ಮಳೆಗೆ ಮನೆ ಕುಸಿದು ವರ್ಷ ಕಳೆದರೂ ಸೂರು ಸೌಲಭ್ಯವಿಲ್ಲ!
Team Udayavani, Dec 18, 2021, 1:25 PM IST
ಎಚ್.ಡಿ.ಕೋಟೆ: ಮನೆ ಕುಸಿದು ಬಿದ್ದು ವರ್ಷ ಕಳೆದಿದೆ, ಹೊಸ ಸೂರು ನಿರ್ಮಿಸಿಕೊÙಲು Û ಅರ್ಜಿ ಸಲ್ಲಿಸಿ ಅಲೆದಾಡಿದರೂ ಸೂರು ಸಿಕ್ಕಿಲ್ಲ. ಅರ್ಧ ಗೋಡೆಬಿದ್ದಿರುವ, ಮೇಲ್ಛಾವಣಿ ಕುಸಿದಿರುವ ಸ್ಥಿತಿಯಲ್ಲಿ ಇರುವ ಜಾಗದಲ್ಲೇ ಕುಟುಂಬವೊಂದು ಕೈಯಲ್ಲಿ ಜೀವ ಇಟ್ಟುಕೊಂಡುಕಾಲ ಕಳೆಯುತ್ತಿದೆ.
ಇದು ತಾಲೂಕಿನ ದೇವಲಾಪುರ ಹುಂಡಿ ಗ್ರಾಮದ ಸಂತ್ರಸ್ತ ಶಿವಲಿಂಗೇಗೌಡರ ಪರಿಸ್ಥಿತಿ…. ಇವರು ವಾಸಿಸುತ್ತಿರುವ ಜಾಗಕ್ಕೆ ಭೇಟಿ ನೀಡಿದರೆ ಎಂಥವರಿಗೂ ಮರುಕು ಹುಟ್ಟುತ್ತದೆ. ಆದರೆ, ವಸತಿ ಸೌಲಭ್ಯ ತಲುಪಿಸಬೇಕಾದ ಹೊಣೆ ಹೊತ್ತಿರುವಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಮರುಕು ಹುಟ್ಟುತ್ತಿಲ್ಲ.
ದೇವಲಾಪುರ ಹುಂಡಿ ಗ್ರಾಮದ ನಿವಾಸಿ ಶಿವಲಿಂಗೇಗೌಡ-ಶಾರದಮ್ಮ ದಂಪತಿ ಸೂರಿಗಾಗಿ ತಲೆಮೇಲೆ ಕೈಹೊತ್ತು ಕೂತಿದ್ದು, ಯಾವಾಗ ಮನೆ ಸಿಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವರ್ಷ ಬರುಗಾಳಿ ಮಳೆಗೆ ಇವರ ಹೆಂಚಿನ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಮನೆಯಲ್ಲಿ ಮಲಗಿದ್ದಶಾರದಮ್ಮ ಹಾಗೂ ಶಿವಲಿಂಗೇಗೌಡ ಗಂಭೀರವಾಗಿಗಾಯಗೊಂಡಿದ್ದರು. ಮೈಸೂರಿನಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಆಸ್ತಮಾ ಕಾಯಿಲೆಯಿಂದ ಬಳಲುತ್ತಾ, ಸಂಕಷ್ಟದ ಜೀವನ ನಡೆಸುತ್ತಿರುವ ಈ ಕುಟುಂಬವು ಇಂದಿಗೂಗೋಡೆಯೇ ಇಲ್ಲದ, ಮೇಲ್ಛಾವಣಿ ಕುಸಿಯುವ ಹಂತದ ಲ್ಲಿರುವ ಶಿಥಿಲಾವಸ್ಥೆಯ ಮನೆಯಲ್ಲಿಯೇ ವಾಸವಾಗಿದೆ.
ಲಂಚ: ಹೊಸ ಸೂರು ನಿರ್ಮಿಸಿಕೊಳ್ಳಲು ಶಾಸಕರು, ಸಂಸದರು ಬಳಿ ಅಲೆದರೂ ಮನೆ ಮಂಜೂರಾಗಲೇ ಇಲ್ಲ. ಕೊನೆಗೆ ಅನ್ಯಮಾರ್ಗ ಕಾಣದೆ ಗ್ರಾಮಲೆಕ್ಕಿಗ ರೊಬ್ಬರನ್ನು ಭೇಟಿ ಮಾಡಿ ಪ್ರಕೃತಿ ವಿಕೋಪದಡಿ ಮನೆ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಸಂದರ್ಭ ದಲ್ಲಿ ಗ್ರಾಮಲೆಕ್ಕಿಗ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. “ಹಿರಿಯ ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಮನೆ ಮಂಜೂರಾಗುತ್ತದೆ. ಇದಕ್ಕಾಗಿ 50 ಸಾವಿರ ರೂ. ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ಮನೆ ಮಂಜೂರಾತಿಗೆ 20 ಸಾವಿರ ರೂ.ಗೆ ಒಪ್ಪಂದ ಮಾಡಿಕೊಂಡು ಅದರಂತೆ ಹಣವನ್ನೂ ಕೊಟ್ಟಿದೆ. ಆದರೂ ಮನೆ ಮಂಜೂರಾತಿ ಆಗಲೇ ಇಲ್ಲ ಎಂದು ಸಂತ್ರಸ್ತ ಶಿವಲಿಂಗೇಗೌಡ ಆರೋಪಿಸಿದ್ದಾರೆ.
50 ಸಾವಿರ ರೂ. ನೀಡಿದರೆ ಮನೆ: ಕುಸಿದು ಬಿದ್ದಮನೆಗಳಿಗೆ ಸರ್ಕಾರ ಪ್ರಕೃತಿ ವಿಕೋಪ ಯೋಜನೆಯಡಿ 5 ಲಕ್ಷ ರೂ. ಅನುದಾನ ನೀಡುತ್ತದೆ. ಆದರೆ, ಇಲ್ಲಿ 50 ಸಾವಿರ ಹಣ ನೀಡುವ ವ್ಯಕ್ತಿಗಳ ನ್ನು ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಮನೆ ಮಂಜೂರು ಮಾಡುತ್ತಿದ್ದಾರೆ. ಲಂಚ ನೀಡದಿದ್ದರೆ ಮನೆ ಸಿಗಲ್ಲ. ಹೀಗಾಗಿ ಮನೆ ಸಿಕ್ಕಿದರೆ ಸಾಕು ಎಂದುಕೊಂಡು 20 ಸಾವಿರ ರೂ. ಲಂಚ ನೀಡಿದ್ದೆ 20 ಸಾವಿರ ನೀಡಿದ ಬಳಿಕ ಶಾರದಮ್ಮ ಕೋಂ ಶಿವಲಿಂಗೇಗೌಡ ಹೆಸರು ಬಿ ಗ್ರೇಡ್ ನಲ್ಲಿ ನಮೂದಾಗಿದೆ. ಕೆಲ ದಿನಗ ಳು ಕಳೆಯುತ್ತಿದ್ದಂತೆಯೇ ಹೆಚ್ಚಿನ ಹಣ ನೀಡಿದ ಫಲಾ ನುಭವಿಗಳ ಹೆಸರುಬಿಗ್ರೇಡ್‌ನಲ್ಲಿ ನಮೂದು ಆಗಿದೆ. ನನ್ನ ಹೆಸರು ಸಿ ಗ್ರೇಡ್‌ನಲ್ಲಿ ದಾಖಲಿಸಿ ಮನೆ ಮಂಜೂರಾತಿಯನ್ನು ತಪ್ಪಿಸಿದ್ದಾರೆ ಎಂದು ಶಿವಲಿಂಗೇ ಗೌಡರು ಅಸಹಾಯಕತೆ ತೋಡಿಕೊಂಡಿದಾರೆ .
ಗ್ರಾಮ ಲೆಕ್ಕಿಗರಿಗೆ 20 ಸಾವಿರ ರೂ.ಲಂಚ ನೀಡಿದ್ದೆ: ಸಂತ್ರಸ್ತ :
ಮಳೆಗೆ ಮನೆ ಕುಸಿದು ಹೋಗಿತ್ತು. ಮನೆ ನಿರ್ಮಿಸಿಕೊಳ್ಳಲು ಅರ್ಜಿ ಹಾಕಿದ್ದೆ. ಸೂರು ಮಂಜೂರಾತಿಗೆ ಗ್ರಾಮ ಲೆಕ್ಕಿಗ (ವಿಎ) 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಇಷ್ಟು ಹಣ ಇಲ್ಲದ ಕಾರಣ 20 ಸಾವಿರಕ್ಕೆ ಒಪ್ಪಿಕೊಂಡು ಅಷ್ಟೂ ಹಣವನ್ನು ಅವರಿಗೆ ನೀಡಿದ್ದೆ. ಆ ಸಮಯದಲ್ಲಿ ಹಣ ಇರಲಿಲ್ಲ. ಮನೆಯಲ್ಲಿದ ª ಹಸು ಮಾರಿ 20 ಸಾವಿರ ರೂ. ನೀಡಿದ್ದೆ. ಆದರೂ ನನಗೆ ಮನೆ ಮಂಜೂರು ಮಾಡಿಲ್ಲ ಎಂದು ಮನೆ ಕಳೆದುಕೊಂಡ ಸಂತ್ರಸ್ತರಾದ ದೇವಲಾಪುರ ಹುಂಡಿ ಗ್ರಾಮದ ಶಿವಲಿಂಗೇಗೌಡ ಆರೋಪ ಮಾಡಿದಾರೆ.
ನಾನು ಯಾರಿಂದಲೂ ಹಣ ಪಡೆದಿಲ್ಲ: ಗ್ರಾಮ ಲೆಕ್ಕಿಗ :
ನಾನು ಯಾರಿಂದಲೂ ಹಣ ಪಡೆದಿಲ್ಲ. ಫಲಾನುಭವಿ ಸಕಾಲದಲ್ಲಿ ದಾಖಲಾತಿ ಹಾಜರುಪಡಿಸಿಲ್ಲ. ಮುಂದಿನ ಬಾರಿ ಸಂತ್ರಸ್ತ ಶಿವಲಿಂಗೇಗೌಡರಿಗೆ ಪ್ರಥಮ ಆದ್ಯತೆ ನೀಡಿ ಮನೆ ಮಂಜೂರಾತಿ ಮಾಡಿಕೊಡಲು ಕ್ರಮ ವಹಿಸಲಾಗುವುದು ಎಂದು ಎಚ್.ಡಿ. ಕೋಟೆ ತಾಲೂಕು ಕಂದಲಿ ಹೋಬಳಿ ಪ್ರಭಾರ ಗ್ರಾಮ ಲೆಕ್ಕಿಗರಾದ ಹೇಮಂತ್ ತಿಳಿಸಿದ್ದಾರೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಏಕೆ ಗ್ರಾಮಸಭೆ ನಡೆಸಿ, ಫಲಾನುಭವಿಗಳನ್ನು ಗುರುತಿಸಿಲ್ಲ?, ಮನೆ ಕುಸಿದಿರುವ ವಿಚಾರ ತಿಳಿದಿದ್ದರೂ ಏಕೆ ಸೌಲಭ್ಯ ಕಲ್ಪಿಸಿಲ್ಲ ಎಂಬ ಪ್ರಶ್ನೆಗೆ ಹೇಮಂತ್ ಅವರು, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಂತ್ರಸ್ತ ಶಿವಲಿಂಗೇಗೌಡ ಅವರು ವಾಸಿಸುವ ಜಾಗವನ್ನು ನೋಡಿದರೆ ಅವರು ಸರ್ಕಾರದ ಸವಲತ್ತು ಪಡೆಯಲು ಅರ್ಹರು. ಅವರಿಗೆ ಸೂರು ಮಂಜೂರಾತಿ ನೀಡಬೇಕಿದೆ. ಆದರೆ, ಈಗ ಮನೆಗಳ ಮಂಜೂರಾತಿ ಅವಧಿ ಪೂರ್ಣಗೊಂಡು ಆನ್‌ಲೈನ್ ವ್ಯವಸ್ಥೆ ಲಾಕ್ ಆಗಿದೆ. ಮುಂದಿನ ಬಾರಿ ಮಂಜೂರಾತಿಗೆ ಆದ್ಯತೆ ನೀಡಲುಕ್ರಮ ವಹಿಸಲಾಗುವುದು. – ಚಲುವರಾಜು, ತಹಶೀಲ್ದಾರ್
–ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.