ಹುಣಸೂರು : ಕೊಲೆ ಪಾತಕಿಗಳ ಹೆಡೆಮುರಿ ಕಟ್ಟಿದ ಹುಣಸೂರು ಟೌನ್ ಪೊಲೀಸರು
Team Udayavani, Jul 19, 2022, 9:45 PM IST
ಹುಣಸೂರು : ನಗರದಲ್ಲಿ ಹಾಡುಹಗಲೇ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಹುಣಸೂರು ನಗರದ ಮದರ ಬ್ಲಾಕ್ ಬಳಿಯ ಜನತಾಹೌಸಿಂಗ್ ಬೋರ್ಡ್ ಕಾಲೋನಿಯ ನಿತಿನ್ ಅಲಿಯಾಸ್ ವಠಾರ(23), ಕಲ್ಕುಣಿಕೆಯ ಮನೋಜ್ ಕುಮಾರ್ ಅಲಿಯಾಸ್ ಮೋಟು (24) ಹಾಗೂ ಪೋತರಾಜ್ (25) ಬಂಧಿತರು.
ಘಟನೆ ಹಿನ್ನೆಲೆ : ಇತ್ತೀಚೆಗೆ ಮದುವೆಯಾಗಿದ್ದ ತನ್ನ ಹೆಂಡತಿಯ ಬಗ್ಗೆ ಹುಣಸೂರು ತಾಲೂಕಿನ ಅಂಗಟಹಳ್ಳಿ ಗ್ರಾಮದ ಬೀರೇಶ ಎಂಬುವನು ತನ್ನ ಮೊಬೈಲ್ ಇನ್ಸಾಗ್ರಾಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದನೆಂಬ ಕಾರಣಕ್ಕೆ ನಗರದ ಗೋಕುಲ ರಸ್ತೆಯ ಕುಟ್ಟಿ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಅಲಿಯಾಸ್ ವಠಾರ ಎಂಬಾತ ಜು. 12 ರ ಮಂಗಳವಾರ ಮಧ್ಯಾಹ್ನ 2ರ ವೇಳೆಯಲ್ಲಿ ತನ್ನ ಸ್ನೇಹಿತ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ವಾಸಿ ಮನೋಜ್ ಕುಮಾರ (ಮೋಟು) ಹಾಗೂ ಇನ್ನೊಬ್ಬ ಸ್ನೇಹಿತ ಪೋತರಾಜ್ ಎಂಬುವನ ಹೋಂಡಾ ಆಕ್ಟಿವಾ ಮೋಟಾರ್ ಬೈಕಿನಲ್ಲಿ ಮಾತನಾಡಿಸುವ ನೆಪದಲ್ಲಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಬೀರೇಶನನ್ನು ದ್ವಿಚಕ್ರ ವಾಹನದ ಮಧ್ಯ ಕೂರಿಸಿಕೊಂಡು ಬೈಪಾಸ್ ರಸ್ತೆಯಲ್ಲಿ ಹೊಗುವಾಗ ನಿತಿನ್ ಬೀರೇಶನಿಗೆ ಹಾಡುಹಗಲೇ ಚಾಕುವಿನಿಂದ ಬೀರೇಶನ ಭುಜ, ಕುತ್ತಿಗೆಗೆ ಬಲವಾಗಿ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದರು. ಸಾರ್ವಜನಿಕರು ಬೀರೇಶನನ್ನು ಹುಣಸೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ ಸಾವನ್ನಪ್ಪಿದ್ದ, ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಮದರಸಾಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಚಿಂತನೆ ಸದ್ಯಕ್ಕಿಲ್ಲ: ಸಚಿವ ಬಿ.ಸಿ.ನಾಗೇಶ್
ತಂಡ ರಚನೆ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ. ಆರ್.ಚೇತನ್ ಮಾರ್ಗದರ್ಶನದಲ್ಲಿ ಹುಣಸೂರು ಉಪ-ವಿಭಾಗದ ಡಿವೈಎಸ್ಪಿ ರವಿಪ್ರಸಾದ್, ಹುಣಸೂರು ನಗರ ಠಾಣೆಯ ಇನ್ಸೆಕ್ಟರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೃತ್ಯ ನಡೆದ ದಿನದಂದೇ ಕಾರ್ಯಾಚರಣೆಗಿಳಿದ ತಂಡವು ನಿತಿನ್ ಹಾಗೂ ಮನೋಜ್ ಕುಮಾರನ್ನು ಬೆಂಗಳೂರಿನ ಕೋರಮಂಗಲದಲ್ಲೂ, ಪೂತರಾಜ್ ನನ್ನು ಹಾಸನ ಜಿಲ್ಲೆಯ ಹೊಳೆನರಸೀಪುರದ ದಿಡ್ಡಹಳ್ಳಿಯಲ್ಲಿರುವ ಬಗ್ಗೆ ಮೊಬೈಲ್ ಟವರ್ ಲೊಕೇಶನ್ ಪಡೆದು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ಲಾಘನೆ : ಕೊಲೆ ಪಾತಕಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಎಸ್.ಪಿ, ಆರ್.ಚೇತನ್ ಚೇತನ್. ಅಪರ ಪೊಲೀಸ್ ವರಿಷ್ಟಾಧಿಕಾರಿ ನಂದಿನಿ ಶ್ಲಾಘಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರಭಾಕರ, ಇರ್ಫಾನ್, ಎಎಸ್‌ಐ ಪುಟ್ಟನಾಯಕ, ರಾಜೇಗೌಡ ಮತ್ತು ಎಸ್.ಬಿ ಕರ್ತವ್ಯದ ಸಿಬ್ಬಂದಿ ಪ್ರಸಾದ್ ಇದ್ದರೆಂದು ಇನ್ಸ್ ಪೆಕ್ಟರ್ ಶ್ರೀನಿವಾಸ್ ಉದಯವಾಣಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.