ಹುಣಸೂರು: ಪ್ರವಾಸಕ್ಕೆ ತೆರಳಿದ್ದ ಬಸ್‌ಪಲ್ಟಿ, ಶಿಕ್ಷಕರು ಸೇರಿ ಹಲವರಿಗೆ ಗಾಯ
Team Udayavani, Dec 15, 2022, 7:35 PM IST
ಹುಣಸೂರು: ಹುಣಸೂರು ತಾಲೂಕಿನ ಧರ್ಮಾಪುರದಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐವರು ಶಿಕ್ಷಕರು, 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಕ್ಕೋಡು ಕ್ರಾಸ್(ತುಮರಿ ಬಳಿಯಲ್ಲಿ)ನಲ್ಲಿ ನಡೆದಿದೆ.
ತಾಲೂಕಿನ ಧರ್ಮಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಿವರುದ್ರಪ್ಪ, ಶಿಕ್ಷಕರಾದ ಕೀರ್ತಿಕುಮಾರಿ, ರವಿ ಕೈಮೂಳೆ ಮುರಿದಿದೆ. ವಿದ್ಯಾರ್ಥಿಗಳಾದ ರಾಜೇಶ್,ದಿವ್ಯರಿಗೆ ಹೆಚ್ಚಿನ ಗಾಯಗಳಾಗಿದ್ದರೆ, ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ಡಿ.13ರಂದು 47 ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಗೆ ಶೈಕ್ಷಣಿಕ ಪ್ರವಾಸ ಹೊರಟಿದ್ದು, ಡಿ.15.ಗುರುವಾರ ಮುಂಜಾನೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರುಳುವ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಪಲ್ಟಿ ಹೊಡೆದಿದೆ. ಮಾರ್ಗದಲ್ಲಿ ಚಲಿಸುತ್ತಿದ್ದ ವಾಹನ ಸವಾರರು ಸ್ಥಳೀಯರ ನೆರವಿನೊಂದಿಗೆ ಸಾಗರ ಆಸ್ಪತ್ರೆ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಶಾಸಕರ ಸ್ಪಂದನೆ:
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಪಿ.ಮಂಜುನಾಥ್ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಗರ ತಾಲೂಕಿನ ಶಾಸಕ ಹರತಾಳು ಹಾಲಪ್ಪರಿಗೆ ಮಾಹಿತಿ ನೀಡಿದ ಮೇರೆಗೆ ತಕ್ಷಣವೇ ಮಾಜಿ ಸಚಿವ ಕಾಗೋಡುತಿಮ್ಮಪ್ಪ ಸೇರಿದಂತೆ ಇತರೆ ಮುಖಂಡರು, ಶಿವಮೊಗ್ಗ ಶಿಕ್ಷಣಇಲಾಖೆ ಅಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಡಾ.ಪರಪ್ಪಬೋನಸ್ ನೇತೃತ್ವದಲ್ಲಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಸಣ್ಣಪುಟ್ಟಗಾಯಗಳಾಗಿದೆ, ಬೆಳಗ್ಗೆ ವಾಪಸ್ ಬರಲಿದ್ದಾರೆ: ಶಾಸಕ ಎಚ್.ಪಿ.ಮಂಜುನಾಥ್ ಮತ್ತು ತಾವು ಅಲ್ಲಿನ ವೈದ್ಯ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ತೊಂದರೆ ಸಂಭವಿಸಿಲ್ಲವೆಂದು ಬಿ.ಇ.ಓ ರೇವಣ್ಣ ತಿಳಿಸಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆದು ಮಾಜಿ ಸಚಿವರು ಹಾಗೂ ಅಲ್ಲಿನ ಶಿಕ್ಷಣಇಲಾಖೆ ಅಧಿಕಾರಿಗಳ ತಂಡ ಒಂದು ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಎರಡು ಟಿ.ಟಿವಾಹನ ವ್ಯವಸ್ಥೆ ಕಲ್ಪಿಸಿ ಎಲ್ಲರನ್ನೂ ಹುಣಸೂರಿಗೆ ಕಳುಹಿಸಿ ಕೊಟ್ಟಿದ್ದು, ಬೆಳಗ್ಗೆ ಹುಣಸೂರಿಗಾಗಮಿಸಲಿದ್ದಾರೆಂದು ಬಿಇಓ ರೇವಣ್ಣ ಉದಯವಾಣಿಗೆ ತಿಳಿಸಿದರು.
ಇದನ್ನೂ ಓದಿ: ಕೆಐಎಫ್ಎಫ್ ಉದ್ಘಾಟಿಸಿದ ಬಿಗ್ ಬಿ; ಶಾರುಖ್, ಬ್ಯಾನರ್ಜಿ, ಗಂಗೂಲಿ ಭಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.