ಗಣಪತಿ ಸ್ವಾಮೀಜಿ ವಜ್ರೋತ್ಸವದಲ್ಲಿ ಗಣ್ಯರಿಗೆ ಸನ್ಮಾನ
Team Udayavani, May 23, 2017, 12:56 PM IST
ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜನ್ಮ ದಿನೋತ್ಸವದ ಅಂಗವಾಗಿ ನಡೆಯುತ್ತಿರುವ ವಜ್ರೋತ್ಸವದ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಾನಾ ಕ್ಷೇತ್ರಗಳ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಿತು. ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಆಶ್ರಮದಲ್ಲಿ ಬೆಳಗ್ಗೆ ಶ್ರೀಗಳ ಸಮ್ಮುಖದಲ್ಲಿ ನಡೆದ ಧಾರ್ಮಿಕ ಕೈಂಕರ್ಯದಲ್ಲಿ ಶ್ರೀಚಕ್ರ ಪೂಜೆ ಮತ್ತು ರುದ್ರಹೋಮ ನೆರವೇರಿಸಲಾಯಿತು.
ನಂತರ ನಡೆದ ಸಮಾರಂಭದಲ್ಲಿ ಕೇರಳದ ಮಲ್ಲಿಯೂರ್ ಪರಮೇಶ್ವರನ್ ನಂಬೂದರಿ, ಇಂಧೋರ್‌ನ ಪ್ರದೀಪ್ ತಾರನೇಕರ್ ಅವರುಗಳಿಗೆ ದತ್ತಪೀಠ ಪ್ರಶಸ್ತಿ ನೀಡಲಾಯಿತು. ಅಂತೆಯೇ ಕುಂಭಕೋಣಂನ ವೇಣುಗೋಪಾಲ್ ಘನಪಾಠಿ(ಋಗ್ವೇದ), ರಾಜಮಂಡ್ರಿ ದತ್ತಾತ್ರೇಯ ಘನಪಾಠಿ(ಯಜುರ್ವೇದ), ಪರಬಾನಿ ಕೃಷ್ಣ ಮಧುಕರ್ ಪಲುಸ್ಕರ್(ಸಾಮವೇದ),
ತಿರುಪತಿ ಶ್ರೀಕೃಷ್ಣ ಮಧುಕರ್ ಪಲುಸ್ಕರ್(ಸಾಮವೇದ), ಬೆಂಗಳೂರಿನ ವಿ. ಪ್ರವೀಣ್(ಮೃದಂಗ), ಚೆನ್ನೈನ ಪಿ. ಉನ್ನಿಕೃಷ್ಣನ್(ಕರ್ನಾಟಕ ಸಂಗೀತ), ಹುಬ್ಬಳ್ಳಿಯ ಜಯತೀರ್ಥ ಮೇವುಂಡಿ(ಹಿಂದೂಸ್ಥಾನಿ ಸಂಗೀತ), ಕೊಚ್ಚಿಯ ಉದ್ಯೋಗಮಂಡಲಂ ವಿಜಯಕುಮಾರ್(ಭಕ್ತಿಗೀತೆ), ಕನ್ನಡ ಸಾಹಿತ್ಯದಲ್ಲಿ ಡಾ.ಸಿ.ಪಿ.ಕೃಷ್ಣಕುಮಾರ್‌ಗೆ ಆಸ್ಥಾನ್ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಿರುಚ್ಚಿಯ ಎಸ್.ಶಿವಪ್ರಕಾಶಂಗೆ ಶುಕ್ರವನ ಪ್ರದಾನ ಮಾಡಲಾಯಿತು.
ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.