ಅದ್ಧೂರಿ ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರೋತ್ಸವ
Team Udayavani, Mar 29, 2018, 2:53 PM IST
ನಂಜನಗೂಡು: ಗರಳಿಪುರಿ ಕ್ಷೇತ್ರಾಧಿಪತಿ ಭವರೋಗ ನಿವಾರಕ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದೊಡ್ಡಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 6.05 ರಿಂದ 6.20ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ಗೌತಮ ರಥದಲ್ಲಿ ಕುಳ್ಳರಿಸಲಾಯಿತು. ಬಳಿಕ ರಥದ ಚಕ್ರಗಳಿಗೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಶಿವಕುಮಾರ್ ಗೌತಮ ಪಂಚ ಮಹಾ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಚಾಲನೆ ನೀಡುವುದಕ್ಕಾಗಿಯೇ ಕಾದು ನಿಂತಿದ್ದ ಲಕ್ಷಾಂತರ ಭಕ್ತರು ಶ್ರೀಕಂಠೇಶ್ವರ ಮಹಾರಾಜ್‌ಕೀ ಜೈ ಎಂಬ ಘೋಷಣೆ ಕೂಗುತ್ತ ಉತ್ಸಾಹದಲ್ಲಿ ರಥ ಎಳೆದ ಭಕ್ತರು ಸಂಭ್ರಮಪಟ್ಟರು. ರಥ ಎಳೆಯಲು ಭಕ್ತರು ಮುಗಿ ಬೀಳುತ್ತಿದ್ದ ದೃಶ್ಯಗಳು ಸಮಾನ್ಯವಾಗಿತ್ತು. ದೇವಾಲಯದ ಆವರಣದಿಂದ ಹೊರಟ ರಥೋತ್ಸವ, ರಾಘವೇಂದ್ರಸ್ವಾಮಿ ಮೂಲಮಠ,
ರಾಕ್ಷಸ ಮಂಟಪ, ಪಾಠಶಾಲಾ ಬೀದಿಯಲ್ಲಿ ಸಾಗಿ ಒಂದೂವರೆ ಗಂಟೆ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದಂತೆ ಸ್ವಸ್ಥಾನಕ್ಕೆ ಮರಳಿತು. ಮೊದಲು ಗಣಪತಿ ರಥ ಹೊರಟರೆ, ನಂತರದಲ್ಲಿ ಗೌತಮ ರಥ, ಸುಬ್ರಹ್ಮಣ್ಯ ರಥ, ಚಂಡಿಕೇಶ್ವರ ರಥ ಹಾಗೂ ಪಾರ್ವತಿದೇವಿ ರಥಗಳು ಕ್ರಮವಾಗಿ ಸಾಗಿ ತಮ್ಮ ಸ್ಥಾನಗಳಿಗೆ ಮರಳಿ ಆಗಮಿಸಿದವು.
ಕಾಂಕ್ರೀಟ್ ರಸ್ತೆಯಿಂದ ಸುಸುತ್ರ ಮೆರವಣಿಗೆ: ರಥೋತ್ಸವ ಸಂದರ್ಭದಲ್ಲಿ ನವ ವಧು ವರರು, ಆಗಮಿಸಿದ ಸಹಸ್ರಾರು ಭಕ್ತರು ಹಣ್ಣು ಜವನ ಎಸೆದು ಭಕ್ತಿಯನ್ನು ಪ್ರದರ್ಶಿಸಿದರು. ರಥಬೀದಿಯ ಅರ್ಧ ಭಾಗದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿರುವುದರಿಂದ ಈ ಬಾರಿ ರಥೋತ್ಸವ ವೇಳೆ ಯಾವುದೇ ಅವಘಡ ಸಂಭವಿಸಲಿಲ್ಲ.
ರಥೋತ್ಸವ ವೀಕ್ಷಿಸಲು ಭಕ್ತರು ಕಟ್ಟಡಗಳ ಮೇಲೇರಿ ನಿಂತಿದ್ದರು. ಹತ್ತಿರ ಬರುತ್ತಿದ್ದಂತೆ ಜೈಕಾರ ಹಾಕುತ್ತಾ ನಮಿಸಿದರು. ಇನ್ನೂ ರಥಗಳು ಸಾಗುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು. ಪೊಲೀಸರು ಹೆಚ್ಚಿನ ಭದ್ರತೆವಹಿಸಿ ಭಕ್ತರಿಗೆ ಅನಾನುಕೂಲ ಆಗದಂತೆ ನೋಡಿಕೊಂಡರು.
ದಾಸೋಹ ವ್ಯವಸ್ಥೆ: ರಥ ಎಳೆಯುವ ಭಕ್ತರಿಗೆ ಹುಮ್ಮಸ್ಸು ನೀಡುವ ಸಲುವಾಗಿ ಆಗಿಂದಾಗ್ಗೆ ಧ್ವನಿವರ್ಧಕದ ಮೂಲಕ ಘೋಷಣೆ ಕೂಗುತ್ತಾ ಉತ್ಸಾಹ ಹೆಚ್ಚಿಸಲಾಗುತ್ತಿತ್ತು. ಬೀಸಣಿಗೆ ಮೂಲಕ ಗಾಳಿ ಬೀಸುವ ಮೂಲಕ ಭಕ್ತ ಉತ್ಸಾಹ ಕಡಿಮೆಯಾಗದಂತೆ ಇತರರು ನೋಡಿಕೊಳ್ಳುತ್ತಿದ್ದರು. ಪ್ರತಿಬಾರಿ ರಥೋತ್ಸವ ಕೊನೆಗೊಳ್ಳುವುದು ತಡವಾಗುತ್ತಿತ್ತು. ಈ ಬಾರಿ ಬಹುಬೇಗ ಮುಗಿದಿರುವುದು ಈ ವರ್ಷದ ವಿಶೇಷವಾಗಿದೆ. ಭಕ್ತರಿಗಾಗಿ ದೇವಾಲಯದ ವತಿಯಿಂದ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಾನಕ ವಿತರಣೆ: ರಥೋತ್ಸವ ಮುಗಿಯುತ್ತಿದ್ದಂತೆ ಭಕ್ತರು ಉರುಳುಸೇವೆ, ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಭಕ್ತರ ಹಸಿವು ನೀಗಿಸಲು ಶ್ರೀಕಂಠೇಶ್ವರ ಸೇವಾ ಸಂಘ, ನೆಸ್ಲೆ, ಜುಬಿಲಿಯಂಟ್, ಬ್ರಾಹ್ಮಣ ಧರ್ಮ ಸಹಾಯ ಸಭಾ ಸೇರಿದಂತೆ ವಿವಿಧ ಸಂಘ ಸಂಸ್ಥೆ ವತಿಯಿಂದ ಪ್ರಸಾದ ವಿತರಿಸಿದರು. ಕೆಲವರು ಕುಡಿಯುವ ನೀರು, ಮಜ್ಜಿಗೆ, ಪಾನಕ ವಿತರಿಸಿ ಭಕ್ತರ ದಾಹ ನೀಗಿಸಿದರು.
ಇನ್ನು ಬೈಪಾಸ್ ರಸ್ತೆಯಲ್ಲಿ ಜನದಟ್ಟನೆ ಹೆಚ್ಚಾಗಿದ್ದರಿಂದ ಚಾಮರಾಜನಗರ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಚಾಮರಾಜನಗರ ಭಾಗದ ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲದೇ ಇದ್ದರಿಂದ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು. ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಎಸ್ಪಿ ಅಮಿತ್ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶಾಸಕರಾದ ಕಳಲೆ ಎನ್.ಕೇಶವಮೂರ್ತಿ, ಜಿಲ್ಲಾಧಿಕಾರಿಗಳಾದ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿಯಾದ ಯೋಗೀಶ್, ಉಪ ವಿಭಾಗಾಧಿಕಾರಿಯಾದ ಶಿವೇಗೌಡ, ತಹಶೀಲ್ದಾರ್ ಸೂರಜ್, ದೇವಾಲಯ ಇಒ ಎಚ್.ಎಂ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಎಸ್.ಮಹದೇವಯ್ಯ ಸೇರಿದಂತೆ ಹಲವರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.