಗೆ ವೀರಭದ್ರ ಕುಣಿತ, ಕಂಸಾಳೆ ಜನಪದ ಕಲಾ ತಂಡಗಳು ಸಾಥ್ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.