ಹುಣಸೂರು : ಪಕ್ಕದ ಮನೆಯ ಯುವಕನ ಜೊತೆ ಅಕ್ರಮ ಸಂಬಂಧ: ಪತಿಯನ್ನೇ ಕೊಲೆಗೈದ ಪತ್ನಿ
Team Udayavani, Jul 7, 2022, 8:58 PM IST
ಹುಣಸೂರು : ಪಕ್ಕದ ಮನೆಯ ಯುವಕನೊಂದಿಗೆ ಅಕ್ರಮ ಸಂಬಂಧ ವಿರಿಸಿಕೊಂಡಿದ್ದ ಮಹಿಳೆಯೊಬ್ಬಾಕೆ ತನ್ನ ಪತಿ ಮಲಗಿದ್ದ ವೇಳೆ ಸಾಯಿಸಿರುವ ಆಘಾತಕಾರಿ ಘಟನೆ ತಾಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ.
ಹುಂಡಿಮಾಳ ಗ್ರಾಮದ ಲೇ. ವೆಳ್ಳಂಗಿರಿಯವರ ಪತ್ನಿ ರಾಜಮ್ಮರ ಪುತ್ರ ಲೋಕಮಣಿ (36) ಮೃತ ದುರ್ದೈವಿ, ಈತನ ಪತ್ನಿ ಶಿಲ್ಪ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರೆ, ಇಬ್ಬರು ಮಕ್ಕಳು ಅನಾಥವಾಗಿವೆ.
ನಡೆದಿರೋದಿಷ್ಟು:
ರಾಜಮ್ಮನವರು ನೀಡಿರುವ ದೂರಿನಲ್ಲಿ ತಮ್ಮ ಮಗ ಲೋಕಮಣಿಗೆ ೯ ವರ್ಷಗಳ ಹಿಂದೆ ಎಚ್.ಡಿ .ಕೋಟೆ ತಾಲೂಕಿನ ಅಗಸನಹುಂಡಿ ಶಿಲ್ಪ ಎಂಬುವಳೊಂದಿಗೆ ವಿವಾಹವಾಗಿತ್ತು, ಇವರಿಗೆ 6 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ನನ್ನ ಸೊಸೆ ಶಿಲ್ಪಾಳಿಗೆ ನಮ್ಮ ಪಕ್ಕದ ಮನೆಯ ಅಭಿ ಎಂಬಾತನೊಂದಿಗೆ ಅಕ್ರಮ ಸಂಬಂಧ ವಿಟ್ಟುಕೊಂಡಿದ್ದು, ಈ ವಿಚಾರ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಸೊಸೆ ಶೆಲ್ಪ ಕೈಕಾಲು ಹಿಡಿದು, ಮರ್ಯಾದೆ ಹೋಗುತ್ತದೆ ಯಾರಿಗೂ ಹೇಳಬೇಡಿ ತಪ್ಪಾಯಿತು. ಇನ್ನು ಮುಂದೆ ತಪ್ಪು ಮಾಡಲ್ಲವೆಂದು ಹೇಳಿದ್ದರಿಂದ ಸಮಾಧಾನ ಪಟ್ಟುಕೊಂಡು, ಮರ್ಯಾದೆಗೆ ಅಂಜಿ ಅದನ್ನು ಎಲ್ಲೂ ಹೇಳಿರಲಿಲ್ಲ. ಸ್ಪಲ್ಪ ದಿನಗಳ ಕಾಲ ಸರಿಯಾಗಿದ್ದಳು.
ಸುಟ್ಟು ಹಾಕಿದ್ದಾಳೆ : ಜೂ.10 ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ಹಾಲು ಕರೆಯಲು ನನ್ನ ಮಗ ಲೋಕಮಣಿಯನ್ನು ಎಬ್ಬಿಸುವಂತೆ ನನ್ನ ಸೊಸೆ ಶಿಲ್ಪಳಿಗೆ ತಿಳಿಸಿದಾಗ ಅವಳು ನೀವೇ ನಿಮ್ಮ ಮಗನನ್ನು ಎಬ್ಬಿಸಿ ಎಂದು ಹೇಳಿದಳು. ನಾನು ನನ್ನ ಮಗನನ್ನು ಎಬ್ಬಿಸಿದಾಗ ಅವನು ಮಲಗಿದ್ದಲ್ಲಿಯೇ ಸತ್ತು ಹೋಗಿದ್ದನ್ನು ನೋಡಿ ನನಗೆ ಪ್ರಜ್ಞೆ ತಪ್ಪಿದ್ದು, ನನ್ನ ಸೊಸೆಯು ಪತಿ ಲೋಕಮಣಿ ಹೃದಯಘಾತದಿಂದ ನಿಧನ ಹೊಂದಿದ್ದಾರೆಂದು ಊರಿನವರಿಗೆ ನಂಬಿಸಿ ಅವನ ಮೃತದೇಹವನ್ನು ಸಂಬಂಧಿಕರು ಹಾಗೂ ಊರವರ ಸಹಾಯದಿಂದ ಸುಟ್ಟು ಹಾಕಿರುತ್ತಾಳೆ.
ಇದನ್ನೂ ಓದಿ : ಬಾಕಿ ವೇತನ ನೀಡಲು ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಲ ಆಗ್ರಹ
ಬಯಲಾಗಿದ್ದು ಹೇಗೆ : ನನ್ನ ಮಗನ ಸಾವಿನ ನಂತರ ನನ್ನ ಸೊಸೆ ಶಿಲ್ಪ ಹಾಗೂ ಪಕ್ಕದ ಮನೆಯ ಯುವಕ ಅಭಿಯ ನಡವಳಿಕೆಯಲ್ಲಿ ತುಂಬಾ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು, ಅಕ್ರಮ ಸಂಬಂಧಕ್ಕಾಗಿ ನನ್ನ ಮಗನನ್ನು ಕೊಲೆ ಮಾಡಿರುವ ಬಗ್ಗೆ ಅನುಮಾನವಿದ್ದು, ಕ್ರಮ ಕೈಗೊಳ್ಳುವಂತೆ ಹುಣಸೂರು ಗ್ರಾಮಾಂತರ ಪೊಲೀಸರಿಗೆ ರಾಜಮ್ಮ ದೂರು ನೀಡಿದ್ದರಿಂದಾಗಿ ಪ್ರಕರಣ ಬಯಲಾಗಿದೆ.
ಬಂಧನ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಲ್ಪಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಪ್ರಿಯಕರ ಅಭಿ ತಲೆಮರೆಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.