ಗ್ರಾಮ ಪಂಚಾಯತ್ ಗೆ ಬೀಗ ಜಡಿದು ಗ್ರಾ.ಪಂ.ಸದಸ್ಯರಿಂದಲೇ ಪ್ರತಿಭಟನೆ
Team Udayavani, Apr 27, 2022, 8:33 PM IST
ಹುಣಸೂರು : ತಾಲೂಕಿನ ಕಿರಂಗೂರು ಗ್ರಾ.ಪಂ.ನ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರೇ ಮುಂದೆ ನಿಂತು ಗ್ರಾ.ಪಂ.ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ವಾಣಿ, ಉಪಾಧ್ಯಕ್ಷೆ ಶೃತಿರವಿ ನೇತೃತ್ವದಲ್ಲಿ ವರ್ಗಾವಣೆಗೊಂಡಿದ್ದ ಪಿಡಿಓ ಮತ್ತೆ ಗ್ರಾ.ಪಂ.ಗೆ ಮರಳಿ ಬರುತ್ತಿದ್ದಾರೆ ಹಾಗೂ ಕಳೆದ ಮೂರು ತಿಂಗಳಿಂದ ಯಾವುದೇ ಅಭಿವೃದ್ದಿ ಕೆಲಸಗಳಾಗುತ್ತಿಲ್ಲವೆಂದು ಆಕ್ರೋಷಿತರಾದ ಸದಸ್ಯರು ಅನಿವಾರ್ಯವಾಗಿ ಬೀಗ ಜಡಿದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಈ ವೇಳೆ ಅಧ್ಯಕ್ಷೆ ನಿರ್ವಾಣಿ ಮಾತನಾಡಿ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಡಿಓ ಶ್ರೀದೇವಿಯವರು ಎರಡು ವಾರಗಳ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಪಂಗೆ ವರ್ಗಾವಣೆಗೊಂಡಿದ್ದಾರೆ. ಆದರೆ ಅಲ್ಲಿನ ಪಿಡಿಓರವರು ಇವರ ವರ್ಗಾವಣೆಗೆ ತಡೆಯಾಜ್ಞೆ ತಂದ ಪರಿಣಾಮ ಪಿಡಿಒ ಶ್ರೀದೇವಿಯವರು ಅನಿವಾರ್ಯವಾಗಿ ಮತ್ತೇ ಕಿರಂಗೂರು ಗ್ರಾ.ಪಂನಲ್ಲಿ ಮತ್ತೆ ಕಾರ್ಯನಿರ್ವಹಿಸುವಂತಾಗಿದೆ.
ಆದರೆ ಪಿಡಿಒ ಶ್ರೀದೇವಿಯವರು ಗ್ರಾಪಂ.ಗೆ ಸರಿಯಾದ ಬರುವುದಿಲ್ಲ. ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಅಭಿವೃಧ್ದಿ ಕೆಲಸಗಳು ವಿಳಂಬವಾಗುತ್ತಿವೆ. ಕಳೆದ ಎರಡು ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿದ ಬಿದ್ದುಹೋದ ಮನೆಗಳಿಗೆ ಇ.ಸ್ವತ್ತು ನೀಡಲು ಸತಾಯಿಸುತ್ತಿದ್ದಾರೆ. ಗ್ರಾ.ಪಂ.ನ ಆಡಳಿತ ಮಂಡಳಿಯು ಇವರು ಮತ್ತೆ ನಮ್ಮ ಗ್ರಾಪಂಗೆ ಬರುವುದು ಬೇಡ ಹೀಗಾಗಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದೇವೆಂದು ಅಧ್ಯಕ್ಷೆ ನಿರ್ವಾಣಿ ಹಾಗೂ ಸದಸ್ಯರು ಆರೋಪಿಸಿ, ತಾ.ಪಂ.ಇಓ ಗಿರೀಶ್‌ರವರೇ ಮುಂದೆ ನಿಂತು ಇ.ಸ್ವತ್ತು ಕೊಡಿಸಲು ಮುಂದಾಗುವಂತೆ ಮನವಿ ಮಾಡಿದರು.
ಇದನ್ನೂ ಓದಿ : ವಿದ್ಯುತ್ ಪ್ರವಹಿಸಿ ಯುವಕನ ಸಾವು : ಇಂಧನ ಇಲಾಖೆಯ ಮಾರ್ಗಸೂಚಿಯಂತೆ ಪರಿಹಾರ
ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ಶ್ರುತಿರವಿ, ಸದಸ್ಯರಾದ ನಂದಿನಿ, ಮಹದೇವ್, ಹರೀಶ್, ಅಣ್ಣಯ್ಯ, ನಾಗೇಶ್, ಮಂಜುನಾಥ್ ಹಾಗೂ ಮುಖಂಡರಾದ ಶಿವರಾಜ್. ಮಹದೇವ್, ಮಂಜುಹರಳಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಗ್ರಾ.ಪಂ.ಗೆ ಭೇಟಿ ಇತ್ತು ಆರೋಪಗಲ ಬಗ್ಗೆ ಪರಿಶೀಲಿಸುವೆ. ಸರಕಾರದ ನಿರ್ಧೆಶನದಂತೆ ಈ ಹಿಂದಿನ ಪಿಡಿಓ ಮುಂದುವರಿಯಲಿದ್ದಾರೆ ಎಂದು ತಾಪಂ.ಇಓ ಗಿರೀಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.